Sunday, May 17, 2026
Google search engine
Homeದೇಶಕದನ ವಿರಾಮ ಮಾಡಿಸಿದ್ದು ನಾನೇ: 11 ದಿನದಲ್ಲಿ 8 ಬಾರಿ ಟ್ರಂಪ್ ಪುನರುಚ್ಚಾರ

ಕದನ ವಿರಾಮ ಮಾಡಿಸಿದ್ದು ನಾನೇ: 11 ದಿನದಲ್ಲಿ 8 ಬಾರಿ ಟ್ರಂಪ್ ಪುನರುಚ್ಚಾರ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಕದನ ವಿರಾಮದ ಸಂಪೂರ್ಣ ಶ್ರೇಯಸ್ಸು ತನ್ನದೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 11 ದಿನಗಳಲ್ಲಿ ಎಂಟು ಬಾರಿ ಪುನರುಚ್ಚರಿಸಿದ್ದಾರೆ.

ಎರಡೂ ದೇಶಗಳ ಪ್ರಧಾನಿಗಳನ್ನು ಸಮಾನವಾಗಿ ಹೊಗಳಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕದ ದೊಡ್ಡ ವ್ಯಾಪಾರದ ಭರವಸೆಯನ್ನು ಬಳಸಿಕೊಂಡು ಕದನ ವಿರಾಮ ಘೋಷಣೆಗೆ ಕಾರಣವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಗಳ ಬಗ್ಗೆ ಸರಕಾರವಾಗಲೀ ಪ್ರಧಾನಿ ನರೇಂದ್ರ ಮೋದಿ ಅವರಾಗೀ ಚಕಾರ ಎತ್ತದಿರುವುದಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ.

ಕಾಂಗ್ರೆಸ್ನಿಂದ ಕಟು ಟೀಕೆ:

ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಜೈರಾಮ್ ರಮೇಶ್, ಟ್ರಂಪ್ರ ಹೇಳಿಕೆಗಳ ಬಗ್ಗೆ ಪ್ರಧಾನಿ ಮೋದಿಯವರ ಭಯಾನಕ ಮೌನವನ್ನು ಪ್ರಶ್ನಿಸಿದ್ದಾರೆ.

ಟ್ರಂಪ್ ತಾವೇ ಕದನ ವಿರಾಮ ಮಾಡಿಸಿದ್ದಾಗಿ ಪದೇ ಪದೇ ಹೇಳುತ್ತಿದ್ದರೂ, ಪ್ರಧಾನಿ ಮೋದಿ ಒಮ್ಮೆಯೂ ಈ ಹೇಳಿಕೆಗಳನ್ನು ತಿರಸ್ಕರಿಸಿಲ್ಲ. ಈ ಮೌನ ಏಕೆ?” ಎಂದು ರಮೇಶ್ ಕೇಳಿದ್ದಾರೆ.

ಮೋದಿ ಟ್ರಂಪ್ರ ಉತ್ತಮ ಸ್ನೇಹಿತರಾಗಿದ್ದರೂ, ಅವರ ಹೇಳಿಕೆಗಳ ಬಗ್ಗೆ ಸಂಪೂರ್ಣ ಮೌನವಾಗಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದಶರ್ಿಯೂ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಗೆ ತಟಸ್ಥ ತಾಣದಲ್ಲಿ ಬೆಂಬಲ ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ, ನಮ್ಮ ವಿದೇಶಾಂಗ ಸಚಿವರೂ ಈ ವಿಷಯದಲ್ಲಿ ಮೌನವಾಗಿದ್ದಾರೆ ಎಂದು ರಮೇಶ್ ಟೀಕಿಸಿದ್ದಾರೆ.

ಟ್ರಂಪ್ ಪುನರುಚ್ಛಾರ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ವ್ಯಾಪಾರದ ಭರವಸೆಯ ಮೂಲಕ ಇತ್ಯರ್ಥಗೊಳಿಸಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ವ್ಯಾಪಾರ ಮಾಡುತ್ತಿದೆ. ಗುಂಡು ಹಾರಿಸುವುದನ್ನು ಮುಂದುವರೆಸಿದರೆ, ಅದಕ್ಕೆ ಯಾವುದೇ ಮಿತಿಯಿರುವುದಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಟ್ಟದಾಗುತ್ತದೆ, ಮತ್ತಷ್ಟು ಗಂಭೀರವಾಗುತ್ತದೆ. ನಾವು ಎರಡೂ ದೇಶಗಳ ಜೊತೆ ಮಾತನಾಡಿದೆವು. ಎರಡು ದಿನಗಳ ನಂತರ ಫಲಿತಾಂಶ ಬಂದಿತು,” ಎಂದು ಟ್ರಂಪ್ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿರುವುದಾಗಿ ಅವರು ಪದೇ ಪದೇ ಒತ್ತಿಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments