Tuesday, May 26, 2026
Google search engine
Homeಜ್ಯೋತಿಷ್ಯಜಟ್ಟಿಯಂತೆ ಮೆಟ್ಟಿ ಮಂತ್ರಿ ಪದವಿಗೆ ಅಟ್ಟಿ ಬರುವನೋ ಡಿಕೆಶಿ: ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ...

ಜಟ್ಟಿಯಂತೆ ಮೆಟ್ಟಿ ಮಂತ್ರಿ ಪದವಿಗೆ ಅಟ್ಟಿ ಬರುವನೋ ಡಿಕೆಶಿ: ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಭವಿಷ್ಯ

ಮಾಘ, ಪಾಲ್ಗುಣ, ಸಲ್ಪ ಗಟ್ಟುಂಡ ಯೋಗಿ ಅಟ್ಟುಂಡ ರಾಯ ಜಟ್ಟಿಯಂತೆ ಮೆಟ್ಟಿ ಮಂತ್ರಿಯ ಪದವಿಗೆ ಅಟ್ಟಿ ಬರುವನೋ ಡಿಕೆಶಿ ಎಂದು ಗಜೇಂದ್ರಗಡದ‌ ತಳ್ಳಿಹಾಳ ಸಂಸ್ಥಾನ, ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಭವಿಷ್ಯ ನುಡಿದಿದ್ದಾರೆ.

ಹಾಸನದ ಶ್ರೀ ಹಾಸನಾಂಬ ದೇವಾಲಯದಲ್ಲಿ ನಡೆದ ಸಾಮೂಹಿಕ 108 ಶ್ರೀ ದೇವಿ ಪುರಾಣ ಪಠಣ, ಹೋಮ ಮತ್ತು ಧರ್ಮಸಭೆಯಲ್ಲಿ ಮಾತನಾಡಿದ ಅವರು, ಈಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ 2 ವರ್ಷ ನಡೆದುಕೊಂಡು ಹೋಗುತ್ತದೆ. ಕಡಿದು ಕಟ್ಟೋರಿಲ್ಲ, ಕೂರಿಸಿ ಮೇವು ಹಾಕೋರಿಲ್ಲ. ಇದ್ದಿದು ಇದ್ದಾಂಗೆ ಹೇಳಿದರೇ ಯಾರು ಕೇಳೊರಿಲ್ಲ. ಈಗಿರುವ ಮುಖ್ಯಮಂತ್ರಿ ಉಚಿತ ಬಸ್, ಇತರೆ ಯೋಜನೆ ಮೂಲಕ ಒಳ್ಳೆ ಕೆಲಸ ಕೊಟ್ಟಿದ್ದಾರೆ. ಆದರೇಯ ಸಲ್ಪ ವ್ಯತ್ಯಾಸದ ಸಮಯ ಉಂಟು, ಮಾಘ, ಪಾಲ್ಗುಣ, ಸಲ್ಪ ಗಟ್ಟುಂಡ ಯೋಗಿ ಅಟ್ಟುಂಡ ರಾಯ ಜಟ್ಟಿಯಂತೆ ಮೆಟ್ಟಿ ಮಂತ್ರಿಯ ಪದವಿಗೆ ಅಟ್ಟಿ ಬರುವನೋ ಡಿಕೆಶಿ ಎಂದರು.

ರಾಜಕೀಯ ದ್ವೇಷದಲ್ಲಿ ಮತ್ತೆ ಭಿನ್ನ ಹೀಗೆ ಮುಂದುವರೆದರೆ ಸುಮಾರು 25 ರಿಂದ 28 ವರ್ಷದ ತನಕ ಈ ನಮ್ಮ ದೇಶವನ್ನು ಅಲುಗಾಡಿಸುವಂತಹ ಶಕ್ತಿ, ವ್ಯಕ್ತಿಗಳು ರಾಜಕೀಯ ಒಳಗೆ ಇವರ ಬಿಟ್ಟರೇ ಇನ್ಯಾರು ಹುಟ್ಟುವುದಿಲ್ಲ. ಸದ್ಯಕ್ಕೆ ಯಾರು ಇಲ್ಲ. 2029ಕ್ಕೆ 450 ರಿಂದ 472 ಸೀಟು ಅವರೇ ಬರ‍್ತಾರೆ. ಹೊಸ ಇತಿಹಾಸ ನಿರ್ಮಾಣ ಮಾಡುವ ವ್ಯಕ್ತಿಗಳು ಆಗುತ್ತಾರೆ. ದೇಶದ ರಾಜಕೀಯದ ಬಗ್ಗೆ ಭವಿಷ್ಯ ನುಡಿದರು.
ಹಾಸನದವರೇ ಸಿಎಂ ಅಥವಾ ಪಿಎಂ ಆಗ್ತಾರೆ

ಹಳ್ಳಿ-ಹಳ್ಳ ತುಂಬಿ ಹರಿಯುವಾಗ ಉಳ್ಳವನು ಶಿವಪೂಜೆ ಮಾಡುವಾಗ, ಸಂಸರಾ ಸಂಗಿ ನಿಸ್ಸಂಗ ಪರಿತ್ಯಾಗಿ ಅವನೆ ಮತ್ತೊಂದು ಸಾರಿ ಹಾಸನದೊಳಗ ಕರ್ನಾಟಕದ ಪ್ರಧಾನಿಯೇ ಆಗಬಹುದು, ಮುಖ್ಯಮಂತ್ರಿಯೇ ಆಗಬಹುದು ಎಂದು ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಭವಿಷ್ಯ ನುಡಿದಿದ್ದಾರೆ.

ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ರಾಜಕೀಯದಲ್ಲಿಯೇ ದೊಡ್ಡ ಪರಿವರ್ತನೆಗಳು ನಡೆಯಲಿದ್ದು, ಹಾಸನದವರೇ ಮುಂದಿನ ಮುಖ್ಯಮಂತ್ರಿ ಅಥವಾ ಪ್ರಧಾನಿ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಹಾಸನ ಜಿಲ್ಲೆಯೇ ಮತ್ತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ದಿನಗಳು ದೂರವಿಲ್ಲ. ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಹಾಸನದೊಳಗಿಂದಲೇ ಹೊರಬರುವ ಸಾಧ್ಯತೆ ಇದೆ ಎಂದರು.

ರಾಜಕೀಯದ ಬಗ್ಗೆ ನಾನು ಇದ್ದಿದ್ದು ಇದ್ದಂಗೆ ಹೇಳುವೆ. ನಾನು ಯಾರ ಬಳಿ ಹಣ ತಿಂದಿರುವುದಿಲ್ಲ. ಯಾವ ರಾಜಕಾರಣಿಯಾದರೂ ನಮ್ಮ ಮಠಕ್ಕೆ ಬಂದರೆ ಚಾಪೆ ಮೇಲೆ ಕೂರಬೇಕು. ಯಾವ ಶಾಸಕರನ್ನು ಕರೆದು ನಾನು ಮಠದಲ್ಲಿ ಸನ್ಮಾನ ಮಾಡಿಲ್ಲ. ಹಣ ಕೊಡು ಎಂದು ಯಾರ ಬಳಿ ಕೈವೊಡ್ಡಿ ಬೇಡಿಲ್ಲ. ನಮ್ಮ ಸಾನಿಧ್ಯ ಹೇಗೆ ಇರಬೇಕೆಂದರೆ ರಾಜಕಾರಣಿಗಳಿಗೆ ಆಶೀರ್ವಾದ ಮಾಡಬೇಕು. ಸಮಾಜವನ್ನು ತಿದ್ದಿ ಶುದ್ಧವಾಗಿ ಬದುಕು ಮಾಡುವಂತೆ ನಾವು ಸರಿಯಾಗಿ ಕಲಿಸಬೇಕು. ಅವರಿಂದ ದಕ್ಷಿಣೆ ಬಯಸುವ ಸ್ವಾಮೀಜಿಗಳು ನಾವಾಗಬಾರದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅವನ ಮನೆತನಕ್ಕೆ ಅಂಟಿಕೊಂಡಿರುವ ಕಪ್ಪುಚುಕ್ಕಿ ಹೊರಗೆ ಬರುತ್ತದೆ. ಹಳ್ಳಿ-ಹಳ್ಳ ತುಂಬಿ ಹರಿಯುವಾಗ ಉಳ್ಳವನು ಶಿವಪೂಜೆ ಮಾಡುವಾಗ, ಸಂಸರಾ ಸಂಗಿ ನಿಸ್ಸಂಗ ಪರಿತ್ಯಾಗಿ ಅವನೆ ಮತ್ತೊಂದು ಸಾರಿ ಹಾಸನದೊಳಗ ಕರ್ನಾಟಕದ ಪ್ರಧಾನಿಯೇ ಆಗಬಹುದು, ಮುಖ್ಯಮಂತ್ರಿಯೇ ಆಗಬಹುದು ಎಂದಿದ್ದಾರೆ.

ಒಂದು ದಿವಸ ಇರುತೈತೆ, ಹೋಗುತೈತೆ. ಈ ಹಿಂದೆ 2016 ರಲ್ಲಿ ಕಂಬಳಿ ಉರುಳಾದಿತು ಎಂದಾಗ ಇದೆ ಸಿಎಂ ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿಯಾದರು. 2012 ಮಾರ್ಚ್ 12 ರಂದು ಹಳ್ಳಿ ಹಳ್ಳ ತುಂಬಿ ಹರಿಯುವಾಗ ಉಳ್ಳವನು ಶಿವಪೂಜೆ ಮಾಡುವಾಗ ಸಂಸರಾ ನಸಂಗಿ ನಿಸಂಗ ಪರಿತ್ಯಾಗಿ ಅವನೇ ದೇಶಕ್ಕೆ ಮೂರು ಬಾರಿ ಪ್ರಧಾನಿಯಾಗುತ್ತಾನೆ ಎಂದು ನುಡಿದಿದ್ದೆ ಎಂದು ನರೇಂದ್ರ ಮೋದಿ ಪ್ರಧಾನಿಯಾಗುವ ಬಗ್ಗೆ ನುಡಿದ್ದ ಭವಿಷ್ಯ ನೆನಪಿಸಿದರು.

ಮುಂದಿನ ಇತಿಹಾಸವನ್ನು ನಿಮ್ಮ ಹಾಸನ ಹೊಸ ಮತ್ತೊಂದು ಶಾಸನ ಬರೆಯುತ್ತದೆ. ಕಿಡಿಗಣ್ಣಯ್ಯ ಮಹಾಸ್ವಾಮಿಗಳು ಮಾಡಿದ ಪುಣ್ಯದ ಪ್ರತಿಫಲ ನಿಮ್ಮ ಹಾಸನದಲ್ಲಿ ಸುಹಾಸನೆ ಬೀರುವಂತಹ ಒಂದು ಶಕ್ತಿ ಕೆಂಪು ಭಾವುಟ ಹಾರಿಸುವಂತಹ ವ್ಯಕ್ತಿಗಳು ಮತ್ತೆ ಬರುತ್ತಾರೆ. ನಿಮ್ಮ ಹಾಸನ ಚೆಲುವಾಗುತ್ತದೆ ಎಂದು ಅವರು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments