Friday, December 12, 2025
Google search engine
Homeವಿದೇಶರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ: ರಷ್ಯಾ, ಜಪಾನ್ ಗೆ ಅಪ್ಪಳಿಸಿದ ಸುನಾಮಿ!

ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ: ರಷ್ಯಾ, ಜಪಾನ್ ಗೆ ಅಪ್ಪಳಿಸಿದ ಸುನಾಮಿ!

ರಷ್ಯಾದ ಕಾಮ್ಚಟ್ಕಾದಲ್ಲಿ ಸಂಭವಿಸಿದ 8.8 ತೀವ್ರತೆಯ ಪ್ರಬಲ ಭೂಕಂಪನದಿಂದ ಸೃಷ್ಟಿಯಾದ ಸುನಾಮಿ ಅಲೆಗಳು ರಷ್ಯಾ ಮತ್ತು ಜಪಾನ್ ಕಡಲ ತೀರಗಳಿಗೆ ಅಪ್ಪಳಿಸಿದೆ.

ಹೊಕಾಯ್ಡೊ ದ್ವೀಪದಿಂದ ಸುಮಾರು 250 ಕಿ.ಮೀ. ದೂರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 8.8 ತೀವ್ರತೆ ದಾಖಲಿಸಿದೆ. ಇದು 1952ರ ನಂತರ ರಷ್ಯಾದಲ್ಲಿ ಸಂಭವಿಸಿದ ಅತೀ ದೊಡ್ಡ ಹಾಗೂ ಒಟ್ಟಾರೆ 8ನೇ ಅತೀ ದೊಡ್ಡ ಭೂಕಂಪನವಾಗಿದೆ.

ಪ್ರಬಲ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಕಾಣಿಸಿಕೊಂಡ ಸುನಾಮಿ ಅಲೆಗಳು ರಷ್ಯಾ ಹಾಗೂ ಜಪಾನ್ ಕಡಲ ತೀರಗಳಿಗೆ ಅಪ್ಪಳಿಸಿದ್ದು, ಕರಾವಳಿ ತೀರ ಪ್ರದೇಶಗಳು ಜಲಾವೃತಗೊಂಡಿವೆ. ಸುನಾಮಿ ಅಪ್ಪಳಿಸಿದ್ದರಿಂದ ಎರಡೂ ದೇಶಗಳ ಬಂದರು ಪ್ರದೇಶಗಳಿಗೆ ಹಾನಿಯಾಗಿದ್ದು, ಸಾವು ನೋವಿನ ವರದಿ ಇನ್ನೂ ಬಂದಿಲ್ಲ.

ಭೂಕಂಪನದ ಬೆನ್ನಲ್ಲೇ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ಜಪಾನ್ ಕಡಲ ತೀರಕ್ಕೆ ಮೃತಪಟ್ಟ 4 ವೇಲ್ಸ್ ಮೀನುಗಳು ಬಂದು ಬಿದ್ದಿವೆ.

ಬಂದರು ಪ್ರದೇಶ ಸೆವೆರೊ-ಕುರಿಲ್ಸ್ಕ್‌ಗೆ ಸುನಾಮಿ ಅಲೆಗಳು ಅಪ್ಪಳಿಸುತ್ತಿರುವ ವೈಮಾನಿಕ ದೃಶ್ಯಾವಳಿಗಳನ್ನು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ ಬಿಡುಗಡೆ ಮಾಡಿದೆ.

ಕಮ್ಚಟ್ಕಾ ದ್ವೀಪದ ಪೆನಿನ್ಸುಲಾದಲ್ಲಿರುವ ಪೆಟ್ರೋಪಾವ್ಲೋವ್ಸಕ್‌ ನಿಂದ ಸುಮಾರು 136 ಕಿಲೋಮೀಟರ್ ದೂರದ 19 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದು 1952ರ ಬಳಿಕ ಸಂಭವಿಸಿದ ಅತೀ ಪ್ರಬಲ ಭೂಕಂಪವಾಗಿದೆ. ಅಮೆರಿಕದ ಅಲಾಸ್ಕಾದ ಭಾಗಗಳು ಹಾಗೂ ಜಪಾನ್‌ಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments