Wednesday, May 13, 2026
Google search engine
Homeಕ್ರೀಡೆವಿರಾಟ್‌ ಕೊಹ್ಲಿ ಶತಕ ವ್ಯರ್ಥ: ಭಾರತದ ನೆಲದಲ್ಲಿ2-1ರಿಂದ ಏಕದಿನ ಸರಣಿಗೆ ಗೆದ್ದು ನ್ಯೂಜಿಲೆಂಡ್‌ ಇತಿಹಾಸ

ವಿರಾಟ್‌ ಕೊಹ್ಲಿ ಶತಕ ವ್ಯರ್ಥ: ಭಾರತದ ನೆಲದಲ್ಲಿ2-1ರಿಂದ ಏಕದಿನ ಸರಣಿಗೆ ಗೆದ್ದು ನ್ಯೂಜಿಲೆಂಡ್‌ ಇತಿಹಾಸ

ಮಧ್ಯಮ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಶತಕ ವ್ಯರ್ಥವಾಗಿದ್ದು, ನ್ಯೂಜಿಲೆಂಡ್‌ ತಂಡ 41 ರನ್‌ ಗಳಿಂದ ಭಾರತ ತಂಡವನ್ನು ಮಣಿಸಿ 2-1ರಿಂದ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.

ಇಂದೋರ್‌ ನಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ 8 ವಿಕೆಟ್‌ ಗೆ 337 ರನ್‌ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ನ್ಯೂಜಿಲೆಂಡ್‌ 46 ಓವರ್‌ ಗಳಲ್ಲಿ 296 ರನ್‌ ಗೆ ಆಲೌಟಾಯಿತು.

ಏಕದಿನ ಸರಣಿಯಲ್ಲಿ 0-1ರಿಂದ ಹಿನ್ನಡೆ ಅನುಭವಿಸಿದ್ದ ನ್ಯೂಜಿಲೆಂಡ್‌ ಸತತ ಎರಡು ಪಂದ್ಯಗಳನ್ನು ಗೆದ್ದು ಭಾರತದ ನೆಲದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದು ಇತಿಹಾಸ ಬರೆಯಿತು. ಅದರಲ್ಲೂ ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಶತಕದ ಹೊರತಾಗಿಯೂ ಗೆಲುವು ನ್ಯೂಜಿಲೆಂಡ್‌ ಪಾಲಿಗೆ ಮಹತ್ವದ್ದಾಗಿದೆ.

ಕಠಿಣ ಗುರಿ ಬೆಂಬತ್ತಿದ ಭಾರತ ತಂಡ ಒಂದು ಹಂತದಲ್ಲಿ 7 ರನ್‌ ಗೆ 4 ವಿಕೆಟ್‌ ಕಳೆದುಕೊಂಡು ಆರಂಭದಲ್ಲೇ ಮುಗ್ಗರಿಸಿತು. ೫ನೇ ವಿಕೆಟ್‌ ಗೆ ಜೊತೆಯಾದ ಕೊಹ್ಲಿ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ 88 ರನ್‌ ಜೊತೆಯಾಟದಿಂದ ಹೋರಾಟ ಆರಂಭಿಸಿದರು. ಆದರೆ ನಿತೀಶ್‌ ಕುಮಾರ್‌ 57 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್‌ ಸಹಾಯದಿಂದ 53 ರನ್‌ ಬಾರಿಸಿ ಔಟಾದರು.

ನಂತರ ಬಂದ ಹರ್ಷಿತ್‌ ರಾಣಾ ಜೊತೆ ಸೇರಿದ ಕೊಹ್ಲಿ 7ನೇ ವಿಕೆಟ್‌ ಗೆ 98 ರನ್‌ ಜೊತೆಯಾಟದಿಂದ ಗೆಲುವಿನ ಭರವಸೆ ಉಳಿಸಿಕೊಂಡಿದ್ದರು. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ವಿರಾಟ್‌ ಕೊಹ್ಲಿ 108 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ ಸೇರಿದ 124 ರನ್‌ ಬಾರಿಸಿ ಔಟಾದರು. ಹರ್ಷಿತ್‌ ರಾಣಾ 43 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ ಬಾರಿಸಿ 52 ರನ್‌ ಗಳಿಸಿದರು.

ನ್ಯೂಜಿಲೆಂಡ್‌ ಉತ್ತಮ ದಾಳಿ ಸಂಘಟಿಸಿದ ಜಾಕ್‌ ಫೌಲ್ಕೀಸ್‌ ಮತ್ತು ಕಿಸ್ಟನ್‌ ಕ್ಲಾರ್ಕ್‌ ತಲಾ 3 ವಿಕೆಟ್‌ ಕಬಳಿಸಿದರೆ, ಜೇಡನ್‌ ಲೆನೊಕ್ಸ್‌ 2 ವಿಕೆಟ್‌ ಪಡೆದರು.

ನ್ಯೂಜಿಲೆಂಡ್‌ ಡಬಲ್‌ ಶತಕ

ನ್ಯೂಜಿಲೆಂಡ್‌ ಪರ ಇಬ್ಬರು ಬ್ಯಾಟ್ಸ್‌ ಮನ್‌ ಗಳು ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಡ್ರೈಲ್‌ ಮಿಚೆಲ್‌ ಮತ್ತು ಗ್ಲೆನ್‌ ಫಿಲಿಪ್ಸ್‌ 219 ರನ್‌ ಗಳ ಬೃಹತ್‌ ಜೊತೆಯಾಟದಿಂದ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು.

ಡ್ರೈಲ್‌ ಮಿಚೆಲ್‌ 131 ಎಸೆತಗಳಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡ 137 ರನ್‌ ಬಾರಿಸಿದರು. ಫಿಲಿಪ್ಸ್‌ 88 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ ಸಹಾಯದಿಂದ 106 ರನ್‌ ಸಿಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments