Friday, December 12, 2025
Google search engine
Homeವಿದೇಶಈ ದೇಶದಲ್ಲಿ ಬಿಸ್ಕತ್ 2400, 1 ಕಪ್ ಕಾಫಿ 1800, ಕೆಜಿ ಸಕ್ಕರೆ 5000, ಈರುಳ್ಳಿ...

ಈ ದೇಶದಲ್ಲಿ ಬಿಸ್ಕತ್ 2400, 1 ಕಪ್ ಕಾಫಿ 1800, ಕೆಜಿ ಸಕ್ಕರೆ 5000, ಈರುಳ್ಳಿ 4500 ರೂ.!

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ ಯುದ್ಧ ಪೀಡಿತ ಗಾಜಾದಲ್ಲಿ 2400 ರೂ.ಗೆ ಮಾರಾಟ ಮಾಡಲಾಗುತ್ತಿದೆ!

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇಸ್ರೇಲ್ ದಾಳಿಗೆ ತತ್ತರಿಸಿರುವ ಪ್ಯಾಲೇಸ್ತಿನ್ ನ ಗಾಜಾದಲ್ಲಿ ಪಾರ್ಲೆ ಜೀ ಬಿಸ್ಕತ್ ಪ್ಯಾಕೇಟ್ ಮೂಲ ಬೆಲೆಗಿಂತ 500 ಪಟ್ಟು ಅಂದರೆ ಸುಮಾರು 2400 ರೂ.ಗೆ ಮಾರಾಟವಾಗುತ್ತಿದೆ.

ಭಾರತದಿಂದ 4300 ಕಿ.ಮೀ. ದೂರದಲ್ಲಿರುವ ಗಾಜಾಗೆ ಪಾರ್ಲೆ ಜಿ ಬಿಸ್ಕತ್ ರಫ್ತು ಮಾಡಲಾಗುತ್ತಿದೆ. ಮುಂಬೈನಲ್ಲಿ ಉತ್ಪಾದಿಸಲಾಗುವ ಪಾರ್ಲೆ ಉತ್ಪನ್ನಗಳಲ್ಲಿ ಒಂದಾದ ಪಾರ್ಲೆ ಜಿ ಬಿಸ್ಕತ್ ಕಳುಹಿಸಿಕೊಡಲಾಗುತ್ತಿದೆ.

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಪಾರ್ಲೆ ಜಿ ಬಿಸ್ಕತ್ ಗಾಜಾದಲ್ಲಿ 24 ಯುರೋ ಅಂದರೆ ಭಾರತದ ರೂಪಾಯಿ ಮೌಲ್ಯದ ಪ್ರಕಾರ 2342 ರೂ. ಆಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಬಿಸ್ಕತ್ ಗಳು ಮಾರಾಟವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗಳಿಗಾಗಿ ಪಾರ್ಲೆ ಜಿ ಬಿಸ್ಕತ್ ಖರೀದಿಸಿದ ನಂತರ ತಂದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದು, ನನ್ನ ಹಾಗೂ ಮಗಳ ನೆಚ್ಚಿನ ಬಿಸ್ಕತ್ ದೀರ್ಘಕಾಲ ಕಾಯುವಿಕೆ ನಂತರ ಬಂದಿದೆ. ಸಾಮಾನ್ಯಕ್ಕಿಂತ 1.5 ಯುರೋ (24 ಯುರೋ)ಗೆ ಮಾರಾಟವಾಗುತ್ತಿದೆ. ಆದರೂ ನಾನು ಇದನ್ನು ಖರೀದಿಸಿದೆ ಎಂದು ಮೊಹಮದ್ ಜಾವೆದ್ ಎಂಬಾತ ಪೋಸ್ಟ್ ಮಾಡಿದ್ದಾರೆ.

ಮಾನವೀಯತೆ ದೃಷ್ಟಿಯಿಂದ ಈ ಬಿಸ್ಕತ್ ಗಳು ಗಾಜಾಗೆ ಉಚಿತವಾಗಿ ಬರುತ್ತಿವೆ. ಉತ್ಪಾದಕರು, ಸರಬರಾಜುದಾರರು ಹಾಗೂ ಯಾರ ಸಮಸ್ಯೆಯೂ ಇಲ್ಲ. ಆದರೆ ಮಧ್ಯವರ್ತಿಗಳು ಇದನ್ನು ಸಾಮಾನ್ಯಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದೇ ಗಾಜಾದ ಮತ್ತೊಂದು ಪ್ರದೇಶದಲ್ಲಿ 240 ರೂ.ಗೆ ಮಾರಾಟವಾಗುತ್ತಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ದರ ವಿಧಿಸಲಾಗುತ್ತಿದೆ ಎಂದು ಗಾಜಾದ ವೈದ್ಯರೊಬ್ಬರು ತಿಳಿಸಿದ್ದಾರೆ.

ಬಿಸ್ಕತ್ ಮಾತ್ರವಲ್ಲ, ಒಂದು ಕೆಜಿ ಸಕ್ಕರೆ ಬೆಲೆ 4914 ರೂ., ಅಡುಗೆ ಎಣ್ಣೆ ಲೀಟರ್ ಗೆ 4177 ರೂ., 1 ಕೆಜಿ ಆಲೂಗಡ್ಡೆ 1965 ರೂ., 1 ಕೆಜಿ ಈರುಳ್ಳಿ ಬೆಲೆ 4423 ರೂ. ಹಾಗೂ ಒಂದು ಕಪ್ ಕಾಫಿ 1800 ರೂ. ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments