Saturday, June 27, 2026
Google search engine
Homeಕ್ರೀಡೆಚೇಸಿಂಗ್ ವೇಳೆ ಡಗೌಟ್ ನಲ್ಲಿ ನಿದ್ರಿಸುತ್ತಿದ್ದ ಸಿಎಸ್ ಕೆ ಆಟಗಾರ: ವೀಡಿಯೊ ವೈರಲ್!

ಚೇಸಿಂಗ್ ವೇಳೆ ಡಗೌಟ್ ನಲ್ಲಿ ನಿದ್ರಿಸುತ್ತಿದ್ದ ಸಿಎಸ್ ಕೆ ಆಟಗಾರ: ವೀಡಿಯೊ ವೈರಲ್!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ಚೇಸಿಂಗ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಡಗೌಟ್ ನಲ್ಲಿ ನಿದ್ರಿಸುತ್ತಿದ್ದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೆನ್ನೈನ ಚೆಪಾಕ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಂಶ್ ಬೇಡಿ ಡಗೌಟ್ ನಲ್ಲಿ ನಿದ್ರಿಸಿದ್ದಾರೆ. ಪಕ್ಕದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಇದ್ದಾರೆ.

ಚೆನ್ನೈ ತಂಡದ ಪರ ಒಂದು ಪಂದ್ಯದಲ್ಲಿ ಆಡಿರುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ವಂಶ್ ಬೇಡಿ ತಂಡ ಪವರ್ ಪ್ಲೇಯಲ್ಲಿ ರನ್ ಗಳಿಸಲು ತಂಡ ಪರದಾಡುತ್ತಿರುವಾಗ ಡಗೌಟ್ ನಲ್ಲಿ ನಿದ್ರಿಸಿದ್ದಾರೆ.

ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದ ವಂಶ್ ಬೇಡಿ, ಸ್ಪಿನ್ನರ್ ಆಗಿಯೂ ಮಿಂಚಿದ್ದಾರೆ. ಆದರೆ ಇದೀಗ ನಿದ್ರೆಯಿಂದ ಸದ್ದು ಮಾಡುತ್ತಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡಿದ್ದು, 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 183 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯಿತು.

ಡೆಲ್ಲಿ ಕ್ಯಾಪಿಟಲ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳಲ್ಲಿ 1 ಜಯ ಹಾಗೂ 3 ಸೋಲಿನೊಂದಿಗೆ 2 ಅಂಕ ಸಂಪಾದಿಸಿ 8ನೇ ಸ್ಥಾನಕ್ಕೆ ಕುಸಿಯಿತು. ಫಾಫು ಡು ಪ್ಲೆಸಿಸ್ ಬದಲು ಅಖಾಡಕ್ಕೆ ಇಳಿದ ಕೆಎಲ್ ರಾಹುಲ್ 77 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments