ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ದೂರುದಾರ ನೀಡಿದ ಪ್ರಕರಣದ ಶವಗಳ ಮಹಜರು ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ ಮೂಳೆಗಳು ಪತ್ತೆಯಾಗಿವೆ.
ಕಳೆದ ಮೂರು ದಿನಗಳಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಎಸ್ ಐಟಿ ಅಧಿಕಾರುಗಳು ದೂರುದಾರ ಗುರುತಿಸಿದ 13 ಸ್ಥಳದ ಮಹಜರು ನಡೆಸಿದ್ದು, ಗುರುವಾರ ಮಹತ್ವದ ಸಾಕ್ಷ್ಯಗಳು ಲಭಿಸಿವೆ.
ಕಳೆದ 3 ದಿನಗಳಿಂದ ನಡೆದ 5 ಸ್ಥಳದಲ್ಲಿಯಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಗುರುವಾರ 6ನೇ ಸ್ಥಳದಲ್ಲಿ ಅಸ್ಥಿಪಂಜರದ್ದು ಎನ್ನಲಾದ ಎರಡು ಮೂಳೆಗಳು ಪತ್ತೆಯಾಗಿವೆ.
ಎಸ್ ಐಟಿಯ 66 ಸಿಬ್ಬಂದಿ ಗುರುವಾರ ನೇತ್ರಾವತಿ ಸ್ನಾನ ಘಟ್ಟದ ಬಳಿ ಉತ್ಖನನ ಕೆಲಸ ಮಾಡುತ್ತಿದ್ದು, ಸ್ನಾನ ಘಟ್ಟದ 2 ಅಡಿ ಎತ್ತರದ ಪ್ರದೇಶದಲ್ಲಿ ಮೂಳೆಗಳು ಪತ್ತೆಯಾಗಿವೆ.


