ಮಾರ್ಷಲ್ ಆರ್ಟ್ಸ್ ಪರಿಣಿತ, ಅಪ್ರತಿಮ ಸಾಹಸ ದೃಶ್ಯಗಳ ಮೂಲಕ ಖ್ಯಾತರಾಗಿದ್ದ ಹಾಲಿವುಡ್ ನಟ ಚೌಕ್ ನೊರಿಸ್ ನಿಧನರಾಗಿದ್ದು, ಅವರಿಗೆ 86 ವರ್ಷ ವಯಸ್ಸಾಗಿತ್ತು.
ವಾಕರ್, ಟೆಕ್ಸಾಸ್ ರೇಂಜರ್ಸ್ ಸೇರಿದಂತೆ ಹಲವು ಜನಪ್ರಿಯ ಚಿತ್ರ ಹಾಗೂ ಕಿರುತೆರೆ ಕಾರ್ಯಕ್ರಮಗಳ ಮೂಲಕ ಮನೆ ಮಾತನಾಗಿದ್ದ ಚೌಕ್ ನೊರಿಸ್ ನಿಧನವನ್ನು ಅವರ ಕುಟುಂಬದವರು ದೃಢಪಡಿಸಿದ್ದು, ದಿಢೀರ್ ನಿರ್ಗಮಿಸಿದ್ದಾರೆ ಎಂದು ಹೇಳಿದೆ.
ಚೌಕ್ ನೊರಿಸ್ ಅವರ ಅಂತ್ಯಕ್ರಿಯೆ ಅತ್ಯಂತ ಖಾಸಗಿ ಆಗಿ ನಡೆಯಲಿದೆ. ಇದೊಂದು ಕುಟುಂಬದ ಕಾರ್ಯಕ್ರಮವಾಗಿ ಮಾಡಲು ಸಹಕರಿಸಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಸಿನಿಮಾಗೆ ಬರುವ ಮುನ್ನ ನೊರಿಸ್ ಸ್ಪರ್ಧಾತ್ಮಕ ಮಾರ್ಷಲ್ ಆರ್ಟ್ಸ್ ನಲ್ಲಿ ಖ್ಯಾತಿ ಪಡೆದಿದ್ದು, ಮಿಡ್ಲ್ ವೇಟ್ ಕರಾಟೆ ವಿಭಾಗದಲ್ಲಿ ಸತತ 6 ಬಾರಿ ಚಾಂಪಿಯನ್ ಆಗಿದ್ದರು. ಅಲ್ಲದೇ ತಮ್ಮದೇ ಆದ ಕೊರಿಯನ್ ಮತ್ತು ಅಮೆರಿಕನ್ ಸ್ಟೈಲ್ ಕರಾಟೆ ಶಾಲೆ ಆರಂಭಿಸಿದ್ದರು.
ನೊರಿಸ್ ಆರಂಭಿಸಿದ ಶಾಲೆ ಚುನ್ ಕುಕ್ ಡು ಜಗತ್ತಿನಾದ್ಯಂತ 3300ಕ್ಕೂ ಅಧಿಕ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿತ್ತು. ಬ್ಲಾಕ್ ಬೆಲ್ಟ್ ಸಾಪ್ತಾಹಿಕ ನೊರಿಸ್ ಅವರಿಗೆ ವಿಶೇಷ ಗೌರವ ನೀಡಿ ಸನ್ಮಾನಿಸಿತು.
1940 ಮಾರ್ಚ್ 10ರಂದು ಓಕಲಾಮಾದ ರಿಯಾನ್ ನಲ್ಲಿ ಜನಿಸಿದ್ದ ನೊರಿಸ್ ನಂತರ ಕ್ಯಾಲಿಫೋರ್ನಿಯಾದ ಟೊರೆನ್ಸ್ ಗೆ ಸ್ಥಳಾಂತರಗೊಂಡರು. 1958ರಲ್ಲಿ ಅಮೆರಿಕದ ವಾಯುಪಡೆಗೆ ಸೇರ್ಪಡೆಗೊಂಡರು. ಕೊರಿಯಾದಲ್ಲಿ ಸೇವೆಗೆ ತೆರಳಿದಾಗ ಅಲ್ಲಿ ಕೊರಿಯಾದ ಮಾರ್ಷಲ್ ಆರ್ಟ್ಸ್ ಕಲಿತು ಅದನ್ನೇ ಫ್ಯಾಷನ್ ಆಗಿ ಬೆಳೆಸಿಕೊಂಡರು.



