Monday, June 29, 2026
Google search engine
Homeದೇಶಶಾಂತಿ ಮಾತುಕತೆಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ ನೀಡಿದ ಅಮೆರಿಕ

ಶಾಂತಿ ಮಾತುಕತೆಗೆ ಭಾರತ, ಪಾಕಿಸ್ತಾನಕ್ಕೆ ಆಹ್ವಾನ ನೀಡಿದ ಅಮೆರಿಕ

ಗಾಜಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆಯಲ್ಲಿ ಕರೆಯಲಾಗಿರುವ ಶಾಂತಿ ಮಾತುಕತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಅಧಿಕೃತ ಆಹ್ವಾನ ನೀಡಿದೆ.

ಭಾರತ ಮತ್ತು ಅಮೆರಿಕ ನಡುವೆ ಸುಂಕ ಸಮರ ನಡೆದಿರುವ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತದ ಪ್ರಧಾನಿಗೆ ಶಾಂತಿ ಮಾತುಕತೆಗೆ ಆಹ್ವಾನ ನೀಡಿರುವುದು ಅಚ್ಚರಿಯ ಬೆಳವಣಿಗೆ ಆಗಿದ್ದು, ಭಾರತಕ್ಕೆ ಶುಭ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಸ್ರೇಲ್‌ ಮತ್ತು ಗಾಜಾ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಎರಡೂ ದೇಶಗಳ ನಡುವೆ ಶಾಂತಿ ಸಂಧಾನ ತಂಡ ರಚಿಸಿರುವ ಅಮೆರಿಕ ಈ ತಂಡದಲ್ಲಿ ಭಾರತವನ್ನು ಆಯ್ಕೆ ಮಾಡಿದೆ.

ತಂಡದಲ್ಲಿ ಭಾರತವನ್ನು ಆಯ್ಕೆ ಮಾಡಿರುವ ಅಮೆರಿಕ ಅಧಿಕೃತ ಆಹ್ವಾನ ಕಳುಹಿಸಿಕೊಟ್ಟಿದೆ. ಈಗಾಗಲೇ ಪಾಕಿಸ್ತಾನ, ಜೋರ್ಡಾನ್‌, ಗ್ರೀಸ್‌, ಸೈಪ್ರಸ್‌, ಕೆನಡಾ, ಟರ್ಕಿ, ಈಜಿಪ್ಟ್‌, ಪೆರುಗ್ವೆ, ಅರ್ಜೆಂಟೀನಾ ಮತ್ತು ಅಲ್ಬೇನಿಯಾ ದೇಶಗಳು ತಮಗೂ ಆಹ್ವಾನ ಬಂದಿದೆ ಎಂದು ಹೇಳಿಕೊಂಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments