Saturday, May 16, 2026
Google search engine
Homeಅಪರಾಧಚಹಾ ಕುಡಿಯಲು ಎಬ್ಬಿಸಿದ್ದಕ್ಕಾಗಿ ಜಗಳ: ಅಣ್ಣನ ಕೊಚ್ಚಿ ಕೊಂದ ತಮ್ಮ!

ಚಹಾ ಕುಡಿಯಲು ಎಬ್ಬಿಸಿದ್ದಕ್ಕಾಗಿ ಜಗಳ: ಅಣ್ಣನ ಕೊಚ್ಚಿ ಕೊಂದ ತಮ್ಮ!

ಚಹಾ ಕುಡಿಯಲು ಎಬ್ಬಿಸಿದ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ಹೋಗಿದ್ದು ಸಿಟ್ಟಿಗೆದ್ದ ತಮ್ಮ ಮಚ್ಚಿನಿಂದ ಕೊಚ್ಚಿ ಅಣ್ಣನನ್ನೇ ಕೊಂದು ಮನೆಯಲ್ಲೇ ಗುಂಡಿ ತೋಡಿ ಸಮಾಧಿ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಜಾನ್ಸಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಾಯಿ ತನ್ನ ಹೆತ್ತವರ ಮನೆಗೆ ಭೇಟಿ ನೀಡಲು ಮನೆಯಿಂದ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

ತಮ್ಮ‌ ಮುಸಾಹಿರ್‌ ಬೇಗ್ ಟೀ ಕುಡಿಯಬೇಕು ಎಂದು ಅಣ್ಣ ತಾರೀಖ್‌ ಬೇಗ್ ರೂಮಿಗೆ ಬಂದು ಬಾಗಿಲು ತಟ್ಟಿದ್ದಾನೆ. ನಿದ್ದೆಗೆ ಅಡ್ಡಿಪಡಿಸಿದ್ದಕ್ಕಾಗಿ ತಾರೀಖ್‌ ತಮ್ಮನ ಮೇಲೆ ಕಿರುಚಾಡಿದ್ದಾನೆ. ಈದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ತಮ್ಮ ಮುಸಾಹಿರ್‌ ಕೈಗೆ ಸಿಕ್ಕಿದ ಮಚ್ಚಿನಿಂದ ತಲೆಗೆ ಹೊಡೆದಿದ್ದಾನೆ.

ಅಣ್ಣನನ್ನು ಕೊಂದ ನಂತರ ಯಾರಿಗೂ ತಿಳಿಯಬಾರದು ಎಂದು ಮನೆಯಲ್ಲಿಯೇ ೬ ಅಡಿ ಆಳದ ಗುಂಡಿ ತೋಡಿ ಅದರಲ್ಲಿ ಸಮಾಧಿ ಮಾಡಿದ ನಂತರ ಇಟ್ಟಿಗೆ ಜೋಡಿಸಿ ಮುಚ್ಚಿದ್ದಾನೆ. ಅಷ್ಟು ಸಾಲದು ಎಂಬಂತೆ ಕೆಲವು ದಿನಗಳ ನಂತರ ಅಣ್ಣ ನಾಪತ್ತೆಯಾಗಿದ್ದಾನೆ ಎಂದು ತಾನೇ ಪೊಲೀಸರಿಗೆ ದೂರು ನೀಡಿದ.

ಮುಸಾಹಿರ್‌ ನಡುವಳಿಕೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಾವ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಮುಸಾಹರ್‌ ನನ್ನು ಕರೆದು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ.

ಚಹಾ ಕುಡಿಯುವ ವಿಷಯದಲ್ಲಿ ನಡೆದ ಜಗಳದಲ್ಲಿ ಕೊಲೆ ಮಾಡಿದ್ದಾಗಿ ಹೇಳಿಕೊಂಡಿದ್ದು, ಪೊಲೀಸರು ಮನೆಯೊಳಗೆ ಹೂತಿದ್ದ ಶವವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments