ಹೊಸ ವರ್ಷಾಚರಣೆ ವೇಳೆ ಕುಡಿದು ರಸ್ತೆಯಲ್ಲಿ ಬಿದ್ದಿದ್ದರೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಬಿಡುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಹೊಸ ವರ್ಷಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು,ಕುಡಿದು ಬಿದ್ದವರನ್ನು ಮನೆಗೆ ಬಿಡುವುದಿಲ್ಲ. ಬದಲಾಗಿ ಅಂತಹವರಿಗಾಗಿ ವಿಶ್ರಾಂತಿ ಸ್ಥಳಗಳನ್ನು ನಿಯೋಜಿಸಲಾಗಿದ್ದು, ಅಲ್ಲಿ ಬಿಡಲಾಗುವುದು. ಕುಡಿದ ನಶೆ ಇಳಿದ ನಂತರ ಅವರ ವಿಳಾಸ ಪಡೆದು ಮನೆಗೆ ಕಳುಹಿಸಿಕೊಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಹೊಸ ವರ್ಷಚರಣೆ ವೇಳೆ ಅಹಿತಕರ ಘಟನೆ ನಡೆಯದಂತೆ 3000 ಪೊಲೀಸರನ್ನು ಎಂಜಿ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. 6 ಸಾವಿರ ಸಿಸಿಟಿಟಿ ಕ್ಯಾಮರಾಗಳ ಮೂಲಕ ಚಲನವಲನ ಗಮಿಸಲಾಗುತ್ತಿರುತ್ತದೆ ಎಂದು ಅವರು ಹೇಳಿದರು.



