ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್ ಅವರ ಆಶಯದಂತೆ ಬೆಂಗಳೂರಿನ ಬನ್ನೇರುಘಟ್ಟ ರೆಸಾರ್ಟ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು.
ಭಾನುವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದ್ದು, ಸಂಜೆಯವರೆಗೆ ಬನ್ನೇರುಘಟ್ಟ ರೆಸಾರ್ಟ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿದ ನಂತರ ಅಂತ್ಯ ಸಂಸ್ಕಾರ ನೆರವೇರಿದ್ದು, ರಾಯ್ ಅವರ ಪತ್ನಿ, ಮಕ್ಕಳು ಹಣೆಗೆ ಮುತ್ತಿಡುವ ಮೂಲಕ ಕೊನೆಯ ಕಣ್ಣೀರ ವಿದಾಯವನ್ನು ಹೇಳಿದರು.
ಬೆಳಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಸಿ.ಜೆ.ರಾಯ್ ರೆಸಾರ್ಟ್‌ನಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು, ಸ್ನೇಹಿತರು, ಸಂಸ್ಥೆಯ ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ಸಿ.ಜೆ ರಾಯ್ ಅವರ ಅಂತಿಮ ದರ್ಶನ ಪಡೆದರು. ಬಳಿಕ ಸೆಂಟ್ ಜೋಸೆಫ್ ಚರ್ಚ್‌ಗೆ ಮೃತದೇಹ ತೆಗೆದಕೊಂಡು ಹೋಗಿ ಒಂದು ಗಂಟೆ ಪ್ರಾರ್ಥನೆ ಮಾಡಿದರು.
ರೆಸಾರ್ಟ್‌ನಿಂದ ಚರ್ಚ್‌ಗೆ ಮೃತದೇಹ ತಗೆದುಕೊಂಡು ಹೋಗುವಾಗ ಅವರ ನೆಚ್ಚಿನ ಬಿಎಂಡಬ್ಲೂ, ಬೆಂಜ್, ಆಡಿ, ರೋಲ್ಸ್ ರಾಯ್ಸ್ ಸೇರಿದಂತೆ ದುಬಾರಿ ಬೆಲೆಯ ವಿವಿಧ ಕಂಪನಿಯ ಕಾರುಗಳ ಜೊತೆ ಮೆರವಣಿಗೆ ಮಾಡಲಾಯಿತು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಬಂಗಾರಪೇಟೆ ಶಾಸಕ ವೈ.ಎ ನಾರಾಯಣ ಸ್ವಾಮಿ, ಕೇರಳ ರಾಜ್ಯದಿಂದ ಬಂದ ಗಣ್ಯರು ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಜೊತೆಗೆ ಸಿ.ಜೆ. ರಾಯ್ ಅವರ ಸಮಾಜಮುಖಿ ಕೆಲಸ ಬಗ್ಗೆ ಸಚಿವ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನೆನಪಿಸಿಕೊಂಡರು.
ಅಂತ್ಯಸಂಸ್ಕಾರ ಒಂದು ಕಡೆ ಆದರೆ ಮತ್ತೊಂದು ಕಡೆ ಉದ್ಯಮಿ ಸಿ.ಜೆ. ರಾಯ್ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಏನು ಕಾರಣ ಅನ್ನೋದನ್ನ ಪತ್ತೆ ಹಚ್ಚುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ.
\ರಾಯ್ ಆತ್ಮಹತ್ಯೆಗೆ ಕಾರಣವಾಯ್ತಾ ದುಬೈನ ರಿಯಲ್ ಎಸ್ಟೇಟ್ ವ್ಯವಹಾರ ಅನ್ನೋ ಆಯಾಮದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಮಗ ರೋಹಿತ್ ರಾಯ್ ಉಸ್ತುವಾರಿಯಲ್ಲಿ ರಷ್ಯಾ ಮೂಲದ ಕಂಪನಿಯೊಂದಿಗೆ ಸಾವಿರಾರು ಕೋಟಿ ವ್ಯವಹಾರ ನಡೆಸಿದ್ದ. ಮಗ ರೋಹಿತ್ ರಾಯ್ ಹೂಡಿಕೆಯಲ್ಲಿ ನಷ್ಟವಾಗಿತ್ತು.
ರಾಜಕೀಯ ನಾಯಕರು ಹಣ ವಾಪಸ್ ಮಾಡುವಂತೆ ಒತ್ತಡ, ವ್ಯಾಪಾರದ ಬಗ್ಗೆ ಐಟಿ ದಾಳಿಗಳಿಂದ ತೀವ್ರ ಬೇಸತ್ತಿದ್ದ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರಷ್ಯನ್ ಬೇಸ್ಡ್ ಕಂಪನಿಯೊಂದಿಗೆ ವ್ಯವಹಾರ ಶುರುಮಾಡಿದ್ದ ರೋಹಿತ್ ರಾಯ್. ಆದ್ರೆ ನಿರೀಕ್ಷೆ ಮಾಡಿದ್ದ ಲಾಭಕ್ಕಿಂತ ಹೆಚ್ಚಾಗಿ ಕೈ ಸುಟ್ಟುಕೊಳ್ಳುವಂತೆ ಮಾಡಿತ್ತು. ಇದು ಅವರ ಆತ್ಮಹತ್ಯೆಗೆ ಕಾರಣವಾಯ್ತಾ ಅನ್ನೋದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಸಿ.ಜೆ.ರಾಯ್ ಆತ್ಮಹತ್ಯೆಗೆ ಬಳಸಿರುವ ಪಿಸ್ತೂಲ್ ಬೆಲ್ಜಿಯಮ್ ದೇಶ ಪಿಸ್ತೂಲ್ ಆಗಿದ್ದು ಅತ್ಯಂತ ಅಪಕಾರಿ ಪಿಸ್ತೂಲ್ ಹಾಗೂ ಸೌಂಡ್ ಲೆಸ್ ಪಿಸ್ತೂಲ್ ಅನ್ನೋ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಕಂಡು ಬಂದಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



