Monday, July 6, 2026
Google search engine
Homeದೇಶಪಾಕಿಸ್ತಾನ 7 ನಗರಗಳ ಮೇಲೆ ಭಾರತ ಕ್ಷಿಪಣಿ ದಾಳಿ; ಪಾಕಿಸ್ತಾನದಿಂದ ಪ್ರತಿದಾಳಿ ವಿಫಲ

ಪಾಕಿಸ್ತಾನ 7 ನಗರಗಳ ಮೇಲೆ ಭಾರತ ಕ್ಷಿಪಣಿ ದಾಳಿ; ಪಾಕಿಸ್ತಾನದಿಂದ ಪ್ರತಿದಾಳಿ ವಿಫಲ

ಭಾರತದ ವಾಯುಪಡೆ ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್ ಸೇರಿದಂತೆ 7 ನಗರಗಳ ಮೇಲೆ ದಾಳಿ ನಡೆದಿದೆ. ಇದೇ ವೇಳೆ ಪಾಕಿಸ್ತಾನದ ಪ್ರತಿದಾಳಿಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.

ಪಗಲ್ಗಾಮ್ ನರಮೇಧಕ್ಕೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ನಿಂದ ಪಾಕಿಸ್ತಾನ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಗುರುವಾರ ಗಡಿಯಲ್ಲಿ ಅಪ್ರೋಜಿತ ದಾಳಿ ನಡೆಸಿ 15 ಮಂದಿಯನ್ನು ಬಲಿ ಪಡೆದಿತ್ತು.

ಗುರುವಾರ ರಾತ್ರಿ ದಿಢೀರನೆ ಪಾಕಿಸ್ತಾನ ಭಾರತದ ಗಡಿ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸಿದ್ದನ್ನು ಭಾರತದ ಎಸ್-400 ರಕ್ಷಣಾ ವ್ಯವಸ್ಥೆ ಧ್ವಂಸಗೊಳಿಸಿದೆ.

ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ನಡೆಸಿದ ಭಾರತೀಯ ವಾಯುಪಡೆ ಇಸ್ಲಮಾಬಾದ್, ಲಾಹೋರ್ ಸಿಯಾಲ್ ಕೋಟ್, ಬಹವಾಲ್ಪುರ್, ಕರಾಚಿ, ಪೇಶಾವರ  ಸೇರಿದಂತೆ 7 ನಗರಗಳ ಮೇಲೆ ದಾಳಿ ನಡೆಸಿದೆ. ದಾಳಿಗೆ ಬೆಚ್ಚಿಬಿದ್ದ ಜನರು ಓಡಿ ಹೋಗುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಭಾರತ ಸುಮಾರು 100-150 ಕ್ಷಿಪಣಿ ದಾಳಿ ನಡೆಸಿದ ಎಂಬ ಮಾಹಿತಿ ಲಭ್ಯವಾಗಿದ್ದು, ಕರಾಚಿ ಬಂದರು ಮೇಲೆ ದಾಳಿ ನಡೆದಾಗ ಭಾರೀ ಸ್ಫೋಟ ಸಂಭವಿಸಿದ್ದು, ದಾಳಿಯಲ್ಲಿ ಆಗಿರುವ ಸಾವು ನೋವುಗಳ ವರದಿ ನಿರೀಕ್ಷಿಸಲಾಗುತ್ತಿದೆ.

ಇದೇ ವೇಳೆ ಪಾಕಿಸ್ತಾನ ಭಾರತದ ಗಡಿ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಶೆಲ್, ಡ್ರೋಣ್ ಹಾಗೂ ಕ್ಷಿಪಣಿ ದಾಳಿ ನಡೆಸುವ ಯತ್ನವನ್ನು ವಿಫಲಗೊಳಿಸಲಾಗಿದೆ. ಗುಜರಾತ್ ಕಛ್ ಮೇಲೆ ದಾಳಿಯ ಯತ್ನ ವಿಫಲಗೊಳಿಸಲಾಗಿದೆ. ಅಲ್ಲದೇ ಮೂರು ಪಾಕಿಸ್ತಾನ ಎಫ್-16 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ.

ಭಾರತ ಗಡಿಯ ಹಲವು ಜಿಲ್ಲೆಗಳಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು ಬ್ಲಾಕ್ ಔಟ್ ಘೋಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments