Wednesday, May 13, 2026
Google search engine
Homeಅಪರಾಧ3 ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

3 ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಮೂರು ಮಕ್ಕಳನ್ನು ನೇಣು ಬೀಗಿದು  ಕೊಂದು ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ರವಿವಾರ ನಡೆದಿದೆ.

ರೂಪಾ ಹನಮಂತ ಗೌಡರ (27) ಇವಳು ಕೌಟುಂಬಿಕ ಕಲಹದಿಂದ ಮನೆಯಲ್ಲಿ ತನ್ನ ಮಕ್ಕಳಾದ ಸಮೃದ್ಧಿ ಹನುಮಂತ ಗೌಡರ(5), ಪ್ರೀತಮ್ ಹನುಮಂತ ಗೌಡರ(4), ಸುಕ್ಷಿತ್ ಹನುಮಂತ ಗೌಡರ(2)  ಅವರನ್ನು ಹಗ್ಗದಿಂದ ನೇಣು ಹಾಕಿ ಸಾಯಿಸಿದ್ದಾಳೆ.

ನಂತರ ತಾನು ಡೀಜಲ್ ಸೇವನೆ ಮಾಡಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನಿಸಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ರೂಪಾಳನ್ನು ಬಾಗಲಕೋಟ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾದಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments