Friday, December 12, 2025
Google search engine
Homeಜಿಲ್ಲಾ ಸುದ್ದಿಚಾಮರಾಜನಗರದಲ್ಲಿ 5 ಹುಲಿ ನಂತರ 2 ಹುಲಿ ಮರಿಗಳ ಶವಪತ್ತೆ

ಚಾಮರಾಜನಗರದಲ್ಲಿ 5 ಹುಲಿ ನಂತರ 2 ಹುಲಿ ಮರಿಗಳ ಶವಪತ್ತೆ

ಚಾಮರಾಜನಗರದ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಎರಡು ಹುಲಿ ಮರಿಗಳು ಮೃತಪಟ್ಟಿದ್ದು, ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಶಾಖೆಯ ಹೊಳೆಮೂರ್ದಟ್ಟಿ ಗಸ್ತಿನ ಕಿರಬನಕಲ್ಲುಗುಡ್ಡ ಬಳಿ ಹುಲಿ ಮರಿಗಳ ಶವ ಪತ್ತೆಯಾಗಿದ್ದು, 10 ದಿನಗಳ ಹಿಂದೆಯೇ ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.

ತಾಯಿಯಿಂದ ಬೇಪಟ್ಟ ಹುಲಿಗಳು ಇವಾಗಿದ್ದು, ಸುಮಾರು 10 ದಿನದ ಹಿಂದೆಯೇ ಒಂದು ಹೆಣ್ಣು, ಒಂದು ಗಂಡು ಹುಲಿ ಮರಿಗಳು ಸಾವನ್ನಪ್ಪಿವೆ. ಇವು ಸುಮಾರು 15 ದಿನಗಳಷ್ಟೇ ವಯಸ್ಸಾಗಿತ್ತು ಎಂದು ಹೇಳಲಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನ ವೇಳೆ ಹುಲಿ ಮರಿಗಳ ಸಾವು ಬೆಳಕಿಗೆ ಬಂದಿದೆ. ಎರಡು ಮೂರು ದಿನಗಳ ವ್ಯತ್ಯಾಸದಲ್ಲಿ ಹುಲಿ ಮರಿಗಳು ಸಾವನ್ನಪ್ಪಿದೆ. ಮೃತಪಟ್ಟ ಹುಲಿಗಳ ಮಾದರಿಯನು ಸಂಗ್ರಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments