ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವರ್ಷದ ಮೊದಲ ಜಂಟಿ ವಿಧಾನಸಭಾ ಜಂಟಿ ಅಧಿವೇಶನದ ಮೊದಲ ದಿನದಲ್ಲಿ ಪಾಲ್ಗೊಂಡು ಸಾಂವಿಧಾನಿಕ ಬಿಕ್ಕಟ್ಟು ತಪ್ಪಿಸಿದರು. ಆದರೆ ಸರ್ಕಾರ ನೀಡಿದ್ದ ಭಾಷಣ ಪ್ರತಿ ಓದದೇ 2 ನಿಮಿಷದಲ್ಲಿ ಭಾಷಣ ಮುಗಿಸಿ ತಾವು ಅಸಮಾಧಾನ ವ್ಯಕ್ತಪಡಿಸಿದ್ದ 11 ಪ್ಯಾರಾ ಓದದೇ ಜಾರಿಕೊಂಡರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದುಗೊಳಿಸಿ ಜಿ ರಾಮ್ ಜಿ ಯೋಜನೆ ಜಾರಿಗೆ ತಂದಿರುವುದ ಜನ ವಿರೋಧಿಯಾಗಿದೆ ಎಂಬ ಭಾಷಣವನ್ನು ಓದದೇ ರಾಜ್ಯಪಾಲರು 2 ಮಾತಿನಲ್ಲಿ ಭಾಷಣ ಮುಗಿಸಿ ಹೊರನಡೆದರು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರಿಗೆ ಅಡ್ಡಹಾಕಿ ಅವರ ವಿರುದ್ಧ ಘೋಷಣೆ ಕೂಗಿದ್ದರಿಂದ ಹೈಡ್ರಾಮಾ ಸೃಷ್ಟಿಯಾಯಿತು.
ಮುಖ್ಯಮಂತ್ರಿ, ಸ್ಪೀಕರ್ ಮತ್ತು ಇತರರಿಗೆ ಶುಭಾಶಯ ತಿಳಿಸಿದ ರಾಜ್ಯಪಾಲರು, ನನ್ನ ಸರ್ಕಾರವು ರಾಜ್ಯದ ಅರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿಯನ್ನು ದ್ವಿಗುಣ ಮಾಡಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ ಎಂದಷ್ಟೇ ಹೇಳಿ ಭಾಷಣ ಮೊಟಕುಗೊಳಿಸಿ ತೆರಳಿದರು.
ರಾಜ್ಯಪಾಲರ ನಡೆಗೆ ಸದನದ ಸದಸ್ಯರು ಎದ್ದು ನಿಂತರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಕೆಲಕಾಲ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಇದರ ನಡುವೆಯೇ, ಬಿಜೆಪಿ ಸದಸ್ಯರು ಸೇರಿದಂತೆ ಎಲ್ಲರಿಗೂ ನಮಸ್ಕರಿಸುತ್ತ ರಾಜ್ಯಪಾಲರು ಸದನದಿಂದ ಲೋಕಭವನಕ್ಕೆ ಹೋದರು.
ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸರ್ಕಾರದ ಭಾಷಣ ಓದಬೇಕು ಎಂದು ಪಟ್ಟು ಹಿಡಿದು ರಾಜ್ಯಪಾಲರನ್ನು ತಡೆಯಲು ಮುಂದಾದರು. ಈ ವೇಳೆ ನಡೆದ ಗದ್ಧಲದನಡುವೆ ಹರಿಪ್ರಸಾದ್ ಅವರ ಬಟ್ಟೆ ಹರಿದಿದೆ.
ರಾಜ್ಯಪಾಲರು ಭಾಷಣ ಓದದೇ ಇದ್ದರೂ ಜಂಟಿ ಅಧಿವೇಶನಕ್ಕೆ ಆಗಮಿಸಿದ್ದರಿಂದ ಸಾಂವಿಧಾನಿಕ ಬಿಕ್ಕಟ್ಟು ತಪ್ಪಿದಂತಾಗಿದೆ. ಇದರಿಂದ ಒಂದು ವಾರ ಕಾಲ ವಿಶೇಷ ಅಧಿವೇಶನ ನಡೆಯಲಿದೆ.
ಕೇಂದ್ರ ಸರ್ಕಾರದ ವಿರುದ್ಧ ಇದ್ದ ಕೆಲ ಅಂಶಗಳಿಗೆ ಆಕ್ಷೇಪಿಸಿ, ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದರು. ಹೀಗಾಗಿ, ಜಂಟಿ ಅಧಿವೇಶನ ಭಾಷಣದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು. ಈ ಗೊಂದಲದ ಮಧ್ಯೆ ರಾಜ್ಯಪಾಲರು ಕೊನೆಗೂ ಜಂಟಿ ಅಧಿವೇಶನಕ್ಕೆ ಆಗಮಿಸಿದ್ದರು.
ಇದಕ್ಕೂ ಮುನ್ನ ಜಂಟಿ ಅಧಿವೇಶನದ ಭಾಷಣ ಮಾಡಲು ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್ ಅವರನ್ನು ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಅವರು ಗ್ರಾಂಡ್ ಸ್ಟೆಪ್ ಬಳಿ ಬರಮಾಡಿಕೊಂಡರು.
ಈ ವಿಚಾರವಾಗಿ ಸದನದ ಆರಂಭಕ್ಕೂ ಮುನ್ನ ಮಾತನಾಡಿದ್ದ ಸ್ಪೀಕರ್ ಯು.ಟಿ.ಖಾದರ್, ಇಲ್ಲಿವರೆಗೆ ಸಂಘರ್ಷಕ್ಕೆ ರಾಜ್ಯಪಾಲರು ಹೋಗಿಲ್ಲ. ಸಂವಿಧಾನದಕ್ಕೆ ಅನುಗುಣವಾಗಿ ಹೋಗುವ ವಿಶ್ವಾಸವಿದೆ. ಕರ್ನಾಟಕಕ್ಕೆ ವಿಶೇಷ ಗೌರವವಿದೆ. ಇಲ್ಲಿವರೆಗೆ ಸಂಘರ್ಷಕ್ಕೆ ರಾಜ್ಯಪಾಲರು ಹೋಗಿಲ್ಲ. ಸಂವಿಧಾನದಕ್ಕೆ ಅನುಗುಣವಾಗಿ ಹೋಗುವ ವಿಶ್ವಾಸ ಇದೆ. ಸರ್ಕಾರ ರಾಜ್ಯಪಾಲರು ಒಟ್ಟಿಗೆ ಹೋಗಲಿದ್ದಾರೆ. ಸಂಘರ್ಷಕ್ಕೆ ಕಾರಣ ಆಗುವುದಿಲ್ಲ ಎಂದು ಹೇಳಿದ್ದರು.
ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ಸೌಹಾರ್ದತೆಯಿಂದ ಅಧಿವೇಶನ ನಡೆಯುತ್ತದೆ. ರಾಜ್ಯಪಾಲರು ಬರ್ತಾರೆ ಎಂಬ ವಿಶ್ವಾಸ ಇದೆ. ಅವರ ಬದ್ದತೆ ಕಾನೂನು ತಜ್ಞತೆ ಸಹಕಾರ ಮನೋಭಾವ, ಶಿಷ್ಟಾಚಾರದ ಅನುಗುಣವಾಗಿ ಇಬ್ಬರು ಜೊತೆಯಲ್ಲೆ ಹೋಗುತ್ತಾರೆ ಸರ್ಕಾರ ಹಾಗೂ ರಾಜ್ಯಪಾಲರು ಇಬ್ಬರು ಹಠಕ್ಕೆ ಬಿದ್ದಿದ್ದಾರಾ ಎಂಬ ಪ್ರಶ್ನೆಗೆ ಸೌಹಾರ್ದತೆಯಿಂದ ಇದ್ದಾರೆ. ಇಲ್ಲಿ ಹಠದ ಪ್ರಶ್ನೆ ಬರುವುದಿಲ್ಲ ಎಂದಿದ್ದರು.



