Wednesday, 18 November 2026 — Kannadavahini
BREAKING NEWS
ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು
ಮನರಂಜನೆ

ಅಡೆತಡೆ ದಾಟಿ ನಾಳೆಯಿಂದ ಜೀ ಕನ್ನಡದಲ್ಲಿ ಬರುತ್ತಿದ್ದಾನೆ `ಕರ್ಣ’!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 27 ವೀಕ್ಷಣೆಗಳು
karna kannada serial

ಬೆಂಗಳೂರು: ಜೀ಼ ಕನ್ನಡ ವಾಹಿನಿಯ ಬಹುನಿರೀಕ್ಷಿತ ಧಾರಾವಾಹಿ ಕರ್ಣ ಎಲ್ಲಾ ಅಡೆತಡೆಗಳನ್ನು ಎದುರಿಸಿ ಇದೇ 3 ಜುಲೈ ರಿಂದ ಬರಲಿದ್ದಾನೆ.

‘ಕರ್ಣ’ ಧಾರಾವಾಹಿಯ ಮೊದಲ ಪ್ರೊಮೊ ಬಿಡುಗಡೆ ಆದ ಸ್ವಲ್ಪ ಹೊತ್ತಿಗೆ ಸಕ್ಕತ್ ವೈರಲ್ ಆಗಿದ್ದು ಕನ್ನಡಿಗರ ಮನಗೆದ್ದಿದೆ. ಸಿನೆಮಾಟೋಗ್ರಫಿ, ನಿರ್ದೇಶನ, ಕಿರಣ್ ರಾಜ್ ನಟನೆ ಬಗ್ಗೆ ಪ್ರೇಕ್ಷಕರು ಅತಿಯಾದ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದು ಸರ್ಪ್ರೈಸ್ ಎಂಬಂತೆ ವಾಹಿನಿ ಭವ್ಯ ಗೌಡ-ಕಿರಣ್ ರಾಜ್ ಹಾಡನ್ನು ಬಿಟ್ಟಿದ್ದು ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರ ಮನದಲ್ಲಿ ಕಚಗುಳಿ ಎಬ್ಬಿಸಿದೆ. ಅಷ್ಟೇ ಅಲ್ಲದೇ ಪ್ರೊಮೊ ಮತ್ತು ಹಾಡು ಎರಡೂ ಸಕ್ಕತ್ ಆಗಿ ಮೂಡಿ ಬಂದಿದ್ದು ಧಾರಾವಾಹಿಯನ್ನು ನೋಡಲು ಜನರು ಹಾತೊರೆಯುತ್ತಿದ್ದಾರೆ.

ಇನ್ನು, ವರುಷಗಳ ನಟ ಕಿರಣ್ ರಾಜ್ ಮರಳಿ ಕಿರುತೆರೆಗೆ ಬರುತ್ತಿರುವುದು ಅವರ ಅಭಿಮಾನಿಗಳಲ್ಲಿ ಉತ್ಸುಕತೆಯನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲದೇ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಭವ್ಯ ಗೌಡ ಮತ್ತು ನಮ್ರತಾ ಗೌಡ ಅವರು ಕಿರಣ್ ರಾಜ್ ಅವರಿಗೆ ಜೋಡಿಯಾಗಿ ನಟಿಸಲಿದ್ದಾರೆ. ಇನ್ನು ಈ ಫ್ರೆಶ್ ಜೋಡಿಯ ಮೋಡಿ ಹೇಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

ಅಷ್ಟೇ ಅಲ್ಲದೇ ಕರ್ಣ ಪ್ರೊಮೊ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಸದ್ದು ಮಾಡಿದ್ದು ಅಲ್ಲದೇ ಕಾಮೆಂಟ್ ಸೆಕ್ಷನ್ ಗಳು ಪಾಸಿಟಿವ್ ಕಾಮೆಂಟ್ ಗಳಿಂದ ತುಂಬಿವೆ. ಶ್ರುತಿ ನಾಯ್ಡು ಪ್ರೊಡ್ಯೂಸ್ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಹಿರಿಯ ನಟರಾದ ಅಶೋಕ್, ನಾಗಾಭರಣ ಸೇರಿ ಹಲವಾರು ದಿಗ್ಗಜರು ಅಭಿನಯಿಸಿದ್ದಾರೆ.

ಅನಾಥವಾಗಿ ಬಿದ್ದಿದ್ದ ತಾತನಿಗೆ ಕೊಟ್ಟ ಮಾತಿನಂತೆ ದೊಡ್ಡವನಾದ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಅಷ್ಟೇ ಅಲ್ಲದೇ ಯಾವ ತಾಯಿಯು ಮಗುವನ್ನು ಕಳೆದುಕೊಳ್ಳಬಾರದು ಮತ್ತು ಯಾವ ಮಗುವು ಅಮ್ಮನಿಲ್ಲದ ತಬ್ಬಲಿಯಾಗಬಾರದು ಎಂಬುದು ಇವನ ಸಿದ್ದಾಂತ.

ಸದಾ ಬಡವರ ಸೇವೆಗೆ ತುಡಿಯುವ ಈ ನಿಷ್ಕಲ್ಮಶ ಮನಸ್ಸಿನ ಕರ್ಣನಿಗೆ ಮನೆಯಲ್ಲಿ ಸಿಕ್ಕಿದ್ದು ಮಾತ್ರ ತಿರಸ್ಕಾರ. ಎಲ್ಲಾ ಆಸ್ತಿಯೂ ತನ್ನ ಹೆಸರಿನಲ್ಲೇ ಇದ್ದರೂ ಕರ್ಣ ಬಯಸುತ್ತಿರುವುದು ಮಾತ್ರ ಅಪ್ಪನ ಪ್ರೀತಿ, ಮಾಯೆಯವರ ವಾತ್ಸಲ್ಯದ ಅಪ್ಪುಗೆ. ಅಜ್ಜಿ ಬಿಟ್ಟು ಮನೆಯಲ್ಲಿರೋ ಎಲ್ಲರಿಗೂ ಕರ್ನನ್ನು ಕಂಡ್ರೆ ಅಷ್ಟಕಷ್ಟೇ. ಕರ್ಣನಿಗೆ ಮನೆಯವರ ಪ್ರೀತಿ ಸಿಗೋದು ಯಾವಾಗ? ಇನ್ನೇನು ಸದ್ಯದಲ್ಲೇ ನಿಮಗೆ ಸಿಗತ್ತೆ!

ನಿಷ್ಕಲ್ಮಶ ಮನಸ್ಸಿನ ಕರ್ಣನಿಗೆ ನಿಷ್ಕಲ್ಮಶ ಪ್ರೀತಿ, ಅಪ್ಪನ ಪ್ರೀತಿ, ಮನೆಯವರ ಒಪ್ಪಿಗೆಯ ಅಪ್ಪುಗೆ ಸಿಗುತ್ತಾ? ತಿಳ್ಕೊಳೋಕೆ ವೀಕ್ಷಿಸಿ ಕರ್ಣ ಇದೇ ಜುಲೈ 03 ರಿಂದ ರಾತ್ರಿ 8 ಗಂಟೆಗೆ

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8423 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment