Friday, June 26, 2026
Google search engine
Homeಅಪರಾಧ14 ವರ್ಷದ ಬಾಲಕನ ಆತ್ಮಹತ್ಯೆಗೆ ಜಪಾನೀಸ್ `ಡೆತ್ ನೋಟ್’ ವೆಬ್ ಸ್ಟೋರಿಸ್ ಸ್ಫೂರ್ತಿ: ತನಿಖೆಯಲ್ಲಿ ಬಯಲು

14 ವರ್ಷದ ಬಾಲಕನ ಆತ್ಮಹತ್ಯೆಗೆ ಜಪಾನೀಸ್ `ಡೆತ್ ನೋಟ್’ ವೆಬ್ ಸ್ಟೋರಿಸ್ ಸ್ಫೂರ್ತಿ: ತನಿಖೆಯಲ್ಲಿ ಬಯಲು

ಬೆಂಗಳೂರು: ಕೆಲ ದಿನಗಳ ಹಿಂದೆ ನಗರದ ಸಿಕೆ ಅಚ್ಚುಕಟ್ಟುವಿನಲ್ಲಿ 7ನೇ ತರಗತಿ‌ ಬಾಲಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಜಪಾನೀಸ್ ಭಾಷೆಯ ವೆಬ್ ಸಿರೀಸ್ ಹುಚ್ಚಿನಿಂದ ಬಾಲಕ ಆತ್ಮಹತ್ಯೆ ಮಾಡುಕೊಂಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಜಾನಪದ ಕಲಾವಿದ ದಂಪತಿ ಗಣೇಶ್ ಪ್ರಸಾದ್ ಮತ್ತು ಸವಿತಾರ ಎರಡನೇ ಪುತ್ರ ಗಾಂಧರ್​​ (14 ) ಕಳೆದ ಆ.4ರಂದು ಡೆತ್​​ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಮೊದಲಿಗೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ.

ಆದರೆ ಸಿ.ಕೆ ಅಚ್ಚುಕಟ್ಟು ಪೊಲೀಸ ಪ್ರಾಥಮಿಕ ತನಿಖೆ ವೇಳೆ ಬಾಲಕನ ಸಾವಿಗೆ ಜಪಾನೀಸ್ ವೆಬ್ ಸಿರೀಸ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಏಕೆಂದರೆ ಆತನ ರೂಮ್​ನಲ್ಲಿ ವೆಬ್ ಸಿರೀಸ್​ ಪಾತ್ರದ ಚಿತ್ರ ಬರೆದಿದ್ದು ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

ಗಾಂಧಾರ್​, ಜಪಾನೀಸ್ ಭಾಷೆಯ ‘ಡೆತ್​​ನೋಟ್’ ಎಂಬ ವೆಬ್ ಸಿರೀಸ್ ನೋಡುತ್ತಿದ್ದ. ಇದರಿಂದ ಪ್ರೇರಣೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ‌ ವ್ಯಕ್ತವಾಗಿದೆ. ಪೊಲೀಸರ ತನಿಖೆ ವೇಳೆ ಈ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಬಾಲಕ ಬಳಸುತ್ತಿದ್ದ ಮೊಬೈಲ್ ಮತ್ತು ಪೋಷಕರನ್ನ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಏಕೆಂದರೆ ಜಪಾನೀಸ್ ವೆಬ್‌ ಸೀರಿಸ್‌ನಲ್ಲಿ ಒಂದು ಪಾತ್ರವಿದೆ. ಆ ಪಾತ್ರ ಹೇಳಿದಂತೆ ಹೀರೋ ನಡೆದುಕೊಳ್ಳುತ್ತಾನೆ. ಆ ಮಾಯಬುಕ್‌ನಲ್ಲಿ ಯಾರ ಹೆಸರು ಬರೆದು ಅವರು ಹೇಗೆ ಸಾಯಬೇಕು ಎಂದು ಊಹೆ ಮಾಡಿಕೊಂಡರೆ ಆ ವ್ಯಕ್ತಿ ಆ ರೀತಿ ಸಾಯುತ್ತಾನೆ. ಕೆಟ್ಟವರು ಯಾರು ಕೂಡ ಭೂಮಿ ಮೇಲೆ ಬದಕಬಾರದು. ಅವರನ್ನು ಕೊಲೆ ಮಾಡಬೇಕು ಎನ್ನುವುದೇ ಆ ವೆಬ್‌ ಸೀರಿಸ್‌ನ ಕಥಾವಸ್ತು. ಈ ಡೆತ್‌ನೋಟ್‌ ವೆಬ್‌ ಸೀರಿಸ್‌ ನೋಡಿ ಅದರ ಅದರ ಪ್ರಭಾವಕ್ಕೆ ಒಳಗಾಗಿ ಗಂಧಾರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಅತಿಯಾದ ಅಧ್ಯಾತ್ಮದ ಕಡೆಗೆ ಒಲವು ಇರುವ ಅನುಮಾನವೂ ವ್ಯಕ್ತವಾಗಿದೆ.

ಪ್ರಕರಣದ ಹಿನ್ನಲೆ:

ಬಾಲಕನ ತಾಯಿ ಸವಿತಾ ಕಾರ್ಯಕ್ರಮ ನಿಮಿತ್ತ ಆಸ್ಟ್ರೇಲಿಯಾಗೆ ತೆರಳಿದ್ದರು. ತಂದೆ, ಅಣ್ಣನ ಜತೆ ಚೆನ್ನಾಗಿಯೇ ಇದ್ದ ಗಾಂಧಾರ್​, ರಾತ್ರಿ ಅಪ್ಪ, ಅಣ್ಣ ಜತೆ ಊಟ ಮಾಡಿ ರೂಮ್​​ನಲ್ಲಿ ಮಲಗಿದ್ದಾನೆ. ಬೆಳಗ್ಗೆ 5.30ಕ್ಕೆ ತಂದೆ ಎದ್ದಿದ್ದು, ಶ್ವಾನವನ್ನ ವಾಕಿಂಗ್​ಗೆ ಕರೆದೊಯ್ಯಲು ರೂಮ್​​ಗೆ ಬಂದಿದ್ದಾರೆ. ಆಗ ಘನಘೋರವೇ ಕಂಡಿದೆ.
ಗಿಟಾರ್ ಸಿಕ್ಕಿಸುವ ಹೋಲ್ಡರ್​ಗೆ ಟವಲ್​​ನಿಂದ ನೇಣು ಬಿಗಿದುಕೊಂಡು ಗಾಂಧಾರ್​ ಆತ್ಮಹತ್ಯೆ ಮಾಡಿಕೊಂಡಿದ್ದ. ಗಾಂಧಾರ್​ ಡೆತ್​ನೋಟ್ ಕೂಡ ಬರೆದಿದ್ದು, ಹೆತ್ತವರ ಬಳಿ ಕ್ಷಮೆ ಕೇಳಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments