ಜಾತ್ರೆಯಲ್ಲಿ ಪರಿಚಯವಾಗಿದ್ದ ಪ್ರೇಯಸಿಯನ್ನು ಸಾಫ್ಟ್ ವೇರ್ ಇಂಜಿನಿಯರ್ ಖಾಸಗಿ ಹೋಟೆಲ್ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಂಗೇರಿ ನಿವಾಸಿ 25 ವರ್ಷದ ಯಶಸ್ ಹಾಗೂ 36 ವರ್ಷದ ಎರಡು ಮಕ್ಕಳ ತಾಯಿ ಹರಿಣಿ ಕೊಲೆಯಾಗಿದ್ದಾರೆ.
ಅನೈತಿಕ ಸಂಬಂಧ ಹೊಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಬೆಂಗಳೂರಿನ ಓಯೋ ಹೋಟೆಲ್‌ನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ. ಕೆಂಗೇರಿ ನಿವಾಸಿಗಳಾದ ಯಶಸ್ ಕೊಲೆ ಆರೋಪಿ, ಹರಿಣಿ ಕೊಲೆಯಾದವಳು.
ಪೂರ್ಣ ಪ್ರಜ್ಞಾ ಲೇಔಟ್ ನ ಓಯೋ ಹೋಟೆಲ್ ನಲ್ಲಿ ಸುಮಾರು 17 ಬಾರಿ ಇರಿದು ಕೊಲೆ ಮಾಡಿದ್ದು, ಎರಡು ದಿನಗಳ ನಂತರ ಬೆಳಕಿಗೆ ಬಂದಿದೆ.
ಹರಿಣಿ ಹಾಗೂ ದಾಸೇಗೌಡ ದಂಪತಿ ಕೆಂಗೇರಿಯಲ್ಲಿ ವಾಸವಾಗಿದ್ದರು. ಕೆಂಗೇರಿ ಜಾತ್ರೆಗೆ ಹರಿಣಿ ಕುಟುಂಬ ಸಮೇತ ಹೋಗಿದ್ದಾಗ ಟೆಕ್ಕಿ ಯಶಸ್ ಕೂಡ ಹೋಗಿದ್ದನು. ಜಾತ್ರೆಯಲ್ಲಿ ಅಚಾನಕ್ ಹರಿಣಿಗೆ ಯಶಸ್ ಪರಿಚಯವಾಗಿ ಇಬ್ಬರೂ ಪೋನ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು. ಬಳಿಕ ಸ್ನೇಹ ಬೆಳೆದು, ಚಾಟಿಂಗ್, ಡೇಟಿಂಗ್ ಮಾಡುತ್ತಿದ್ದರು. ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು.
ಹರಿಣಿ ಗಂಡ ದಾಸೇಗೌಡಗೆ ಇವರಿಬ್ಬರ ಅನೈತಿಕ ಸಂಬಂಧ ಗೊತ್ತಾಗಿ ಹರಿಣಿಯ ಪೋನ್ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ. ಕೆಲವು ತಿಂಗಳ ನಂತರ ಗಂಡನ ಕ್ಷಮೆ ಕೇಳಿ ಇನ್ನು ಮುಂದೆ ಇಂತಹ ಕೃತ್ಯಗಳನ್ನು ಮಾಡುವುದಿಲ್ಲ ಎಂದಿದ್ದಳು. ಆಗ ದಾಸೇಗೌಡ ಆಕೆಯನ್ನು ಹೊರ ಬಿಟ್ಟಿದ್ದ.
ಆದರೆ ಹರಿಣಿ ಮತ್ತೆ ಯಶಸ್‌ನನ್ನು ಸಂಪರ್ಕಿಸಿದ್ದಳು. ಯಶಸ್ ಕೂಡ ಹರಿಣಿ ಸಂಪರ್ಕಕ್ಕೆ ಸಿಗದೆ ಹುಚ್ಚನಂತೆ ಆಗಿದ್ದ. ಹೀಗಾಗಿ ಹರಿಣಿ ಸಿಕ್ಕಿದರೆ ಸಾಯಿಸಲು ನಿರ್ಧರಿಸಿ ಚಾಕು ಖರೀದಿಸಿದ್ದನು. ಇಬ್ಬರೂ ಭೇಟಿಯಾದ ಕೂಡಲೇ ಒಯೊ ರೂಮಿಗೆ ಹೋಗುತ್ತಾರೆ. ಯಶಸ್ ಮೊದಲೇ ರಾಯಲ್ಸ್ ಹೊಟೇಲ್ ನಲ್ಲಿ ರೂಮ್ ಬುಕ್ ಮಾಡಿದ್ದನು. ಅಲ್ಲಿ ಹೋಗಿ ಸೆಕ್ಸ್ ಮಾಡಿದ ಬಳಿಕ ನನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದು ಎಂದು ನಿರ್ಧಾರ ಮಾಡಿದ್ದ ಯಶಸ್, ಚಾಕುನಿಂದ ಇರಿದು ಕೊಲೆ ಮಾಡಿ ಪರಾರಿ ಆಗಿದ್ದನು.
ಸುಬ್ರಮಣ್ಯಪುರ ಇನ್ಸ್ ಪೆಕ್ಟರ್ ರಾಜು ಮತ್ತು ತಂಡವು ಎಫ್‌ಎಸ್‌ಎಲ್ ತಂಡ ಕರೆಸಿ ಸಾಕ್ಷ್ಯ ಸಂಗ್ರಹ ಮಾಡಿತ್ತು. ಆರೋಪಿ ಯಶಸ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಹರಿಣಿಗೆ ನನ್ನ ಜೊತೆ ಅನೈತಿಕ ಸಂಬಂಧ ಇತ್ತು. ಗಂಡನಿಗೆ ವಿಚಾರ ಗೊತ್ತಾಗಿದೆ ಎಂದು ನನ್ನಿಂದ ದೂರ ಇರುವ ಪ್ರಯತ್ನದಲ್ಲಿದ್ದಳು. ಹೀಗಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.


