ಬೀದಿ ನಾಯಿಗಳ ಹಾವಳಿ ತಡೆಯಲು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದರೂ ಸಣ್ಣ ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ.
ದೆಹಲಿಯಲ್ಲಿ ಬೀದಿನಾಯಿಗಳ ಹಾವಳಿ ತಡೆಗಟ್ಟಲು ವಸತಿ ಬಡಾವಣೆಗಳಿಂದ ಸ್ಥಳಾಂತರ ಮಾಡಿ ಹಾಗೂ ಸಂತಾನಹರಣ ಮಾಡಿ ಎಂದು ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬಂದ ಮೇಲ್ಮವಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ಹಿಂದಿನ ಆದೇಶದಲ್ಲೇ ಸಣ್ಣ ಬದಲಾವಣೆ ಮಾಡಿದೆ.
ನ್ಯಾಯಮೂರ್ತಿ ವಿಕ್ರಂನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ನ್ಯಾಯಮೂರ್ತಿ ಎನ್ ವಿ ಅಂಜರಿಯಾ ನೇತೃತ್ವದ ತ್ರಿ ಸದಸ್ಯ ಪೀಠ, ಬೀದಿ ನಾಯಿಗಳನ್ನು ಹಿಡಿದು ಶಿಬಿರಗಳಿಗೆ ಹಾಕಿ. ಆದರೆ ಸಂತಾನಹರಣ ಮಾಡಿದ ನಂತರ ಅವುಗಳನ್ನು ಬಿಟ್ಟುಬಿಡಿ ಎಂದು ತೀರ್ಪು ನೀಡಿದೆ.
ನಾಯಿಗಳನ್ನು ಸಾಕುವವರು ಅವುಗಳು ಬೀದಿಗೆ ಬಾರದಂತೆ ನೋಡಿಕೊಳ್ಳಬೇಕು. ಆಕ್ರಮಣಕಾರಿ ನಾಯಿಗಳ ದಾಳಿಯಿಂದ ರ್ಯಾಬಿಸ್ ರೋಗ ಹರಡುವ ಭೀತಿ ಇದೆ. ಆದ್ದರಿಂದ ಇಂತಹ ನಾಯಿಗಳು ರಸ್ತೆಯಲ್ಲಿ ಓಡಾಡದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಬೀದಿನಾಯಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸೂಕ್ತ ಕಾನೂನು ಅಥವಾ ನಿಯಮ ರೂಪಿಸಬೇಕಾದ ಅವಶ್ಯಕತೆ ಇದೆ. ಬೀದಿನಾಯಿಗಳ ಹಾವಾಳಿಯಿಂದ ಮಕ್ಕಳು ಹಾಗೂ ಜನ ಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ದೆಹಲಿ ಪಾಲಿಕೆಗೆ ಸೂಚನೆ ನೀಡಿದ್ದಾರೆ.



