ಚಂದ್ರಯಾನ-5 ಮಿಷನ್‌ಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ (ಜೆಎಎಕ್ಸ್ ಎ) ನಡುವಿನ ಸಹಯೋಗವನ್ನು ಪ್ರಧಾನಿ ನರೇಂದ್ರ ಮೋದಿ ದೃಢಪಡಿಸಿದ್ದಾರೆ.
ಜಪಾನಿನ ಪತ್ರಿಕೆ ದಿ ಯೋಮಿಯುರಿ ಶಿಂಬುನ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ಮೋದಿ, ಚಂದ್ರ ಧ್ರುವ ಪರಿಶೋಧನೆ ಎಂದೂ ಕರೆಯಲ್ಪಡುವ ಜಂಟಿ ಮಿಷನ್ ಚಂದ್ರನ ದಕ್ಷಿಣ ಧ್ರುವದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಘೋಷಿಸಿದರು.
ಕಾರ್ಯಾಚರಣೆಯು ಜಪಾನ್‌ನ ಹೆಚ್ 3 ರಾಕೆಟ್ ಅನ್ನು ಬಳಸಿಕೊಳ್ಳಲಿದ್ದು, 2027-28 ರ ಉಡಾವಣೆಗೆ ಯೋಜಿಸಲಾಗಿದೆ. ನೀರಿನ ಮಂಜುಗಡ್ಡೆಯನ್ನು ಪತ್ತೆಹಚ್ಚಲು ಮತ್ತು ವಿಶ್ಲೇಷಿಸಲು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವ ಗುರಿಯನ್ನು ಇದು ಹೊಂದಿದೆ.
ಪಾಲುದಾರಿಕೆಯ ಭಾಗವಾಗಿ, ಜೆಎಎಕ್ಸ್ ಎ ರೋವರ್ ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಇಸ್ರೋ ಲ್ಯಾಂಡರ್ ಅನ್ನು ಕೊಡುಗೆಯಾಗಿ ನೀಡುತ್ತದೆ.
ಇಸ್ರೋ ಮತ್ತು ಜೆಎಎಕ್ಸ್‌ಎ ನಡುವಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಸರ್ಕಾರ-ಸರ್ಕಾರದ ಸಹಯೋಗವು ನಮ್ಮ ಕೈಗಾರಿಕೆಗಳು ಮತ್ತು ನವೋದ್ಯಮಗಳ ನಡುವೆ ಸಹಕಾರದ ಸಂಸ್ಕೃತಿಯನ್ನು ಬೆಳೆಸುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಕರ್ನಾಟಕದಲ್ಲೂ ಛಾಪು:
ಬೆಂಗಳೂರಿನ ಬಿಡದಿ ಬಳಿ ಟೊಯೊಟೋ ಕಿರ್ಲೋಸ್ಕರ್ ಘಟಕ ವಿಸ್ತರಣೆಗೆ 3,300 ಕೋಟಿ ರೂ ವ್ಯಯಿಸುತ್ತಿದೆ. ಬೆಂಗಳೂರಿನ ಐಐಎಸ್ಸಿ ಸೇರಿದಂತೆ ೮ ಯೂನಿವರ್ಸಿಟಿಗಳೊಂದಿಗೆ ಜಪಾನ್ ಹೊಂದಾಣಿಕೆ ಮಾಡಿಕೊಂಡಿದೆ. ಜಪಾನ್‌ನ ನಿಡೆಕ್ ಸಂಸ್ಥೆ ಬೆಂಗಳೂರಿನಲ್ಲಿ ಗ್ಲೋಬಲ್ ಸಾಫ್ಟ್ವೇರ್ ಡೆವಲಪ್ಮೆಂಟ್ ಸೆಂಟರ್ ನಿರ್ಮಿಸುತ್ತಿದೆ.
ಕೃಷಿ ಕ್ಷೇತ್ರಕ್ಕೆ ಬಲ
ತಂತ್ರಜ್ಞಾನ ಶಕ್ತ ಜಪಾನ್ ಭಾರತದ ಕೃಷಿ ಕ್ಷೇತ್ರಕ್ಕೂ ನೆರವು ನೀಡುತ್ತಿದೆ. ಸೋಜಿಟ್ಜ್ ಕಾರ್ಪೊರೇಶನ್ ಸಂಸ್ಥೆ ಇಂಡಿಯನ್ ಆಯಿಲ್ ಜೊತೆಗಾರಿಕೆಯಲ್ಲಿ ಭಾರತದಲ್ಲಿ 30 ಬಯೋಗ್ಯಾಸ್ ಘಟಕಗಳನ್ನು ಸ್ಥಾಪಿಸಲಿದೆ. ಇದರಿಂದ 1.6 ದಶಲಕ್ಷ ಟನ್ ಅನಿಲ ಉತ್ಪಾದನೆಯಾಗಲಿದೆ. ಕೃಷಿಕರು ತಮ್ಮ ಬೆಳೆ ತ್ಯಾಜ್ಯಗಳನ್ನು ಮಾರಿ ಹೆಚ್ಚುವರಿ ಆದಾಯ ಪಡೆಯುವ ಅವಕಾಶ ಇದೆ.
ಜಪಾನ್‌ನ ಉದ್ದಿಮೆಗಳು ತಮ್ಮ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಗೆ ಭಾರತದ ಸಣ್ಣ ಉದ್ದಿಮೆಗಳನ್ನು ಬಳಸಿಕೊಳ್ಳುತ್ತಿದೆ. ಇದು ಸಣ್ಣ ಉದ್ದಿಮೆಗಳ ಮೌಲ್ಯ ಮತ್ತು ತಂತ್ರಜ್ಞಾನ ವೃದ್ಧಿಗೆ ಸಹಕಾರಿಯಾಗಲಿದೆ.



