Home ಅಪರಾಧ 14 ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್: ಬಂಧಿತರ ಸಂಖ್ಯೆ 22ಕ್ಕೆ ಏರಿಕೆ!

14 ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್: ಬಂಧಿತರ ಸಂಖ್ಯೆ 22ಕ್ಕೆ ಏರಿಕೆ!

by Editor
0 comments
pakistani

ಬೆಂಗಳೂರಿನಲ್ಲಿ ಬಂಧಿಸಿದ್ದ ಪಾಕಿಸ್ತಾನಿ ಪ್ರಜೆಗಳ ಸುಳಿವಿನ ಮೇರೆಗೆ ಬೆಂಗಳೂರು ಪೊಲೀಸರು ದೇಶಾದ್ಯಂತ ಅಡಗಿದ್ದ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ನಂತರ ದಾವಣೆಗೆರೆಯಲ್ಲಿ 5 ಮಂದಿಯನ್ನು ಬಂಧಿಸಿದ್ದರು. ಬಂಧಿತರು ನೀಡಿದ ಸುಳಿವು ಆಧರಿಸಿ ವಿವಿದೆಡೆ ನೆಲೆಸಿದ್ದ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ. ಇದರಿಂದ ದೇಶದಲ್ಲಿ ಅಡಗಿದ್ದ ಪಾಕಿಸ್ತಾನಿ ಪ್ರಜೆಗಳ ಜಾಲ ಮತ್ತಷ್ಟು ವಿಸ್ತರಿಸಿರುವ ಆತಂಕ ವ್ಯಕ್ತವಾಗಿದೆ.

ಭಾರತದಲ್ಲಿ ಪಾಕಿಸ್ತಾನಿ ಪ್ರಜೆಗಳು ನೆಲೆಸಲು ಯೋಜನೆ ಮಾಡುತ್ತಿದ್ದ ಪ್ರಕರಣದ ಕಿಂಗ್ ​ಪಿನ್ ಪರ್ವೇಜ್ ಬಂಧನದಿಂದ ಮತ್ತಷ್ಟು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸುವ ಸಾಧ್ಯತೆ ಇದೆ. ಈಗಾಗಲೇ ಚೆನ್ನೈ, ದೆಹಲಿ, ಹೈದರಾಬಾದ್​ಗೆ ತೆರಳಿದ್ದ ಪೊಲೀಸರ ತಂಡ ಮೆಹದಿ ಫೌಂಡೇಷನ್ ಸಂಪರ್ಕದಲ್ಲಿದ್ದ ಒಟ್ಟು 22 ಮಂದಿಯನ್ನು ಬಂಧಿಸಿ ಅವರನ್ನು ವಿಚಾರಣೆಗೊಳಪಡಿಸಿದೆ.

ಕಳೆದ ಮೂರು ವರ್ಷಗಳಿಂದ ಪೀಣ್ಯದ ಆಂಧ್ರಹಳ್ಳಿ ಮುಖ್ಯರಸ್ತೆಯ ಮನೆಯಲ್ಲಿ ನೆಲೆಸಿದ್ದ ದಂಪತಿ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಸೈಯದ್, ಆತನ ಪತ್ನಿ ಹಾಗೂ ಮಗಳು ಹಿಂದೂಗಳ ಹೆಸರು ಬದಲಿಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು.

banner

ಯೂಟ್ಯೂಬ್​ನಲ್ಲಿ ಧರ್ಮ ಪ್ರಚಾರ 2019ರಲ್ಲಿ ಬೆಂಗಳೂರಿಗೆ ಬಂದಿದ್ದ ಸೈಯದ್ ಮತ್ತು ಕುಟುಂಬ ಅಂದಿನಿಂದ ಧರ್ಮ ಪ್ರಚೋದಕರಾಗಿ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್​ನಲ್ಲಿ ಪ್ರಚಾರ ಕಾರ್ಯ ಮಾಡುತ್ತಾ ಇದ್ದರು. ಇವರು ಭಾರತಕ್ಕೆ 2014ರಲ್ಲೇ ಬಂದಿದ್ದರು. ನಕಲಿ ಹೆಸರಲ್ಲಿ ಆಧಾರ್ ಮಾಡಿಸಿಕೊಂಡಿದ್ದರು ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ದೇವಸ್ಥಾನಕ್ಕೆ 23 ಕೋಟಿ ಕ್ಯಾಷ್, 1 ಕೆಜಿ ಚಿನ್ನದ ಬಿಸ್ಕತ್ತು, ಬೆಳ್ಳಿ ಪಿಸ್ತೂಲು ದಾನ! ವಿಜಯಪುರ: ಕಾರಿಗೆ ಕಬ್ಬು ಕಟಾವು ಮೆಷಿನ್ ಡಿಕ್ಕಿಯಾಗಿ 5 ಮಂದಿ ದುರ್ಮರಣ ಎಲ್ಲಾ ಕೃಷಿ ಉತ್ಪನ್ನ ಕನಿಷ್ಠ ಬೆಂಬಲ ಬೆಲೆಗೆ ಖರೀದಿ: ಕೇಂದ್ರ ಮಹತ್ವದ ಘೋಷಣೆ ಅಂಡರ್ 19 ಏಷ್ಯಾಕಪ್: ಲಂಕೆ ಮಣಿಸಿ ಫೈನಲ್ ಗೆ ಭಾರತ ಲಗ್ಗೆ ಸ್ಟಾರ್ಕ್ 6 ವಿಕೆಟ್‌: ಭಾರತದ ಮೊದಲ ದಿನವೇ 180 ರನ್ ಗೆ ಆಲೌಟ್! ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಓಪನಿಂಗ್: ಎಲ್ಲಾ ದಾಖಲೆ ಮುರಿದ ಪುಷ್ಪ-2 ಹ್ಯಾಟ್ರಿಕ್ ಸೋಲಿನ ಸರದಾರ ನಿಖಿಲ್ ಗೆ ಸ್ಥಳೀಯ ಸಂಸ್ಥೆ ಚುನಾವಣೆಯ ಸಾರಥ್ಯ: ಬಿಜೆಪಿ ಜೊತೆ ಚರ್ಚೆ ಆರಂಭ! ಕಾಂಗ್ರೆಸ್ ಸಂಸದರ ಆಸನದಲ್ಲಿ ನೋಟಿನ ಕಂತೆ ಪತ್ತೆ: ರಾಜ್ಯಸಭೆಯಲ್ಲಿ ಕೋಲಾಹಲ 2025ರ ಶೈಕ್ಷಣಿಕ ಪ್ರವೇಶಾತಿಗೆ ವರ್ಲ್ಡ್ ಯುನಿವರ್ಸಿಟಿ ಆಫ್ ಡಿಸೈನ್ ಸಂಸ್ಥೆಯಿಂದ ಅರ್ಜಿ ಆಹ್ವಾನ Tirupati ತಿರುಪತಿ ಭಕ್ತರಿಗೆ ಸಿಹಿಸುದ್ದಿ: ಕೇಳಿದಷ್ಟು ಸಿಗಲಿದೆ `ಲಡ್ಡು’