Monday, June 8, 2026
Google search engine
Homeರಾಜ್ಯಕಾಲು ಜಾರಿ ಬಿದ್ದ ಅಳಿಯ, ರಕ್ಷಿಸಲು ಹೋದ ಮಾವ: ಇಬ್ಬರೂ ಸಾವು

ಕಾಲು ಜಾರಿ ಬಿದ್ದ ಅಳಿಯ, ರಕ್ಷಿಸಲು ಹೋದ ಮಾವ: ಇಬ್ಬರೂ ಸಾವು

ಹಾಸನ:ಕಾಲು ಜಾರಿ ಕೆರೆಗೆ ಬಿದ್ದ ಬಾಲಕನ ರಕ್ಷಣೆಗೆ ಹೋದ ಮಾವನೂ ದಾರುಣವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್‌. ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮದ ಪ್ರತೀಕ್ (12) ಹಾಗೂ ಅವರ ಮಾವ ಪ್ರಭಾಕರ್ (45) ಮೃತ ದುರ್ದೈವಿಗಳು. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರತೀಕ್ ಮಾವ ಪ್ರಭಾಕರ್ ಮನೆಗೆ ಬಂದಿದ್ದು ಕೆರೆಯ ಏರಿ ಮೇಲೆ ಮಾವ ಮತ್ತು ಅಳಿಯ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲು ಜಾರಿ ಕೆರೆಗೆ ಪ್ರತೀಕ್ ಬಿದ್ದಿದ್ದಾನೆ.

ಆತನ ರಕ್ಷಿಸಿಲು ಕೆರೆಗೆ ಇಳಿದ ಪ್ರಭಾಕರ್, ಈಜು ಬಾರದ ಕಾರಣ ಅಳಿಯನ ಜೊತೆಗೇ ಜಲ ಸಮಾಧಿ ಆಗಿದ್ದಾರೆ. ಮೃತದೇಹವನ್ನು ಅಗ್ನಿಶಾಮಕದಳದ ಸಿಬ್ಬಂದಿ ಹೊರ ತೆಗೆದಿದ್ದು, ಗಂಡಸಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಮುಳುಗಿ ಇಬ್ಬರು ಸಾವು:

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಪ್ರಾಣಬಿಟ್ಟಿರುವ ಘಟನೆ ಪಿರಿಯಾಪಟ್ಟಣದ ದೊಡ್ಡ ಹರವೆ ಗ್ರಾಮದ ಬಳಿ ನಡೆದಿದೆ. ಗಣೇಶ್ (22) ಮತ್ತು ಇಮ್ರಾನ್ (28) ಮೃತಪಟ್ಟವರಾಗಿದ್ದಾರೆ. ಪಟ್ಟಣದಲ್ಲಿ ಟೈಲ್ಸ್‌ ಮತ್ತು ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಭಾನುವಾರ ಮಧ್ಯಾಹ್ನ ಈಜಲೆಂದು ನದಿಗೆ ತೆರಳಿದ್ದರು.

ಈ ವೇಳೆ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಗಣೇಶ್‌ ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ಇಮ್ರಾನ್‌ ಶವಕ್ಕಾಗಿ ರಾತ್ರಿವರೆಗೆ ಶೋಧ ನಡೆಸಿದರೂ ಪತ್ತೆಯಾಗದಿದ್ದರಿಂದ ಮತ್ತಿ ಸೋಮವಾರ ಬೆಳಿಗೆ ಹುಡುಕಾಟ ನಡೆಸಿ ಹೊರತೆಗೆಯಲಾಗಿದೆ. ಈ ಸಂಬಧ ಬೈಲಕುಪ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments