ವಾಷಿಂಗ್ಟನ್: ಅಮೆರಿಕ ಇಲ್ಲದ ನ್ಯಾಟೊ ಪೇಪರ್ ಮೇಲಿನ ಹುಲಿ ಇದ್ದಂತೆ. ನೀವು ಹೇಡಿಗಳು ಎಂದು ಇರಾನ್ ವಿರುದ್ಧದ ಯುದ್ಧದಲ್ಲಿ ಬೆಂಬಲ ನೀಡದ ನ್ಯಾಟೊ ಒಕ್ಕೂಟ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹರಿಹಾಯ್ದಿದ್ದಾರೆ.
ಪರಮಾಣು ಸಾಮರ್ಥ್ಯದ ಇರಾನ್ ಜಗತ್ತಿಗೆ ಅಪಾಯಕಾರಿ ಎಂದು ಪುನರುಚ್ಚರಿಸಿದ ಟ್ರಂಪ್, ಕನಿಷ್ಠ ನಷ್ಟದೊಂದಿಗೆ ಯುದ್ಧ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಅವರು ಹೇಳಿದರು.
ಹರ್ಮುಜ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ನ್ಯಾಟೋ ದೇಶಗಳು ಯಾವುದೇ ಬೆಂಬಲ ನೀಡಲು ನಿರಾಕರಿಸಿವೆ. ಅಲ್ಲದೇ ಈ ಬಗ್ಗೆ ದೂರವಾಣಿ ಕರೆ ಮಾಡಿ ನ್ಯಾಟೊ ಮುಖ್ಯಸ್ಥರಾದ ಅಮೆರಿಕದ ಮುಖಂಡರೊಂದಿಗೆ ಕನಿಷ್ಠ ಚರ್ಚೆ ಕೂಡ ಮಾಡದೇ ಇರುವುದು ಟ್ರಂಪ್ ಅಸಮಾಧಾನಕ್ಕೆ ಕಾರಣವಾಗಿದೆ.
ಇರಾನ್ ಕುವೈತ್ ತೈಲ ಘಟಕದ ಮೇಲೆ ದಾಳಿ ನಡೆಸಿದ್ದು, ಈ ನಷ್ಟ ಭರ್ತಿ ಮಾಡಲು ಹಾಗೂ ಸರಿಪಡಿಸಲು ಕನಿಷ್ಠ ೫ ವರ್ಷ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ಅಮೆರಿಕದ ಎಫ್ ೩೫ ಯುದ್ಧ ವಿಮಾನ ಹೊಡೆದುರುಳಿರುವುದು ಅಮೆರಿಕದ ಅಸಹನೆ ಹೆಚ್ಚಿದೆ.



