ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿಯನ್ನು ಕತ್ತರಿಸಿ ಕೊಂದ ಪ್ರಕರಣವನ್ನು ಅರಣ್ಯಾಧಿಕಾರಿಗಳು ಕೊನೆಗೂ ಭೇಧಿಸಿದ್ದು, ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿಯ ಹಸು ಕೊಂದಿದ್ದಕ್ಕೆ ಹುಲಿಯನ್ನು ಕೊಂದು ಸೇಡು ತೀರಿಸಿಕೊಂಡ ನಾಲ್ವರನ್ನು ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಚ್ಚೆದೊಡ್ಡಿ ಹಾಗೂ ಕಾಂಚಳ್ಳಿ ಗ್ರಾಮಕ್ಕೆ ಸೇರಿರುವ ಪಚ್ಚಮಲ್ಲು, ಗೋವಿಂದರಾಜು, ಗಣೇಶ ಹಾಗೂ ಶಂಪು ಅವರನ್ನು ಬಂಧಿಸಲಾಗಿದೆ.
ಹಸುವಿನ ಮಾಲೀಕ ಚಂದು ತಲೆಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಚಂದು ತಮಿಳುನಾಡಿಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಒಂದು ತಂಡ ಅಲ್ಲಿಗೆ ತೆರಳಿದೆ.
ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದ ಇಬ್ಬರು ಕುರಿಗಾಹಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.



