Thursday, September 19, 2024
Google search engine
Homeವಾಣಿಜ್ಯಬೆಂಗಳೂರಿನಲ್ಲಿ ಇವಿ ಡೆಲಿವರಿಯಲ್ಲಿ ಶೇ.100 ಇವಿ ಡೆಲಿವರಿಯತ್ತ ಐಕಿಯಾ ಇಂಡಿಯಾ!

ಬೆಂಗಳೂರಿನಲ್ಲಿ ಇವಿ ಡೆಲಿವರಿಯಲ್ಲಿ ಶೇ.100 ಇವಿ ಡೆಲಿವರಿಯತ್ತ ಐಕಿಯಾ ಇಂಡಿಯಾ!

ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ ಶೇ. 100 ಇವಿ ಡೆಲಿವರಿಯೊಂದಿಗೆ ದೀರ್ಘ ಸ್ಥಾಯಿತ್ವದೆಡೆ ದಿಟ್ಟ ಹೆಜ್ಜೆ ಇಟ್ಟ ಐಕಿಯ ಇಂಡಿಯಾ (IKEA India) ಕೆಲವೇ ತಿಂಗಳುಗಳಲ್ಲಿ ಮುಂಬೈ ಇಂಗಾಲ-ಮುಕ್ತ ಡೆಲಿವರಿ ಗುರಿ ತಲುಪಲಿದೆ. ಇವಿ-ಮೊದಲು ದೃಷ್ಟಿಕೋನದೊಂದಿಗೆ ಎಲ್ಲಾ ಭವಿಷ್ಯತ್ತಿನ ಮಾರುಕಟ್ಟೆಗಳನ್ನು ಪರಿಚಯಿಸಿ ಐಕಿಯಾ ಹೈದರಾಬಾದಿನಲ್ಲಿ 24-ಘಂಟೆ ಡೆಲಿವರಿಯ ಪ್ರಯೋಗ ನಡೆಸುತ್ತಿದೆ

ಜಗತ್ತಿನ ಅತ್ಯಂತ ವಿಶ್ವಸನೀಯ ಗೃಹೋಪಕರಣ ಬ್ರ್ಯಾಂಡ್ ಹಾಗೂ ದೀರ್ಘಕಾಲ ಇರುವಂತಹ ವ್ಯಾಪಾರವನ್ನು ಪ್ರತಿಪಾದಿಸುವ ಸಂಸ್ಥೆಗಳ ಪೈಕಿ ಒಂದಾದ ಐಕಿಯ(IKEA), ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಾದ್ಯಂತ 100% ಇವಿ-ಶಕ್ತಿಯ ಡೆಲಿವರಿಗಳೊಂದಿಗೆ ಭಾರತದ ತನ್ನ ಪ್ರಪ್ರಥಮ ದೊಡ್ಡ ಮೈಲಿಗಲ್ಲು ಸಾಧಿಸಿದೆ. ಅದರ ಮುಂಬೈ ಕಾರ್ಯಾಚರಣೆಗಳು ಇಷ್ಟರಲ್ಲೇ ಈ ಪಡೆ ಸೇರಿಕೊಳ್ಳಲಿದ್ದು, ಸಂಸ್ಥೆಯು ಎಲ್ಲಾ ಹೊಸ ಮಾರುಕಟ್ಟೆಗಳನ್ನೂ  ಇವಿ-ಮೊದಲು ದೃಷ್ಟಿಕೋನದೊಂದಿಗೆ ಪ್ರವೇಶಿಸಲಿದೆ.

ದೆಹಲಿ ಎನ್‌ಸಿಆರ್ ನಲ್ಲಿ ಮೊದಲು ಆರಂಭಿಸುತ್ತದೆ. ತನ್ನ ಜನ್ಮ ನಗರವಾದ ಹೈದರಾಬಾದಿನಲ್ಲಿ ಅದೇ ದಿನ ಡೆಲಿವರಿಯ ಪ್ರಯೋಗವನ್ನು ಕೂಡ ನಡೆಸುತ್ತಿರುವ ಐಕಿಯ, ಮುಂಬರುವ ವರ್ಷದಲ್ಲಿ ತನ್ನ ಎಲ್ಲಾ ಮಾರುಕಟ್ಟೆಗಳಾದ್ಯಂತ ಪ್ರಮಾಣ ಹೆಚ್ಚಿಸುವ ಯೋಜನೆ ಹೊಂದಿದೆ.

ಈ ಮೈಲಿಗಲ್ಲು, ದೀರ್ಘಕಾಲ ಉಳಿಯುವಂತಹ ಸರಪಳಿ ಮೌಲ್ಯಕ್ಕೆ ಐಕಿಯ ಇಂಡಿಯಾದ ಸ್ಥಿರ ಬದ್ಧತೆಯನ್ನು ಪ್ರದರ್ಶಿಸುತ್ತದೆ. 2019ರಲ್ಲಿ ಇವಿ ಪರಿಹಾರಗಳ ವಾಣಿಜ್ಯ ಶೋಧದಿಂದ ಹಿಡಿದು, 2023ರಲ್ಲಿ 28% ಹಸಿರು ಡೆಲಿವರಿಗಳು ಹಾಗೂ ಈಗ 88% ಇವಿ ಅಳವಡಿಕೆ ಪ್ರಮಾಣದೊಂದಿಗೆ, ಸಂಸ್ಥೆಯು ರಾಷ್ಟ್ರವ್ಯಾಪಿಯಾಗಿ ತನ್ನ ಇಂಗಾಲ ಹೆಜ್ಜೆಗುರುತನ್ನು ಕಡಿಮೆ ಮಾಡುವತ್ತ ಧಾಪುಗಾಲು ಹಾಕುತ್ತಿದೆ. ಈ ಪ್ರಯತ್ನಗಳ ಮೂಲಕ ಐಕಿಯ ಇಂಡಿಯಾ, ಪರಿಸರ ಸ್ವರೂಪದಲ್ಲಿ ಜವಾಬ್ದಾರಿಯುತವಾದ ಕಾರ್ಯಾಚರಣೆಗಳಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿ, ಇನ್ನೂ ಹೆಚ್ಚು ಹಸಿರುಯುಕ್ತ ಭವಿಷ್ಯತ್ತಿಗೆ ಮಾರ್ಗ ಕಲ್ಪಿಸುತ್ತಿದೆ.

ಭಾರತದಲ್ಲಿ ಪ್ರಬಲವಾದ ಇವಿ ಪರಿಸರವ್ಯವಸ್ಥೆಯನ್ನು ಸಹಸೃಷ್ಟಿ ಮಾಡುವ ಮೂಲಕ ಭಾರತದ ಇವಿ ಪರಿವರ್ತನೆಯಲ್ಲಿ ಐಕಿಯ ಮುನ್ನೆಲೆಯಲ್ಲಿದೆ; ಇಂಗಾಲ ಹೊಗೆಯುಗುಳುವಿಕೆಯನ್ನು ಕಡಿಮೆ ಮಾಡಿ, ಹವಾಮಾನ ನಿಯಂತ್ರಣವನ್ನು ಮುನ್ನಡೆಸುವುದಕ್ಕೆ ಇದು ಅತ್ಯಾವಶ್ಯಕವಾದ ಕ್ರಮವಾಗಿದೆ. ತನ್ನ ಕಾರ್ಯಜಾಲ ಪರಿವರ್ತನೆಯ ಪ್ರಮಾಣ ಹೆಚ್ಚಿಸಲು ಐಕಿಯ, ವಿನೂತನವಾದ ಸಂಚಾರ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಸಣ್ಣ ಹಾಗೂ ಮಧ್ಯಮ-ಗಾತ್ರದ ವ್ಯಾಪಾರ ಸಂಸ್ಥೆಗಳು ಹಾಗೂ ಸ್ಟಾರ್ಟ್‌ಅಪ್‌ಗಳೂ ಒಳಗೊಂಡಂತೆ, ಭಾರತದ ಸ್ಥಳೀಯ ಮೂಲ ಸಾಧನ ಉತ್ಪಾನದಕರುಗಳೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿದೆ.  ಈ ಪ್ರಯತ್ನಗಳು, ಪ್ರಬಲವಾದ ಸ್ಥಳೀಯ ಆರ್ಥಿಕತೆಯನ್ನು ಸೃಷ್ಟಿಸಿ, ಉದ್ಯೋಗ ಸೃಷ್ಟಿಯನ್ನು ಮುನ್ನಡೆಸಿ, ಸಣ್ಣ ಉದ್ಯಮಗಳೂ ಕೂಡ ಜಾಗತಿಕ ಉದ್ಯಮ ಮುಂದಾಳು ಸಂಸ್ಥೆಗಳ ಜೊತೆಜೊತೆಗೇ ಇರುವಂತೆ ಅವುಗಳನ್ನು ಸಬಲಗೊಳಿಸಲು ನೆರವಾಗುತ್ತವೆ.

ಐಕಿಯ ಇಂಡಿಯಾದ ಸಿಇಒ ಮತ್ತು ಚೀಫ್ ಸಸ್ಟೇನಬಿಲಿಟಿ ಆಫಿಸರ್ ಸುಸಾನ್ ಪಲ್ವರರ್, “ಐಕಿಯಗೆ, ದೀರ್ಘಕಾಲ ಉಳಿಯುವಂತಹ ಮೌಲ್ಯ ಸರಪಳಿಯು, ನಮ್ಮ ಪಯಣದ ಅತ್ಯಾವಶ್ಯಕ ಭಾಗವಾಗಿದೆ. ಆ ಪ್ರಯತ್ನದ ನಿಟ್ಟಿನಲ್ಲಿ ಇದು ಅನೇಕ ಮೈಲಿಗಲ್ಲುಗಳ ಪೈಕಿ ಒಂದಾಗಿದ್ದು, ಭಾರತದಲ್ಲಿ ನಮ್ಮ ಪ್ರಾರಂಭಿಕ ವರ್ಷಗಳಿಂದಲೂ ಇವಿ ಪಯಣವನ್ನು ಮುನ್ನಡೆಸುತ್ತಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಲಾಭ ಮತ್ತು ಭೂಮಿ ಎರಡನ್ನೂ ಸಹಸೃಷ್ಟಿ ಮಾಡಬಹುದು ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ ಮತ್ತು ಇದೇ ಮನೋಭಾವದೊಂದಿಗೆ ಮುನ್ನೆಲೆಯಲ್ಲಿರುತ್ತೇವೆ.” ಎಂದು ಹೇಳಿದರು.

ಐಕಿಯ ಇಂಡಿಯಾದ, 100% ಎಲೆಕ್ಟ್ರಿಕ್ ಕೊನೆ-ಮೈಲಿ ಡೆಲಿವರಿಗೆ ಪರಿವರ್ತನೆಯು, ದೀರ್ಘಕಾಲ ಇರುವಂತಹ ಹಾಗೂ ಸುರಕ್ಷಿತವಾದ ಭವಿಷ್ಯತ್ತಿನೆಡೆಗೆ ಒಂದು ವಿನೂತನ ಹೆಜ್ಜೆಯಾಗಿದೆ. 2019ರಲ್ಲಿ  ತನ್ನ ಡೆಲಿವರಿ ಫ್ಲೀಟ್‌ಗಳಲ್ಲಿ ಐಕಿಯ ವಿದ್ಯುತ್ ವಾಹನಗಳನ್ನು ಆರಂಭಿಸಿದಂತಹ ವರ್ಷದಿಂದಲೇ ಶೂನ್ಯ ಹೊಗೆಯುಳುವಿಕೆಯ ಪಯಣ ಆರಂಭವಾಯಿತು. ಆರಂಭದಲ್ಲಿ, ಸಾವಿರಾರು ಆರ್ಡರ್ ಗಳನ್ನು ಸರಬರಾಜು ಮಾಡಲು, ಮಳಿಗೆಯು 3-ಚಕ್ರಗಳ ಟುಕ್ ಟುಕ್ ಗಾಡಿಗಳನ್ನು ಪರಿಚಯಿಸಿತ್ತು. ದೊಡ್ಡ ಪೀಠೋಪಕರಣ ಡೆಲಿವರಿಗಳನ್ನು ಪೂರೈಸಲು ಸಂಸ್ಥೆಯು, ತನ್ನ ಕಾರ್ಯಾಚರಣೆಗಳಲ್ಲಿ ರೆಟ್ರೋಫಿಟ್ ಮಾಡಲಾದ ಟ್ರಕ್‌ಗಳನ್ನು ಬಳಸುವುದರ ಜೊತೆಗೆ, ಈ ವಿದ್ಯುತ್ ವಾಹನಗಳ ಚಾರ್ಜಿಮ್ಗ್‌ಗಾಗಿ ಇನ್-ಹೌಸ್ ಮೂಲಸೌಕರ್ಯವನ್ನೂ ಸ್ಥಾಪಿಸಿತ್ತು. ದೊಡ್ಡ ಪ್ರಮಾಣದಲ್ಲಿ ಇವಿ ಅಳವಡಿಕೆಯನ್ನು ಮಾಡುವ ಮೂಲಕ ಐಕಿಯ ಇಂಡಿಯಾ, ಉತ್ಪಾದಕರುಗಳು, ಭಾಗೀದಾರರು, ಡೆಲಿವರಿ ಡ್ರೈವರುಗಳು ಹಾಗೂ ಎಲ್ಲರಿಗೂ ಹಸಿರು ಶಕ್ತಿ ಮೂಲಸೌಕರ್ಯ ಯೋಜನೆ ಒಳಗೊಂಡಂತೆ, ಇನ್ನೂ ದೊಡ್ಡ ಪರಿಸರ ವ್ಯವಸ್ಥೆಗೆ ಪ್ರೇರಣೆ ಒದಗಿಸುವ ಗುರಿ ಹೊಂದಿದೆ.

ಈ ಬೆಳವಣಿಗೆಯ ಕುರಿತು ಮಾತನಾಡುತ್ತಾ, ಐಕಿಯ ಇಂಡಿಯಾದ ಕಂಟ್ರಿ ಕಸ್ಟಮರ್ ಫುಲ್‌ಫಿಲ್‌ಮೆಂಟ್ ಮ್ಯಾನೇಜರ್ ಸೈಬಾ ಸೂರಿ, “ಐಕಿಯ ಇಂಡಿಯಾದಲ್ಲಿ ಲಾಜಿಸ್ಟಿಕ್ಸ್‌ಅನ್ನು ವಿದ್ಯುತ್ತೀಕರಣಗೊಳಿಸುವ ನಮ್ಮ ದೂರದೃಷ್ಟಿಯು, ಇವಿಗಳ ಅಳವಡಿಕೆಯಾಚೆಗೂ ಹೋಗುತ್ತದೆ- ಒಂದು ಸಮರ್ಥವಾದ ಮೂಲಸೌಕರ್ಯ, ಕೌಶಲ್ಯ ನಿರ್ಮಾಣ ಯೋಜನೆಗಳು ಮತ್ತು ಮೌಲ್ಯ ಸರಪಳಿಯಲ್ಲಿ ಎಲ್ಲರಿಗೂ ಭವಿಷ್ಯತ್ತಿನ ಅವಕಾಶಗಳ ನಿರ್ಮಾಣದ ಮೇಲೆ ನಾವು ಗಮನ ಕೇಂದ್ರೀಕರಿಸುತ್ತಿದ್ದೇವೆ. ಇವಿ-ಮೊದಲು ದೃಷ್ಟಿಕೋನದೊಡನೆ ನಾವು ಭಾರತದಲ್ಲಿ ಬೆಳೆಯುತ್ತಿರುವಂತಹ ಸಂದರ್ಭದಲ್ಲೇ ಐಕಿಯ ಇಂಡಿಯಾ, ಈಗ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಿದ್ಧವಾಗಿದೆ ಮತ್ತು ದೀರ್ಘಾವಧಿ, ವಿನೂತನ ಪರಿಹಾರಗಳಲ್ಲಿ ಹೂಡಿಕೆ ಮಾಡುವುದಕ್ಕೆ ಬದ್ಧವಾಗಿದೆ. ನಮ್ಮೊಂದಿಗೆ ಈ ದೂರದೃಷ್ಟಿಯನ್ನು ಹಂಚಿಕೊಳ್ಳುವ ನಮ್ಮ ಭಾಗೀದಾರರಿಗೆ ನಾವು ನಿಜವಾಗಿಯೂ ಆಭಾರಿಗಳಾಗಿದ್ದೇವೆ. ಹೊಸ ಮಾರುಕಟ್ಟೆಗಳನ್ನು ನಾವು ಪ್ರವೇಶಿಸುತ್ತಿರುವಂತಹ ಸಂದರ್ಭದಲ್ಲಿ, ಈ ಬದಲಾವಣೆಗೆ ನಾವು ಸಜ್ಜುಗೊಂಡಿದ್ದೇವೆ ಎಂಬುದನ್ನು ಖಾತರಿಪಡಿಸಿ, ನಮ್ಮ ಸರಬರಾಜು ಸರಪಳಿಯ ಭವಿಷ್ಯತ್ತಿಗೆ ಅಡಿಪಾಯ ಹಾಕಿಕೊಡುವುದು ನಮ್ಮ ಆದ್ಯತೆಯಾಗಿರುತ್ತದೆ.” ಎಂದು ಹೇಳಿದರು.

ತನ್ನ ಎಲ್ಲಾ ಕಾರ್ಯಾಚರಣೆಗಳಾದ್ಯಂತ 2025ರ ವೇಳೆಗೆ ಶೇ.100ರಷ್ಟು ಇವಿ ಡೆಲಿವರಿಗಳನ್ನು ಸಾಧಿಸುವ ಗುರಿ ಹೊಂದಿರುವ ಸಂಸ್ಥೆಯು, ದೊಡ್ಡ-ಪ್ರಮಾಣದ ಇವಿ ಫ್ಲೀಟ್ ವರ್ಧಿಸಿ, ಸರ್ಕಾರದೊಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಾ, ನಿರಂತರ ಆವಿಷ್ಕಾರವನ್ನು ಮುನ್ನಡೆಸುತ್ತಿದೆ. ಜಾಗತಿಕವಾಗಿ, 2030ರ ವೇಳೆಗೆ ಮೌಲ್ಯ ಸರಪಳಿಯಾದ್ಯಂತ ಧನಾತ್ಮಕ ಹವಾಮಾನ ಸಾಧಿಸಿ, ಹಸಿರುಮನೆ ಹೊಗೆಯುಗುಳುವಿಕೆಯನ್ನು ಅರ್ಧಕ್ಕಿಳಿಸುವ ಗುರಿಯನ್ನೂ, 2050ರ ವೇಳೆಗೆ ನಿವ್ವಳ ಶೂನ್ಯ ಸಾಧಿಸುವ ಗುರಿಯನ್ನೂ ಐಕಿಯ ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments