Monday, June 29, 2026
Google search engine
Homeಜಿಲ್ಲಾ ಸುದ್ದಿರಾಜ್ಯದಲ್ಲಿ ಅಮಾನವೀಯ ಘಟನೆ: ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಶವದ ಜೊತೆ 3 ದಿನ ಕಳೆದ ಕುಟುಂಬಸ್ಥರು!

ರಾಜ್ಯದಲ್ಲಿ ಅಮಾನವೀಯ ಘಟನೆ: ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಶವದ ಜೊತೆ 3 ದಿನ ಕಳೆದ ಕುಟುಂಬಸ್ಥರು!

ಅಂತ್ಯಸಂಸ್ಕಾರಕ್ಕೆ ಹಣವಿಲ್ಲದ ಕಾರಣ ಕುಟುಂಬವೊಂದು ಮನೆಯ ಯಜಮಾನನ ಮೃತದೇಹವನ್ನು 3 ದಿನ ಮನೆಯಲ್ಲೆ ಇಟ್ಟುಕೊಂಡು ಕಾಲ ಕಳೆದ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಅನಾರೋಗ್ಯದಿಂದ ಮೃತಪಟ್ಟ ಮನೆಯ ಯಜಮಾನ ಸ್ವಾಮಿದಾಸ್ (76) ಮೃತದೇಹವನ್ನು ಮೂರು ದಿನ ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯ ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಯ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಸ್ವಯಂಸೇವಾ ಸಂಸ್ಥೆಯ ಮೂಲಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಮಹಬೂಬ್‌ನಗರ ಜಿಲ್ಲೆಯ ಸ್ವಾಮಿದಾಸ್ ಕುಟುಂಬದೊಂದಿಗೆ ಶಾಪುರ್ ನಗರದ ಎನ್‌ಎಲ್‌ಬಿ ನಗರದಲ್ಲಿ ವಾಸಿಸುತ್ತಿದ್ದರು. ಅವರ ಕಿರಿಯ ಪುತ್ರಿ ಸಲೋನಿ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದರು. ತಂದೆ ಸ್ವಾಮಿದಾಸ್ ಅನಾರೋಗ್ಯಕ್ಕೊಳಗಾದ ಕಾರಣ ಮೂರು ತಿಂಗಳ ಹಿಂದೆ ಸಲೋನಿ ಕೆಲಸ ತೊರೆದಿದ್ದರು ಎಂದರು.

ಸ್ವಾಮಿದಾಸ್ ಅವರ ಆರೋಗ್ಯ ಇತ್ತೀಚೆಗೆ ಸಂಪೂರ್ಣವಾಗಿ ಹದಗೆಟ್ಟಿತ್ತು ಮತ್ತು ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ಬಾಡಿಗೆಯನ್ನು ಪಾವತಿಸದ ಕಾರಣ ಮಾಲೀಕರು, ಇತ್ತೀಚೆಗೆ ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಸೋಮವಾರ ಸ್ವಾಮಿದಾಸ್ ನಿಧನರಾಗಿದ್ದರು. ಅಂತ್ಯಕ್ರಿಯೆ ನಡೆಸಲೂ ಹಣವಿಲ್ಲದ ಕಾರಣ ಕುಟುಂಬಸ್ಥರು ಶವದೊಂದಿಗೆ ಮೂರು ದಿನಗಳ ಕಾಲ ಮನೆಯಲ್ಲಿಯೇ ಇದ್ದರು. ಮನೆಯಿಂದ ಯಾರೂ ಹೊರಗೆ ಬಾರದಿದ್ದಾಗ ಅನುಮಾನಗೊಂಡ ಮನೆ ಮಾಲೀಕರು, ಗುರುವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಿದರು.

ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಶುಕ್ರವಾರ ಸತ್ಯ ಹರಿಶ್ಚಂದ್ರ ಫೌಂಡೇಶನ್ ನೆರವಿನಿಂದ ಅಂತ್ಯಕ್ರಿಯೆ ಮೃತ ಅಂತ್ಯಕ್ರಿಯೆ ನೆರವೇರಿಸಲಾಯಿತು. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಸ್ಥರಿಗೆ ರಾಣಿಗಂಜ್‌ನಲ್ಲಿರುವ ಅಂಗವಿಕಲರ ಎನ್‌ಜಿಒ ಆಶ್ರಯ ನೀಡಿದೆ ಎಂದು ಇನ್ಸ್‌ಪೆಕ್ಟರ್ ಗಡ್ಡಂ ಮಲ್ಲೇಶ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments