Thursday, May 14, 2026
Google search engine
Homeಮನರಂಜನೆನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಡಿವೋರ್ಸ್ ಗೆ ಮುಂದಾದ ಪತ್ನಿ ಸ್ವಪ್ನ!

ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು: ಡಿವೋರ್ಸ್ ಗೆ ಮುಂದಾದ ಪತ್ನಿ ಸ್ವಪ್ನ!

ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯ ಜೀವನದಲ್ಲಿ ಬಿರುಕುಗೊಂಡಿದ್ದು, ಪತ್ನಿ ಸ್ವಪ್ನಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಅಜಯ್ ರಾವ್ ವಿರುದ್ಧ ಪತ್ನಿ ಸ್ವಪ್ನಾ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾ ನಿರ್ಮಾಣಕ್ಕಿಳಿದು ನಷ್ಟಕ್ಕೆ ಒಳಗಾಗಿದ್ದ ಅಜಯ್ ರಾವ್ ಇದೀಗ ದಾಂಪತ್ಯ ಜೀವನದಲ್ಲಿ ಏರುಪೇರು ಎದುರಿಸುವಂತಾಗಿದೆ.

2014ರಲ್ಲಿ ಅಜಯ್ ರಾವ್ ಸ್ವಪ್ನಾಳನ್ನು ಪ್ರೀತಿಸಿ ಮದುವೆ ಆಗಿದ್ದರು. ಇದೀಗ 11 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ದಂಪತಿಗೆ ಒಂದು ಗಂಡು ಮಗುವಿದೆ.

ಇತ್ತೀಚೆಗಷ್ಟೇ ದಂಪತಿ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು. ವಿಚ್ಛೇದನಕ್ಕೆ ಪತ್ನಿ ಅರ್ಜಿ ಸಲ್ಲಿಸಿರುವ ವಿಷಯ ಖುದ್ದು ಅಜಯ್ ರಾವ್ ಗೆ ಗೊತ್ತಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಹೌದಾ? ನನಗೆ ಈ ವಿಷಯ ಗೊತ್ತಿಲ್ಲ. ಹೆಂಡ್ತಿ ಹತ್ತಿರನೇ ಕೇಳಿ ಹೇಳ್ತೀನಿ ಎಂದು ಪ್ರತಿಕ್ರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments