ಚಿಕ್ಕಬಳ್ಳಾಪುರ: ಪದೇಪದೆ ವಾಹನ ದುರಸ್ತಿಗೆ ಬರುತ್ತಿದ್ದು, ವಾಹನ ರಿಪೇರಿ ಮಾಡಿಕೊಡದ ಡೀಲರ್ ಗೆ ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 25,000 ಸಾವಿರ ರೂ. ದಂಡ ವಿಧಿಸಿದೆ.
ದೂರುದಾರರಾದ ಪ್ರಭು.R.V, ಇವರು ರಾಗಿಮಾಕಲಹಳ್ಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲಾ ನಿವಾಸಿಗಳಾಗಿದ್ದು, ಎದುರುದಾರರಾದ ಪ್ರೇರಣಾ ಮೋಟರ್ ಪ್ರೈವೆಟ್ ಲಿಮಿಟೆಡ್ ಹಾಗೂ ಟಾಟಾ ಮೋಟರ್ ಪ್ಯಸೇಂಜರ್ ವೆಹಿಕಲ್ಸ್ ಲಿಮಿಟೆಡ್ ನಿಂದ ವಾಹನ ಖರೀದಿಸಿದ್ದು, ವಾಹನವು ಪದೇ ಪದೇ ಕೆಟ್ಟು ನಿಲ್ಲುತ್ತಿತ್ತು.
ನೊಂದ ದೂರುದಾರರು, ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಸಿಸಿ ಸಂಖ್ಯೆ:24/2025 ರ ಗ್ರಾಹಕ ದೂರು ನೀಡಿದ್ದು ವಿಚಾರಣೆ ವೇಳೆ ಡೀಲರ್ ಲೋಪ ಕಂಡು ಬಂದಿದೆ.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಕುಮಾರ್.ಎನ್. ಮತ್ತು ಸದಸ್ಯರಾದ ಹೆಚ್.ಜನಾರ್ಧನ್ ಇವರು, ದೂರನ್ನು ಪರಿಶೀಲಿಸಿ ಪ್ರೇರಣಾ ಮೋಟರ್ ಪ್ರೈವೆಟ್ ಲಿಮಿಟೆಡ್ ಹಾಗೂ ಟಾಟಾ ಮೋಟರ್ ಸೇಂಜರ್ ವೆಹಿಕಲ್ಸ್ ಲಿಮಿಟೆಡ್ ಇವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ, ಸೇವಾ ನ್ಯೂನ್ಯತೆ ದೃಢಪಡಿಸಿಕೊಂಡಿತು.
ಕೂಡಲೆ ನಿಗದಿತ ಸಮಯದಲ್ಲಿ ದೂರುದಾರರಾದ ಪ್ರಭು.R.V, ರಾಗಿಮಾಕಲಹಳ್ಳಿ, ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಅವರಿಗೆ ಎದುರುದಾರರು ವಾಹನವನ್ನು ರಿಪೇರಿ ಮಾಡಿಕೊಡಬೇಕಾಗಿ ಹಾಗೂ ರೂ. 25,000/- ದಂಡದ ಹಣ ಮತ್ತು ದಾವೆ ವೆಚ್ಚ ರೂ.8,000 ಗಳನ್ನು ನೀಡಬೇಕೆಂದು ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.



