ಭಾರತೀಯ ಸೇನೆ ರಾಜಧಾನಿ ಇಸ್ಲಮಾಬಾದ್ ನಲ್ಲಿ ನಡೆಸಿದ ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಶರೀಫ್ ಅಡಗುದಾಣಕ್ಕೆ ಸ್ಥಳಾಂತರಗೊಂಡಿದ್ದಾರೆ.
ಪಾಕಿಸ್ತಾನ ಅಪ್ರೋಜಿತ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ರಾಜಧಾನಿ ಇಸ್ಲಾಮಾಬಾದ್, ಕರಾಚಿ, ಪೇಶಾವರ, ಲಾಹೋರ್ ಸೇರಿದಂತೆ ಹಲವು ನಗರಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಭಾರತೀಯ ಸೇನೆ ಇಸ್ಲಮಾಬಾದ್ ಮೇಲೆ ದಾಳಿ ವೇಳೆ ಪ್ರಧಾನಿ ನಿವಾಸದಿಂದ 20 ಕಿ.ಮೀ. ದೂರದಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನೆ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ಗೌಪ್ಯ ಸ್ಥಳಕ್ಕೆ ರವಾನಿಸಿದೆ.
ಪಾಕಿಸ್ತಾನ ಪ್ರಧಾನಿ ಭಾರತದ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಲು ಪಾಕಿಸ್ತಾನಕ್ಕೆ ಪರಮಾಧಿಕಾರ ನೀಡಿದ್ದರು.



