Thursday, June 4, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಜಿಎಸ್‌ಆರ್‌ಸಿ ಫಾರ್ಮುಲೇಶನ್ಸ್ ಆರ್ ಆಂಡ್ ಡಿ ಕೇಂದ್ರ ಉದ್ಘಾಟನೆ

ಬೆಂಗಳೂರಿನಲ್ಲಿ ಜಿಎಸ್‌ಆರ್‌ಸಿ ಫಾರ್ಮುಲೇಶನ್ಸ್ ಆರ್ ಆಂಡ್ ಡಿ ಕೇಂದ್ರ ಉದ್ಘಾಟನೆ

ಬೆಂಗಳೂರು: ಹೈದರಾಬಾದ್ ಮೂಲದ ಪ್ರಮುಖ ಸಂಶೋಧನಾ ಸಂಸ್ಥೆಯಾದ ಜಿವಿಆರ್‌ಪಿ, ಸ್ಟೆಪ್ಸ್ ಬಯೋಸೈನ್ಸಸ್ ಸಂಸ್ಥೆಯೊಂದಿಗೆ ಜಂಟಿ ಕಾರ್ಯತಂತ್ರದ ಒಪ್ಪಂದದಡಿ ಜಿವಿಆರ್‌ಪಿ ಸ್ಟೆಪ್ಸ್‌ಬಯೋ ರಿಸರ್ಚ್ ಸೆಂಟರ್ಅನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಭಾರತದ ಫಾರ್ಮಾಸ್ಯುಟಿಕಲ್ ಆರ್‌ ಅಂಡ್ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಕ್ಷೇತ್ರದಲ್ಲಿ ಇದು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ.

ಬೆಂಗಳೂರಿನ 1 ಬಿಎಲ್ಆರ್ ಲೈಫ್ ಸೈನ್ಸಸ್ ಕ್ಲಸ್ಟರ್ ಲೈಫ್‌ಸ್ಕೇಪ್ಸ್ ಆವರಣದಲ್ಲಿ ತಲೆಎತ್ತಿರುವ ಈ 15,000 ಚದರ ಅಡಿ ವಿಸ್ತೀರ್ಣದ ಬೃಹತ್ ಕೇಂದ್ರವನ್ನು, ಫಾರ್ಮುಲೇಶನ್ಸ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿಯೇ ಮೀಸಲಾದ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ಆಗಿ ರೂಪಿಸಲಾಗಿದೆ.

ಜಾಗತಿಕ ಔಷಧ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೈ-ಕಾಂಪ್ಲೆಕ್ಸಿಟಿ ಫಾರ್ಮುಲೇಶನ್ಸ್ (ಅತ್ಯಂತ ಸಂಕೀರ್ಣ ಔಷಧ ಸಂಯೋಜನೆಗಳು) ವಿಭಾಗಕ್ಕೆ ತನ್ನ ಉದ್ಯಮವನ್ನು ವಿಸ್ತರಿಸುವ ಜಿವಿಆರ್‌ಪಿಯ ಕಾರ್ಯತಂತ್ರದ ಯೋಜನೆಯ ಭಾಗವಾಗಿ ಜಿಎಸ್‌ಆರ್‌ಸಿ ಕೇಂದ್ರವನ್ನು ಆರಂಭಿಸಲಾಗಿದೆ. ಇದು ಲೈಫ್ ಸೈನ್ಸಸ್ ಆವಿಷ್ಕಾರಗಳ ಹಬ್ ಆಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮುತ್ತಿರುವುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಔಷಧ ಸಂಯೋಜನೆ (ಫಾರ್ಮುಲೇಶನ್) ಕ್ಷೇತ್ರದಲ್ಲಿ ಎದುರಾಗುವ ಅತ್ಯಂತ ಕಠಿಣ ಸವಾಲುಗಳನ್ನು ಎದುರಿಸುವ ಉದ್ದೇಶದಿಂದಲೇ ಜಿಎಸ್‌ಆರ್‌ಸಿ ಕೇಂದ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಂಕೀರ್ಣ ಔಷಧ ವಿತರಣಾ ವ್ಯವಸ್ಥೆಗಳು, ಸ್ಟೆರೈಲ್ ಇಂಜೆಕ್ಟೆಬಲ್ಸ್ಮತ್ತು ವೈವಿಧ್ಯಮಯ ಡೋಸೇಜ್ ರೂಪಗಳ ಸಂಶೋಧನೆಗೆ ಪೂರಕವಾಗುವಂತೆ ಅತ್ಯಾಧುನಿಕ ವೈಜ್ಞಾನಿಕ ಮೂಲಸೌಕರ್ಯ ಹಾಗೂ ವಿಶೇಷ ಕಾರ್ಯವಿಧಾನಗಳನ್ನು ಒಳಗೊಂಡಿದೆ. ಇದರ ಜೊತೆಗೆ, ಈ ಕೇಂದ್ರವು ಜಿವಿಆರ್‌ಪಿಯ ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಿಕ್ಲಿನಿಕಲ್ ಸಂಶೋಧನಾ ಸಾಮರ್ಥ್ಯಗಳೊಂದಿಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ಒಂದೇ ಸಹಯೋಗದ ಪರಿಸರ ವ್ಯವಸ್ಥೆಯಡಿ ಕಣದಿಂದ ಹಿಡಿದು ಸಿದ್ಧಪಡಿಸಿದ ಔಷಧ ಉತ್ಪನ್ನದವರೆಗೆ ಸಂಪೂರ್ಣ ಹಾಗೂ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಜಿಎಸ್‌ಆರ್‌ಸಿ ಕೇಂದ್ರದ ಸ್ಥಾಪನೆಯು ಒಟ್ಟಾರೆ ಫಾರ್ಮಾ ಉದ್ಯಮದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಇಂದು ಜಾಗತಿಕವಾಗಿ ಔಷಧ ಅಭಿವೃದ್ಧಿಯ ಪ್ರಕ್ರಿಯೆಯು ಹೆಚ್ಚು ಸಂಕೀರ್ಣಗೊಳ್ಳುತ್ತಿದ್ದು, ನಿಖರವಾದ ಚಿಕಿತ್ಸಾ ಪದ್ಧತಿಗಳಿಗೆ ಬೇಡಿಕೆ ತೀವ್ರಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ, ಈ ಕ್ಷೇತ್ರಕ್ಕಾಗಿಯೇ ಮೀಸಲಾದ ಅತ್ಯುನ್ನತ ಗುಣಮಟ್ಟದ ಫಾರ್ಮುಲೇಶನ್ ಮೂಲಸೌಕರ್ಯದ ಅಗತ್ಯತೆ ಎಂದಿಗಿಂತಲೂ ಈಗ ಹೆಚ್ಚಾಗಿದೆ. ಈ ಅಗತ್ಯವನ್ನು ನೇರವಾಗಿ ಪೂರೈಸಲು ಸಜ್ಜಾಗಿರುವ ಜಿಎಸ್‌ಆರ್‌ಸಿ, ಫಾರ್ಮಾಸ್ಯುಟಿಕಲ್ ಮತ್ತು ಬಯೋಟೆಕ್ನಾಲಜಿ ಪಾಲುದಾರ ಸಂಸ್ಥೆಗಳಿಗೆ ಮುಂದಿನ ಪೀಳಿಗೆಯ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಒಂದು ವಿಶಿಷ್ಟ ವೈಜ್ಞಾನಿಕ ವಾತಾವರಣವನ್ನು ಕಲ್ಪಿಸಿಕೊಡುತ್ತದೆ.

