Monday, June 29, 2026
Google search engine
Homeಅಪರಾಧಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ: ಕೆಲವೇ ಗಂಟೆಯಲ್ಲಿ ವಿವಾಹಿತ ಅರೆಸ್ಟ್‌

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ವಿದ್ಯಾರ್ಥಿನಿ: ಕೆಲವೇ ಗಂಟೆಯಲ್ಲಿ ವಿವಾಹಿತ ಅರೆಸ್ಟ್‌

ಯಾದಗಿರಿ: ಶಹಾಪುರದ ವಸತಿ ಶಾಲೆಯೊಂದರ ಶೌಚಾಲಯದಲ್ಲೇ 9ನೇ ತರಗತಿ ವಿದ್ಯಾರ್ಥಿನಿಗೆ ಹೆರಿಗೆಯಾಗಿರುವ ಸಂಬಂಧ ಪೋಕ್ಸೊ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕೃತ್ಯ ನಡೆಸಿದ ಪ್ರಮುಖ ಆರೋಪಿಯನ್ನು ಪತ್ತೆಮಾಡಿ ವಶಕ್ಕೆ ಪಡೆದ ಪೊಲೀಸರ ಕಾರ್ಯಕ್ಕೆ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.

ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಬಾಲಕಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಆರೋಪಿ ಕುರುಬ ಸಮುದಾಯಕ್ಕೆ ಸೇರಿದವನಾಗಿದ್ದರಿಂದ ಅಟ್ರಾಸಿಟಿ ಪ್ರಕರಣವನ್ನು ಸೇರಿಸಿ ತ್ವರಿತ ಗತಿಯಲ್ಲಿ ಪ್ರಕ್ರಿಯೆ ಮುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಸುರಪುರ ಡಿವೈಎಸ್ಪಿ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಯು ಹಳ್ಳಿಯಲ್ಲಿ ಆಕೆಯ ಮನೆಯ ಬಳಿಯಲ್ಲೇ ವಾಸವಾಗಿದ್ದಾನೆ ಎಂದು ಹೇಳಲಾಗಿದೆ. ಆತನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವೂ ಇದೆ. ಆದರೂ, ಆತ ಈ ಹುಡುಗಿಯನ್ನು ಮರುಳು ಮಾಡಿ ಆಕೆಯ ಇಂಥ ಪರಿಸ್ಥಿತಿಗೆ ಕಾರಣನಾಗಿದ್ದಾನೆ ಎಂದು ಹೇಳಲಾಗಿದೆ.

ವಿದ್ಯಾರ್ಥಿನಿಯು 9ನೇ ತರಗತಿಯಲ್ಲಿ ಓದುತ್ತಿದ್ದು ಆಕೆ ಹಾಸ್ಟೆಲ್ ನಲ್ಲಿ ವಾಸವಾಗಿದ್ದಳು. ಹಾಸ್ಟೆಲ್ ಹತ್ತಿರದಲ್ಲೇ ತನ್ನ ಹಳ್ಳಿಯಿದಿದ್ದರಿಂದ ತನ್ನ ಮನೆಗೆ ಆಗಾಗ ಹೋಗಿಬರುತ್ತಿದ್ದಳು. ಆರೋಪಿಯು ಆಕೆಯ ಮನೆಯ ಬಳಿಯಲ್ಲೇ ವಾಸವಾಗಿದ್ದಾನೆ. ಮನೆ ಹತ್ತಿರದಲ್ಲಿದ್ದ ಆತ ಆಕೆಗೆ ಪರಿಚಯವಾಗಿದ್ದಾನೆ. ಅವರಿಬ್ಬರ ನಡುವೆ ಪ್ರೇಮವಾಗಿ ಅದೇ ಈ ಪರಿಸ್ಥಿತಿ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಆಕೆಗೆ, ತನ್ನ ವಸತಿ ನಿಲಯದ ಶೌಚಾಲಯದಲ್ಲಿ ಹೆರಿಗೆ ಆದಾಗಲೇ ವಿಚಾರ ಬೆಳಕಿಗೆ ಬಂದಿದೆ. ವರದಿಗಾರರ ಪ್ರಕಾರ, ಸಂತ್ರಸ್ಥ ಬಾಲಕಿಯನ್ನೂ ಪೊಲೀಸರಿಗೆ ಹೇಳಿಕೆ ನೀಡಿಲ್ಲ. ಆಕೆ ಹೆರಿಗೆಯಾಗಿ ಇನ್ನೂ ಶುಶ್ರೂಷೆಯಲ್ಲಿರುವುದೇ ಅದಕ್ಕೆ ಕಾರಣ. ಆದರೂ ಪ್ರಾಥಮಿಕ ತನಿಖೆಯಲ್ಲಿ ಈ ವಿಚಾರ ತಿಳಿದುಬಂದಿದೆ. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments