ಯುದ್ಧದಿಂದ ತತ್ತರಿಸುತ್ತಿರುವ ಮಧ್ಯಪ್ರಾಚ್ಯದ ಮೇಲೆ ಹಿಡಿತ ಸಾಧಿಸಲು ಅಮೆರಿಕ 2500 ಯುದ್ಧ ವಿಮಾನ ಸಾಮರ್ಥ್ಯದ ಮೂರು ಯುದ್ಧ ನೌಕೆಗಳನ್ನು ರವಾನಿಸಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಆರಂಭಿಸಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದು, ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಯುಎಸ್ ಎಸ್ ಬಾಕ್ಸರ್ ಮತ್ತು ಎರಡು ಘಾತಕ ಶಕ್ತಿ ಹೊಂದಿರುವ ಎರಡು ಯುದ್ಧ ನೌಕೆ ಅಲ್ಲದೇ 11ನೇ ಎಕ್ಸ್ ಪೆಂಡಿಷನರ್ ಯೂನಿಟ್ ಸ್ಯಾನ್ ಡಿಯಾಗೊ ಬಂದರಿನಿಂದ ಮಧ್ಯಪ್ರಾಚ್ಯದತ್ತ ಹೊರಟಿವೆ.
ಯುದ್ಧ ನೌಕೆ ಹಾಗೂ ನೌಕಾಪಡೆಗಳಿಗೆ ಬಂದರುಗಳಿಂದ ಹೊರಡಲು ಸೂಚನೆ ನೀಡಲಾಗಿದೆ. ಆದರೆ ಎಲ್ಲಿಗೆ ಹೋಗಬೇಕು ಎಂದು ನಿರ್ದಿಷ್ಟವಾಗಿ ತಿಳಿಸಲಾಗಿಲ್ಲ. ಈ ಮೂರೂ ವಿಭಾಗದ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಸೂಚನೆ ನೀಡಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಇರಾನ್ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದೂ ಅಲ್ಲದೇ ತೈಲ ಘಟಕಗಳ ಮೇಲೆ ದಾಳಿ ಆರಂಭಿಸಿದೆ. ಇದೇ ವೇಳೆ ಅಮೆರಿಕ ಸೇರಿದಂತೆ ವಿವಿಧ ತೈಲ ಹಡಗುಗಳನ್ನು ಧ್ವಂಸಗೊಳಿಸಿ ಅಪಾರ ಹಾನಿ ಉಂಟು ಮಾಡಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಅಮೆರಿಕ ಹರ್ಮುಜ್ ಮೇಲೆ ಹಿಡಿತ ಸಾಧಿಸಲು ನೌಕಾಪಡೆಗಳನ್ನು ರವಾನಿಸುತ್ತಿದೆ ಎಂದು ಹೇಳಲಾಗಿದೆ.



