ಛತ್ತೀಸ್ ಗಢದ ಬಲೋಡಾ ಬಜಾರ್ ನಲ್ಲಿರುವ ಸ್ಟೀಲ್ ಪ್ಲಾಂಟ್ ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 7 ಕಾರ್ಮಿಕರು ಸಜೀವದಹನಗೊಂಡಿದ್ದಾರೆ.
ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲ್ಲು ಘಟಕದಲ್ಲಿ ಗುರುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ಹೇಳಲಾಗಿದೆ.
ಬಕುಲಾಯಿ ಮೂಲದ ಇಸ್ಪಾತ್ ಸ್ಟೀಲ್ ಪ್ಲಾಂಟ್ ನಲ್ಲಿ ಕಾರ್ಮಿಕರು ಸ್ವಚ್ಚತಾ ಕಾರ್ಯ ಮಾಡುತ್ತಿದ್ದಾಗ ಕಲ್ಲಿದ್ದಲ್ಲು ಘಟಕದಲ್ಲಿ ಸ್ಫೋಟ ಸಂಭವಿಸಿದೆ. ನೇರವಾಗಿ ಕಲ್ಲಿದ್ದಲು ತುಂಡುಗಳು ಮೈಮೇಲೆ ಬಿದ್ದಿದ್ದರಿಂದ ಹಲವು ಕಾರ್ಮಿಕರು ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದುರ್ಘಟನೆ ಸಂಬಂಧ ಕಂಪನಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸ್ಥಳೀಯ ಸರ್ಕಾರ ಪ್ರಕರಣದ ಕುರಿತು ತನಿಖೆಗೆ ಆದೇಶಿಸಿದೆ.



