Sunday, June 7, 2026
Google search engine
Homeಆರೋಗ್ಯಬೆಂಗಳೂರಿನಲ್ಲಿ ಶೇ.23ರಷ್ಟು ರಕ್ತದೊತ್ತಡ, ಶೇ.78ರಷ್ಟು ಮಂದಿಗೆ ಬೊಜ್ಜು: ವರದಿ

ಬೆಂಗಳೂರಿನಲ್ಲಿ ಶೇ.23ರಷ್ಟು ರಕ್ತದೊತ್ತಡ, ಶೇ.78ರಷ್ಟು ಮಂದಿಗೆ ಬೊಜ್ಜು: ವರದಿ

ಬೆಂಗಳೂರು: ಭಾರತದ ಅತ್ಯಂತ ಸಾಮಾನ್ಯ ಆರೋಗ್ಯದ ತೊಂದರೆಗಳು ಮೊದಲೇ ಪ್ರಾರಂಭವಾಗುತ್ತವೆ ಮತ್ತು ಬಹಳ ದೀರ್ಘಕಾಲ ಗೋಪ್ಯವಾಗಿರುತ್ತವೆ ಎಂದು ಇಂದು ಬಿಡುಗಡೆಯಾದ ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 (ಎಚ್.ಒ.ಎನ್. 2026) ವರದಿ ಹೇಳಿದೆ.

2025ರಲ್ಲಿ ಅಪೋಲೋ ಇಕೊಸಿಸ್ಟಂನಲ್ಲಿ ನಡೆಸಿದ ಮೂರು ಮಿಲಿಯನ್ ಗೂ ಹೆಚ್ಚು ರೋಗತಡೆಯ ಆರೋಗ್ಯದ ಮೌಲ್ಯಮಾಪನಗಳನ್ನು ಆಧರಿಸಿದ ಈ ವರದಿಯು ವ್ಯಕ್ತಿಗಳಿಗೆ ಅವರ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ನೆರವಾಗುವ ರೋಗತಡೆಯ ಆಚೆಗೂ ಇರುವ ಕ್ರಿಯಾಶೀಲ ಆರೋಗ್ಯಸೇವೆ ಕುರಿತು ಮತ್ತು ಅವರ ಅತ್ಯುತ್ತಮ ಆವೃತ್ತಿಯಾಗಲು ಪ್ರಬಲ ದೃಷ್ಟಾಂತ ಒದಗಿಸಿದೆ.

ಭಾರತದ ಆರೋಗ್ಯಕ್ಷೇತ್ರವು ವಿಕಾಸಗೊಳ್ಳುತ್ತಿದ್ದು ಅದರಲ್ಲಿ ಮೂವರು ಯುವ ವಯಸ್ಕರಲ್ಲಿ ಇಬ್ಬರಿಗೆ ಈಗಾಗಲೇ ಎನ್.ಸಿ.ಡಿ.ಗಳ ರಿಸ್ಕ್ ಇದೆ. ದುಡಿಯುವ ಜನಸಂಖ್ಯೆಯಲ್ಲಿ ಸುಮಾರು ಅರ್ಧರಷ್ಟು ಮಂದಿ ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ ಮತ್ತು 10 ಮಂದಿಯಲ್ಲಿ 8 ಮಂದಿ ಅತಿಯಾದ ತೂಕ ಹೊಂದಿರುವುದು ಜೀವನಶೈಲಿ-ಪ್ರೇರಿತ ಸುಧಾರಣೆಗೆ ಸ್ಪಷ್ಟ ಅವಕಾಶಗಳನ್ನು ಪ್ರಸ್ತುತಪಡಿಸಿದೆ.

ಲಿಂಗ ಸಂಬಂಧಿತ ಒಳನೋಟಗಳು ಮತ್ತು ಬಿ12 ಕೊರತೆಗಳು ಕುಸಿಯುತ್ತಿರುವ ಫಿಟ್ನೆಸ್ ಅಂತರಗಳೊಂದಿಗೆ ಈ ಸದ್ದಿಲ್ಲದ ಆರೋಗ್ಯದ ತೊಂದರೆಗಳನ್ನು ಮತ್ತಷ್ಟು ಹೆಚ್ಚಿಸಿವೆ. ವಯಸ್ಸು, ಲಿಂಗ ಮತ್ತು ಜೀವನಶೈಲಿಯೊಂದಿಗೆ ರಿಸ್ಕ್ ಗಳು ವ್ಯತ್ಯಾಸಗೊಳ್ಳುವುದರಿಂದ ಬರೀ ಪ್ರತ್ಯೇಕ ರೋಗಲಕ್ಷಣಗಳಲ್ಲದೆ ಇಡಿಯಾಗಿ ವ್ಯಕ್ತಿಯನ್ನು ನೋಡುವುದು ಅರ್ಥಪೂರ್ಣ, ದೀರ್ಘಕಾಲೀನ ಆರೋಗ್ಯದ ಪರಿವರ್ತನೆ ತರಲು ಮುಖ್ಯವಾಗಿದೆ.

ಬೆಂಗಳೂರಿನಲ್ಲಿ ದತ್ತಾಂಶದಿಂದ ನಿರ್ದಿಷ್ಟ ಆರೋಗ್ಯದ ಮಾದರಿಗಳು ಹೊರಹೊಮ್ಮುತ್ತಿವೆ. ಪರೀಕ್ಷೆಗೆ ಒಳಪಟ್ಟವರಲ್ಲಿ ಮಧುಮೇಹವು ಶೇ.17ರಷ್ಟು, ರಕ್ತದೊತ್ತಡ ಶೇ.23ರಷ್ಟು ಜನಸಂಖ್ಯೆಗೆ ಬಾಧಿಸಿದೆ. ರಕ್ತಹೀನತೆ ಶೇ.14ರಷ್ಟು ಮಂದಿಯಲ್ಲಿ ಕಂಡು ಬಂದಿದೆ ಮತ್ತು ಪರೀಕ್ಷೆಗೆ ಒಳಪಟ್ಟ ಶೇ.78ರಷ್ಟು ಮಂದಿ ಬೊಜ್ಜು ಹೊಂದಿದ್ದಾರೆ. ಈ ಅಂಕಿ ಅಂಶಗಳು ಉದ್ದೇಶಿತ ಆರೋಗ್ಯದ ಮಧ್ಯಪ್ರವೇಶಗಳ ಅಗತ್ಯ ಮತ್ತು ನಗರದ ಒಳಗಡೆ ಈ ಆರೋಗ್ಯದ ತೊಂದರೆಗಳನ್ನು ನಿರ್ವಹಿಸಲು ಕ್ರಿಯಾಶೀಲ ನಿರ್ವಹಣೆಯ ಕಾರ್ಯತಂತ್ರಗಳ ಅಗತ್ಯ ಎತ್ತಿ ತೋರಿಸಿದೆ.

ಅಪೋಲೋ ಹಾಸ್ಪಿಟಲ್ಸ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ, “ದೇಶದ ನೈಜ ಸಾಮರ್ಥ್ಯವು ತನ್ನ ಜನರ ಸ್ವಾಸ್ಥ್ಯದ ಮೇಲೆ ಆಧಾರಪಟ್ಟಿರುತ್ತದೆ. ಬಹಳ ದೀರ್ಘ ಕಾಲದಿಂದ ಆರೋಗ್ಯ ಪರೀಕ್ಷೆಗಳು ಎಂದರೆ ಅವುಗಳನ್ನು ಭಯದಿಂದ ಪ್ರೇರಿತವಾದ ಪ್ರತಿಕ್ರಿಯೆಯಾದ ನಿಯಮಿತ ರಕ್ತಪರೀಕ್ಷೆಗಳು ಮತ್ತು ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತವೆ. ಇಂದು, ನಾವು ಗಮನಾರ್ಹ ಬದಲಾವಣೆಯ ಸಂಕೇತ ನೀಡುತ್ತಿದ್ದೇವೆ. ನೈಜ ಆರೋಗ್ಯವು ವೈಯಕ್ತಿಕ, ಕ್ರಿಯಾಶೀಲ ಮತ್ತು ಅತ್ಯಂತ ನಿಖರವಾಗಿರುತ್ತದೆ. ನಾವು ಕರುಳಿನ ಸೂಕ್ಷ್ಮಜೀವಿಗಳ ಆರೋಗ್ಯದಿಂದ ಸುಧಾರಿತ ದೀರ್ಘಾವಧಿ ರಿಸ್ಕ್ ಮಾದರಿಗಳವರೆಗೆ ವಿಜ್ಞಾನದ ಗಡಿಗಳನ್ನು ವಿಸ್ತರಿಸುತ್ತಿದ್ದು ಅದಕ್ಕೆ ಸಮಗ್ರ ಆರೋಗ್ಯಪರೀಕ್ಷೆಯು ಸ್ವಯಂ-ಉಸ್ತುವಾರಿಯ ಅಂತಿಮ ಕ್ರಿಯೆಯಾಗಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments