Tuesday, July 28, 2026
Google search engine
Homeಕ್ರೀಡೆKabaddi ಪ್ರೊ.ಕಬಡ್ಡಿ ಲೀಗ್: ಗುಜರಾತ್ ಎದುರು ಬೆಂಗಳೂರು ರೋಚಕ ಟೈ

Kabaddi ಪ್ರೊ.ಕಬಡ್ಡಿ ಲೀಗ್: ಗುಜರಾತ್ ಎದುರು ಬೆಂಗಳೂರು ರೋಚಕ ಟೈ

ನೋಯ್ಡಾ: ಪ್ರೊ ಕಬಡ್ಡಿ 11ನೇ ಆವೃತ್ತಿಯ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಈ ಮೂಲಕ ಬುಲ್ಸ್ ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಟೈ ಸಾಧಿಸಿದೆ.

ಈ ಪಂದ್ಯದಲ್ಲಿ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು. ಬೆಂಗಳೂರು 19 ಅಂಕಗಳೊಂದಿಗೆ 12ನೇ ಸ್ಥಾನ, 29 ಅಂಕಗಳೊಂದಿಗೆ ಜೈಂಟ್ಸ್ 10ನೇ ಸ್ಥಾನದಲ್ಲಿದೆ.

ಮೊದಲ ಪಂದ್ಯದಿಂದ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ಹಂತದಲ್ಲಿ ಬುಲ್ಸ್ 15-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ತಲಾ 7 ಅಂಕಗಳನ್ನು ಹಾಕಿಕೊಂಡವು. ಈ ಅವಧಿಯಲ್ಲಿ ಯಾವುದೇ ತಂಡ ಆಲೌಟ್ ಆಗಲೇ ಇಲ್ಲ.

ಎರಡನೇ ಅವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಈ ಪಂದ್ಯದಲ್ಲಿ ಎರಡೂ ತಂಡಗಳು ತಲಾ ಒಂದು ಬಾರಿ ಬೋಸ್ ಅಂಕವನ್ನು ಕಲೆ ಹಾಕಿದವು.

ಈ ವೇಳೆ ಉಭಯ ತಂಡಗಳು ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಕೊನೆಯ ಎರಡು ನಿಮಿಷದ ಆಟ ನಿಜಕ್ಕೂ ರೋಚಕತೆಯಿಂದ ಕೂಡಿತ್ತು. ಕೊನೆಯ ಕ್ಷಣದ ಆಟದಲ್ಲಿ ಉಭಯ ತಂಡಗಳು ಅಮೋಘ ಆಟದ ಪ್ರದರ್ಶನ ನೀಡಿದವು.

ಮುಂಬಾಗೆ ಗೆಲುವು: ಎರಡನೇ ಪಂದ್ಯದಲ್ಲಿ ಯು ಮುಂಬಾ 43-29 ಅಂಕಗಳೊಂದಿಗೆ ಪುಣೇರಿ ಪಲ್ಟನ್ ವಿರುದ್ಧ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅಜಿತ್ ಚೌಹಾಣ್ ಅಮೋಘ ಪ್ರದರ್ಶನ ನೀಡಿ 12 ಅಂಕ ಕಲೆ ಹಾಕಿದವು.

ಈ ಪಂದ್ಯದಲ್ಲಿ ಜಯ ಸಾಧಿಸುತ್ತಿದ್ದಂತೆ ಮುಂಬಾ ತಂಡ 51 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಮುಂಬಾ ಟೂರ್ನಿಯಲ್ಲಿ ಸಾಧಿಸಿದ 9ನೇ ಗೆಲುವು ಇದಾಗಿದೆ. ಪುಣೇರಿ ಟೂರ್ನಿಯಲ್ಲಿ ಆರನೇ ಸೋಲು ಕಂಡಿದ್ದು 42 ಅಂಕಗಳನ್ನು ಸೇರಿಸಿದ್ದು, 6ನೇ ಸ್ಥಾನವನ್ನು ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments