Thursday, July 2, 2026
Google search engine
Homeವಿದೇಶಶೇ.34ರಷ್ಟು ಆಮದು ಸುಂಕ ವಿಧಿಸಿದ ಚೀನಾ: ಅಮೆರಿಕಕ್ಕೆ ತಿರುಗೇಟು

ಶೇ.34ರಷ್ಟು ಆಮದು ಸುಂಕ ವಿಧಿಸಿದ ಚೀನಾ: ಅಮೆರಿಕಕ್ಕೆ ತಿರುಗೇಟು

ಅಮೆರಿಕದ ಎಲ್ಲಾ ವಸ್ತುಗಳ ಆಮದು ಮೇಲೆ ಚೀನಾ ಏಪ್ರಿಲ್ 10ರಿಂದ ಜಾರಿಗೆ ಬರುವಂತೆ ಶೇ.34ರಷ್ಟು ತೆರಿಗೆ ಹೇರುವ ಮೂಲಕ ತಿರುಗೇಟು ನೀಡಿದೆ.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಶೇ.27ರಷ್ಟು ಹಲವು ದೇಶಗಳ ವಸ್ತುಗಳ ಮೇಲೆ ಸುಂಕ ಹೇರಿದ ಬೆನ್ನಲ್ಲೇ ಚೀನಾ ಕೂಡ ತೆರಿಗೆ ಏರಿಕೆ ಮಾಡುವ ಮೂಲಕ ಸುಂಕ ಸಮರ ಸಾರಿದೆ.

ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ವಸ್ತುಗಳ ಮೇಲೆ ಈಗ ವಿಧಿಸಿರುವ ತೆರಿಗೆ ಮೇಲೆ ಹೆಚ್ಚುವರಿಯಾಗಿ ಶೇ.34ರಷ್ಟು ಸುಂಕ ವಿಧಿಸಲಾಗುವುದು. ಏಪ್ರಿಲ್ 10ರಿಂದ ನೂತನ ಸುಂಕ ಜಾರಿಗೆ ಬರಲಿದೆ ಎಂದು ಚೀನಾ ಶುಕ್ರವಾರ ಘೋಷಣೆ ಮಾಡಿದೆ.

ಇದೇ ವೇಳೆ ಅಮೆರಿಕಕ್ಕೆ ರಫ್ತು ಮಾಡಲಾಗುತ್ತಿರುವ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ವಸ್ತುಗಳ ಮೇಲೂ ತೆರಿಗೆ ವಿಧಿಸಲಾಗಿದೆ. ಅಲ್ಲದೇ ಸುಂಕ ಸಮರ ಸಾರಿರುವ ಅಮೆರಿಕ ವಿರುದ್ಧ ಚೀನಾ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲೂಎಚ್ ಒ)ಗೆ ದೂರು ದಾಖಲಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments