ಕಾಂಟಾ ಲಾಗಾ ಹಾಡಿನ ಮೂಲಕ ಜನಪ್ರಿಯವಾಗಿದ್ದ ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅವರ ದಿಢೀರ್ ಸಾವಿನ ಸುದ್ದಿಯಿಂದ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಅವರಿಗೆ ದಿಢೀರ್ ಸಾವು ಬರುತ್ತದೆ ಎಂಬ ಸುಳಿವನ್ನು ನೀಡಿದ್ದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
42 ವರ್ಷದ ಶೆಫಾಲಿ ಜರಿವಾಲಾ ಶುಕ್ರವಾರ ಮುಂಬೈನಲ್ಲಿ ದಿಢೀರನೆ ಮೃತಪಟ್ಟಿದ್ದು, ಅವರ ಸಾವಿನ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿವೆ. ಆರಂಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದರೂ ನಂತರ ಬೇರೆ ಕಾರಣದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶೆಫಾಲಿ ಸಾವಿನ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಈ ಹಿಂದೆ ಪಾರಸ್ ಛಬ್ರಾ ಅವರ ಪಾಡ್ ಕಾಸ್ಟ್ ಸಂದರ್ಶನದಲ್ಲಿ ನಿಮ್ಮ `ಕುಂಡಲಿ’ ಜಾತಕದ ಪ್ರಕಾರ ನೀವು ಹಠಾತ್ ಸಾವಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಿರುವ ವೀಡಿಯೋ ವೈಲರ್ ಆಗಿದೆ.
ನಿಮ್ಮ ಜಾತಕದ ಪ್ರಕಾರ 8ನೇ ಮನೆಯಲ್ಲಿ ಚಂದ್ರ, ಬುದ ಕೇತು ಕುಳಿತಿದ್ದಾರೆ. ಚಂದ್ರ ಮತ್ತು ಕೇತು ಸಂಯೋಜನೆ ಆದರೆ ತುಂಬಾ ಕೆಟ್ಟದು ಆಗುತ್ತದೆ. ಚಂದ್ರ ಮತ್ತು ಕೇತು ಕೆಟ್ಟದಾಗಿದೆ. ಇದರ ನಡುವೆ ಬುಧ ಕೂಡ ಕುಳಿತಿರುವುದು ತುಂಬಾ ಅಶುಭವಾಗಿದೆ. ಇದು ಆತಂಕ ಮತ್ತು ನರ ವೈಜ್ಞಾನಿಕ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಪಾರಸ್ ಛಬ್ರಾ ಹೇಳಿದ್ದಾರೆ.
ಇದೇ ವೇಳೆ ಸಂದರ್ಶನದಲ್ಲಿ ಶೆಫಾಲಿ 15ನೇ ವಯಸ್ಸಿನಲ್ಲಿಯೇ ಮೂರ್ಚೆ ರೋಗದಿಂದ ಬಳಲುತ್ತಿರುವುದನ್ನು ಹೇಳಿಕೊಂಡಿದ್ದಾರೆ. ನಿರಂತರ ಚಿಕಿತ್ಸೆ ಮತ್ತು ಧ್ಯಾನದಿಂದ 20 ವರ್ಷಗಳಿಂದ ಮೂರ್ಚೆ ರೋಗದಿಂದ ಮುಕ್ತಳಾಗಿದ್ದೆ ಎಂದು ಅವರು ವಿವರಿಸಿದ್ದಾರೆ.
https://www.instagram.com/reel/DLcRzuto0ja/?utm_source=ig_web_copy_link
10ನೇ ತರಗತಿಯಲ್ಲಿ ಇದ್ದಾಗ ನನಗೆ ಮೊದಲ ಬಾರಿ ಸ್ನಾಯು ಸೆಳೆತ ಕಂಡು ಬಂದಿತ್ತು. ನರ ವೈಜ್ಞಾನಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡುವ ಔಷಧಿಗಳಿವೆ. ನೀವು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಧ್ಯಾನ ಮತ್ತು ಯೋಗ ಸಹಾಯ ಮಾಡುತ್ತದೆ. ನಿಮ್ಮನ್ನು ಶಾಂತಗೊಳಿಸುವುದು ಹೇಗೆ ಎಂದು ನೀವು ಕಲಿಯಬೇಕು ಎಂದು ನೀಡಿದ್ದ ಸಲಹೆಯನ್ನು ನಾನು ಪಾಲಿಸುತ್ತಿದ್ದ. ನಾನು ಈ ಕಾಯಿಲೆ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇನೆ. ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕು, ಮತ್ತು ಅದನ್ನು ಗುಣಪಡಿಸಬಹುದು ಎಂದು ಹೇಳಿಕೊಂಡಿದ್ದರು.
ಶೆಫಾಲಿ ಜರಿವಾಲಾ 2002ರಲ್ಲಿ ಕಾಂಟಾ ಲಗಾ ಹಾಡಿನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿಗೆ ಏರಿದರು, ಈ ಹಾಡಿಗಾಗಿ 7000 ರೂ. ಗೌರವಧನ ಲಭಿಸಿತ್ತು. ಹಣಕ್ಕಿಂತ ಈ ಹಾಡಿನಿಂದ ಜನಪ್ರಿಯತೆ ಲಭಿಸಿತ್ತು. ಆದರೆ ಈ ಹಾಡನ್ನು ತಂದೆ ಯಾವುದೇ ಕಾರಣಕ್ಕೂ ಒಪ್ಪಿರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದರು.


