ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಸುಂಕ ಸಮರ ಘೋಷಿಸುತ್ತಿದ್ದಂತೆ ದಶಕದಲ್ಲೇ ಅತೀ ದೊಡ್ಡ ಮಟ್ಟದ ಷೇರು ಮಾರುಕಟ್ಟೆ ಜಗತ್ತಿನಾದ್ಯಂತ ಕುಸಿದಿದ್ದು, ಜಗತ್ತಿನ ಅಗ್ರ 500 ಶ್ರೀಮಂತರು ಸುಮಾರು 208 ಬಿಲಿಯನ್ ಡಾಲರ್ ಅಂದರೆ ಸುಮಾರು 1,70,000 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಅತೀ ಹೆಚ್ಚು ನಷ್ಟಕ್ಕೆ ಒಳಗಾಗಿರುವುದು ಫೇಸ್ ಬುಕ್ ಮತ್ತು ಮೆಟಾ ಸಂಸ್ಥಾಪಕ ಮಾರ್ಕ ಜುಕೆನ್ ಬರ್ಗ್. ಒಟ್ಟು ಸಂಪತ್ತಿನ ಶೇ.9ರಷ್ಟು ಅಂದರೆ 17.9 ಶತಕೋಟಿ ಡಾಲರ್ ನಷ್ಟ ಅನುಭವಿಸಿದ್ದಾರೆ.
ಬ್ಲೂಮ್ ಬರ್ಗ್ ಸಮೀಕ್ಷೆ ಪ್ರಕಾರ 13 ವರ್ಷಗಳಲ್ಲೇ ಷೇರು ಮಾರುಕಟ್ಟೆ ಅತೀ ದೊಡ್ಡ ನಷ್ಟ ಅನುಭವಿಸಿದೆ. ವೈಯಕ್ತಿಕವಾಗಿ 15.9 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದರೆ, ಟ್ರಂಪ್ ಆಪ್ತ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಇಲಾನ್ ಮಸ್ಕ್ ಶೇ.5.5 ಅಂದರೆ 11 ಶತಕೋಟಿ ಡಾಲರ್ ನಷ್ಟ ಕಂಡಿದ್ದಾರೆ.
ಮೈಕೆಲ್ ಡೆಲ್ ($9.53 ಬಿಲಿಯನ್), ಲ್ಯಾರಿ ಎಲಿಸನ್ ($8.1 ಬಿಲಿಯನ್), ಜೆನ್ಸನ್ ಹುವಾಂಗ್ ($7.36 ಬಿಲಿಯನ್), ಲ್ಯಾರಿ ಪೇಜ್ ($4.79 ಬಿಲಿಯನ್), ಸೆರ್ಗೆ ಬ್ರಿನ್ ($4.46 ಬಿಲಿಯನ್) ಮತ್ತು ಥಾಮಸ್ ಪೀಟರ್ಫಿ ($4.06 ಬಿಲಿಯನ್) ಅವರ ಸಂಪತ್ತು ಕುಸಿದ ಅಮೆರಿಕದ ಶತಕೋಟ್ಯಾಧಿಪತಿಗಳು ನಷ್ಟಕ್ಕೆ ಒಳಗಾಗಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆದ ಕಾರಣ ಬಾಂಬೆ ಷೇರು ಮಾರುಕಟ್ಟೆ(BSE) ಸಂವೇದಿ ಸೂಚಂಕ್ಯ ಸೆನ್ಸೆಕ್ಸ್ (Sensex) ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆ (NSE) ಸೂಚಂಕ್ಯ ನಿಫ್ಟಿ (Nifty) ಭಾರೀ ಇಳಿಕೆ ಕಂಡಿದೆ.
ಒಂದು ಹಂತದಲ್ಲಿ ಸಾವಿರ ಅಂಕ ಪತನಗೊಂಡಿದ್ದ ಸೆನ್ಸೆಕ್ಸ್ ನಂತರ ಸ್ವಲ್ಪ ಚೇತರಿಕೆಯಾಗಿತ್ತು. ಕೊನೆಗೆ 930.67 ಅಂಕ ಪತನವಾಗಿ 75,364.69 ರಲ್ಲಿ ತನ್ನ ಇಂದಿನ ವ್ಯವಹಾರ ಮುಗಿಸಿತು. ನಿಫ್ಟಿ 345 ಅಂಕ ಕುಸಿದು 22,904.45 ರಲ್ಲಿ ವ್ಯವಹಾರವನ್ನು ಮುಕ್ತಾಯಗೊಳಿಸಿತು.
ಟಾಟಾ ಸ್ಟೀಲ್, ನ್ಯಾಷನಲ್ ಅಲ್ಯೂಮಿನಿಯಂ, ಹಿಂದೂಸ್ತಾನ್ ಕಾಪರ್, ವೇದಾಂತ, ಭಾರತ್ ಫೋರ್ಜ್ ಮದರ್‌ಸನ್ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಇಳಿಕೆಯಾಗಿವೆ.



