ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ದಾಖಲೆಗಳ ಪುಟದಲ್ಲಿ ಮತ್ತೊಂದು ದಾಖಲೆ ಸೇರಿಸಿಕೊಂಡರು.
ಇಂದೋರ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧ 7ನೇ ಶತಕ ಬಾರಿಸುವ ಮೂಲಕ ಅತೀ ಹೆಚ್ಚು ಶತಕ ಹೊಡೆದ ಆಟಗಾರ ಎಂಬ ದಾಖಲೆ ಬರೆದರು,
ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ವೀರೇಂದ್ರ ಸೆಹ್ವಾಗ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 6 ಶತಕ ಸಿಡಿಸಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ ತಲಾ 5 ಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ 91 ಶತಕ ಪೂರೈಸಿದರು. ಅಂತಿಮವಾಗಿ 108 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 124 ರನ್ ಬಾರಿಸಿ ಔಟಾದರು. ಇದು ಕೊಹ್ಲಿಗೆ 54ನೇ ಏಕದಿನ ಹಾಗೂ 85ನೇ ಅಂತಾರಾಷ್ಟ್ರೀಯ ಶತಕವಾಗಿದೆ.
ವಿರಾಟ್ ಕೊಹ್ಲಿ 36 ಪಂದ್ಯಗಳಲ್ಲಿ ನ್ಯೂಜಿಲೆಂಡ್ 7 ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 50 ಪಂದ್ಯಗಳಲ್ಲಿ ಹಾಗೂ ವೀರೇಂದ್ರ ಸೆಹ್ವಾಗ್ 23 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ 41 ಮತ್ತು ಸನತ್ ಜಯಸೂರ್ಯ 45 ಪಂದ್ಯಗಳಲ್ಲಿ ತಲಾ 5 ಶತಕ ಗಳಿಸಿದ್ದರು.