ಈ ಸಂದರ್ಭದಲ್ಲಿ ಜಿಎಸ್‌ಆರ್‌ಸಿ ಕೇಂದ್ರದ ಮಹತ್ವದ ಕುರಿತು ಮಾತನಾಡಿದ ಜಿವಿಆರ್‌ಪಿಸಹ-ಸಂಸ್ಥಾಪಕರಾದ ಕಲ್ಯಾಣ್ ಕೊರಿಸಪಾಟಿ, “ಜಿಎಸ್‌ಆರ್‌ಸಿ ಕೇಂದ್ರದ ಉದ್ಘಾಟನೆಯು ಜಿವಿಆರ್‌ಪಿ ಸಂಸ್ಥೆಯ ಬೆಳವಣಿಗೆಯ ಪಥದಲ್ಲಿ ಅತ್ಯಂತ ಮಹತ್ವದ ಕ್ಷಣವಾಗಿದೆ. ಉದ್ಯಮದ ನೈಜ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನಿರ್ದಿಷ್ಟ ಹಾಗೂ ವಿಶ್ವದರ್ಜೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದೇ ನಮ್ಮ ಡೆಡಿಕೇಟೆಡ್ ಆರ್‌ ಅಂಡ್ ಡಿ ಸೆಂಟರ್ಸ್ಮಾದರಿಯ ಪ್ರಮುಖ ಉದ್ದೇಶವಾಗಿದೆ.

ಔಷಧ ಸಂಯೋಜನೆ (ಫಾರ್ಮುಲೇಶನ್) ಎನ್ನುವುದು ಇಂತಹ ವಿಶೇಷ ಗಮನದ ಮೂಲಕ ಅಪಾರ ಮೌಲ್ಯವನ್ನು ಸೃಷ್ಟಿಸಬಹುದಾದ ಒಂದು ಪ್ರಮುಖ ಕ್ಷೇತ್ರವಾಗಿದೆ. ಸ್ಟೆಪ್ಸ್ ಬಯೋಸೈನ್ಸಸ್ ಸಂಸ್ಥೆಯೊಂದಿಗಿನ ನಮ್ಮ ಸಹಭಾಗಿತ್ವದ ಮೂಲಕ, ನಾವು ಕೇವಲ ಇಂದಿನ ಆರ್‌ ಅಂಡ್ ಡಿ ಅಗತ್ಯಗಳನ್ನು ಪೂರೈಸುವ ಕೇಂದ್ರವನ್ನು ಮಾತ್ರ ನಿರ್ಮಿಸಿಲ್ಲ, ಬದಲಿಗೆ ಜಾಗತಿಕ ಔಷಧ ಅಭಿವೃದ್ಧಿ ಕ್ಷೇತ್ರದಲ್ಲಿ ದಿನೇದಿನೇ ಬದಲಾಗುತ್ತಿರುವ ಬೇಡಿಕೆಗಳಿಗೆ ತಕ್ಕಂತೆ ವಿಸ್ತರಿಸಬಹುದಾದ ಅತ್ಯಾಧುನಿಕ ಮೂಲಸೌಕರ್ಯವನ್ನು ರೂಪಿಸಿದ್ದೇವೆ. ಪ್ರಿಕ್ಲಿನಿಕಲ್ ಸಂಶೋಧನೆಯಿಂದ ಹಿಡಿದು ಸಂಕೀರ್ಣ ಫಾರ್ಮುಲೇಶನ್ ಅಭಿವೃದ್ಧಿಯವರೆಗೆ ನಮ್ಮ ಪಾಲುದಾರ ಸಂಸ್ಥೆಗಳಿಗೆ ಸಂಪೂರ್ಣ ಸಮಗ್ರ ವೈಜ್ಞಾನಿಕ ವೇದಿಕೆಯನ್ನು ಒದಗಿಸುವ ನಮ್ಮ ಸಾಮರ್ಥ್ಯವನ್ನು ಜಿಎಸ್‌ಆರ್‌ಸಿ ಮತ್ತಷ್ಟು ಬಲಪಡಿಸುತ್ತದೆ. ಈ ಕೇಂದ್ರವು ಉನ್ನತ ಮೌಲ್ಯದ ಫಾರ್ಮಾಸ್ಯುಟಿಕಲ್ ಆವಿಷ್ಕಾರಗಳಿಗೆ ಭಾರತವನ್ನು ಒಂದು ಪ್ರಮುಖ ಜಾಗತಿಕ ತಾಣವನ್ನಾಗಿ ರೂಪಿಸಲಿದೆ ಎಂದು ನಾವು ಬಲವಾಗಿ ನಂಬುತ್ತೇವೆ” ಎಂದು ಹೇಳಿದರು.

ಸ್ಟೆಪ್ಸ್ ಬಯೋಸೈನ್ಸಸ್ ಸಂಸ್ಥಾಪಕರಾದಮನೋಜ್ ನೆರೂರ್ಕರ್ ಅವರು, “ಸರಿಯಾದ ಮೂಲಸೌಕರ್ಯ ಮತ್ತು ಸೂಕ್ತ ತಂತ್ರಜ್ಞಾನದ ಬೆಂಬಲದೊಂದಿಗೆ ರೂಪಿಸಲಾಗುವ ವಿಶ್ವದರ್ಜೆಯ ಫಾರ್ಮುಲೇಶನ್ ವಿಜ್ಞಾನವು, ವೈವಿಧ್ಯಮಯ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಯ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಬಲ್ಲದು ಎಂಬ ನಮ್ಮ ಜಂಟಿ ನಂಬಿಕೆಯ ಫಲವೇ ಈ ಜಿಎಸ್‌ಆರ್‌ಸಿ ಕೇಂದ್ರವಾಗಿದೆ. ಸ್ಟೆಪ್ಸ್‌ಬಯೋದಲ್ಲಿ ನಾವು ಕೇವಲ ಭೌತಿಕ ಮೂಲಸೌಕರ್ಯಗಳ ಮೇಲೆ ಹೂಡಿಕೆ ಮಾಡುತ್ತಿಲ್ಲ, ಬದಲಿಗೆ ಔಷಧಗಳ ಸಂಯೋಜನೆಯ ವಿನ್ಯಾಸ, ಸ್ಥಿರತೆಯ ಮುನ್ಸೂಚನೆ ಮಾದರಿಮತ್ತು ಪ್ರಕ್ರಿಯೆಗಳ ಉತ್ತಮಗೊಳಿಸುವವಿಧಾನಗಳನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಬಲ್ಲ ಎಐಆಧಾರಿತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಜಿಎಸ್‌ಆರ್‌ಸಿ ಕೇಂದ್ರದಲ್ಲಿನ ನಮ್ಮ ವೈಜ್ಞಾನಿಕ ಕಾರ್ಯವಿಧಾನಗಳೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಸಂಯೋಜಿಸುವ ಮೂಲಕ, ಔಷಧ ಅಭಿವೃದ್ಧಿಯ ಕಾಲಾವಧಿಯನ್ನು ಗಣನೀಯವಾಗಿ ಕಡಿಮೆ ಮಾಡುವುದು, ನಿರ್ಣಾಯಕ ಹಂತಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ಅಂತಿಮವಾಗಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ವಿಧಾನಗಳನ್ನು ಅತ್ಯಂತ ವೇಗವಾಗಿ ತಲುಪಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಆಳವಾದ ಜ್ಞಾನ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಎಐ ತಂತ್ರಜ್ಞಾನದ ಶಕ್ತಿಯನ್ನು ಒಟ್ಟುಗೂಡಿಸಿ, ಹಿಂದೆ ಸಾಧ್ಯವೇ ಇರದಿದ್ದ ಅತ್ಯುತ್ತಮ ಫಲಿತಾಂಶಗಳನ್ನು ತಲುಪಿಸುವ ಮೂಲಕ ಫಾರ್ಮುಲೇಶನ್ ವಿಜ್ಞಾನದ ಮುಂಚೂಣಿಯಲ್ಲಿರಲು ನಮ್ಮ ದೀರ್ಘಕಾಲೀನ ಬದ್ಧತೆಗೆ ಈ ಕೇಂದ್ರವೇ ಸಾಕ್ಷಿಯಾಗಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments