Friday, April 25, 2025
Google search engine
Homeಅಪರಾಧಧಾರವಾಡದಲ್ಲಿ 14 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆ!

ಧಾರವಾಡದಲ್ಲಿ 14 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆ!

ಧಾರವಾಡದ ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ 500ರೂ. ಮುಖಬೆಲೆಯ ನಕಲಿ ನೋಟುಗಳ ತೋರುವ ನೋಟುಗಳ ಕಂತೆ ಪತ್ತೆಯಾಗಿದೆ.

500 ಮುಖಬೆಲೆಯ 50 ನೋಟುಗಳ ಬಂಡಲ್‌ ಗಳು ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು 14 ಕೋಟಿ ರೂ., ಎಂದು ಹೇಳಲಾಗಿದೆ. ನಕಲಿ ನೋಟುಗಳ ಜೊತೆ ಹಣ ಎಣಿಸುವ ಯಂತ್ರ ಕೂಡ ಪತ್ತೆಯಾಗಿದೆ.

ಗಾಂಧಿನಗರದಲ್ಲಿರುವ ನೂರ್‌ಜಾನ್‌ ಝುಂಜವಾಡಕರ ಎಂಬವರ ಮನೆಯನ್ನು ಗೋವಾ ಮೂಲದ ಅರ್ಷದ್‌ ಖಾನ್‌ ಎಂಬಾತ ಬಾಡಿಗೆಗೆ ಪಡೆದು ವಾಸವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಮನೆಯಲ್ಲಿ ಇರಲಿಲ್ಲ. ಮನೆಯ ಹಿಂಬಾಗಿಲ ಚಿಲಕ ಸರಿಯಾಗಿ ಹಾಕದೇ ಇರುವುದನ್ನು ಗಮನಿಸಿದ ಸ್ಥಳೀಯರು ಬಾಗಿಲು ತೆರೆದು ನೋಡಿದಾಗ ನಕಲಿ ನೋಟುಗಳು ಪತ್ತೆಯಾಗಿವೆ.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನೋಟುಗಳನ್ನು ಪರಿಶೀಲಿಸಿದಾಗ ಪತ್ತೆಯಾದ ಅಷ್ಟೂ ಹಣ ನಕಲಿ ಎಂದು ದೃಢಪಟ್ಟಿದೆ.

500 ಮುಖಬೆಲೆಯ ನೋಟಿನಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ  ಬದಲು  ‘ರಿವರ್ಸ್‌ ಬ್ಯಾಂಕ್ ಆಫ್‌ ಇಂಡಿಯಾ’ಎಂಬ ಬರಹ ಇದೆ. ಗವರ್ನರ್ ಸಹಿ ಇಲ್ಲ. ನೋಟುಗಳಲ್ಲಿ ಸಂಖ್ಯೆ ಇರುವ ಜಾಗದಲ್ಲಿ ಸೊನ್ನೆಯನ್ನಷ್ಟೇ ನಮೂದಿಸಲಾಗಿದೆ. ‘ಮೂವೀ ಶೂಟಿಂಗ್ ಪರ್ಪೋಸ್‌ ಒನ್ಲಿ’ ಎಂದು ಬರೆದಿರುವ ಶೈನಿಂಗ್ ಪೇಪರ್‌ನಲ್ಲಿ ಈ ನೋಟುಗಳು ಮುದ್ರಿತಗೊಂಡಿವೆ.

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಅರ್ಷದ್‌ ಖಾನ್‌ ನನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments