Tuesday, May 26, 2026
Google search engine
Homeರಾಜ್ಯಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ 1,425 ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ: ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ 1,425 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ದೇಶದ ವಿವಿಧ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳ ನೇಮಕಾತಿಗೆ ಖಾಲಿ ಇರುವ ಹುದ್ದೆಗಳ ಭರ್ತಿಗೆ ಇನ್ಸ್​ಟಿಟ್ಯೂಟ್​ ಆಫ್​ ಬ್ಯಾಂಕಿಂಗ್​ ಪರ್ಸೆನಲ್​ ಸೆಲೆಕ್ಷನ್​ (ಐಬಿಪಿಎಸ್)​ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಆರ್​ಆರ್​ಬಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​)ನ ಕ್ಲರ್ಕ್​ ಹಾಗೂ ಗ್ರೂಪ್​ ಎ ಆಫೀಸರ್ಸ್​ ಸ್ಕೇಲ್​ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು: ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್​ ಆಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಒಟ್ಟು 1,425 ಹುದ್ದೆಗಳ ಭರ್ತಿ ನಡೆಯಲಿದೆ.

ಹುದ್ದೆಗಳು ಯಾವುವು?:

ಆಫೀಸ್​ ಅಸಿಸ್ಟೆಂಟ್​ (ಕ್ಲರ್ಕ್)- 800

ಸಹಾಯಕ ವ್ಯವಸ್ಥಾಪಕ (ಆಫೀಸರ್​ ಸ್ಕೇಲ್​- 1) – 500

ವ್ಯವಸ್ಥಾಪಕ (ಆಫೀಸರ್​ ಸ್ಕೇಲ್​- 2)- 125

ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ:

ಆಫೀಸ್​ ಅಸಿಸ್ಟೆಂಟ್​ (ಕ್ಲರ್ಕ್) ಹುದ್ದೆಗೆ ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ

ಸಹಾಯಕ ವ್ಯವಸ್ಥಾಪಕ (ಆಫೀಸರ್​ ಸ್ಕೇಲ್​- 1) ಕನಿಷ್ಟ 18 ವರ್ಷ, ಗರಿಷ್ಟ 30 ವರ್ಷ

ವ್ಯವಸ್ಥಾಪಕ (ಆಫೀಸರ್​ ಸ್ಕೇಲ್​- 2)- ಕನಿಷ್ಟ 21 ವರ್ಷ, ಗರಿಷ್ಠ 32 ವರ್ಷ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುವುದು. ಮೊದಲಿಗೆ ಪ್ರಿಲಿಮಿನರಿ ಎಕ್ಸಾಮಿನೇಷನ್​ ನಂತರ ಮುಖ್ಯ ಪರೀಕ್ಷೆ (ಬಹು ಆಯ್ಕೆ) ಕಡೆಯದಾಗಿ ಸಂದರ್ಶನ ನಡೆಯಲಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಐಬಿಪಿಎಸ್​ ಅಧಿಕೃತ ಜಾಲತಾಣದ ಮೂಲಕ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡಿ ಅಧಿಸೂಚನೆಯನ್ನು ಮೊದಲು ಸರಿಯಾಗಿ ಓದಿಕೊಳ್ಳಬೇಕು. ಅರ್ಜಿ ಸಲ್ಲಿಸುವವರು ಆರ್​ಆರ್​ಬಿ ಮಾರ್ಗಸೂಚಿ ಅನುಸಾರ ಸ್ಥಳೀಯ ಭಾಷೆ ಮಾತನಾಡಲು ಬಲ್ಲವರಾಗಿರಬೇಕು.

ಅರ್ಜಿ ಶುಲ್ಕ: ಪ.ಜಾ, ಪ.ಪಂ, ವಿಕಲಚೇತನ ಅಭ್ಯರ್ಥಿಗಳಿಗೆ 175 ರೂ ಅರ್ಜಿ ಶುಲ್ಕ ಹಾಗೂ ಇತರೆ ಅಭ್ಯರ್ಥಿಗಳಿಗೆ 850 ರೂ ಅರ್ಜಿ ಶುಲ್ಕವಿದೆ.

ಈ ಹುದ್ದೆಗೆ ಸೆಪ್ಟೆಂಬರ್​ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 21 ಅಂತಿಮ ದಿನ.

ಪ್ರತಿಭಾ ಸೇತು ಪೋರ್ಟಲ್:

ಯುಪಿಎಸ್‌ಸಿ ಅಭ್ಯರ್ಥಿಗಳಿಗಾಗಿ ಕೇಂದ್ರ ಸರ್ಕಾರ ವಿಶೇಷ ‘ಪ್ರತಿಭಾ ಸೇತು ಪೋರ್ಟಲ್’ ಸ್ಥಾಪಿಸಿದೆ. ಈ ಪೋರ್ಟಲ್ ಮೂಲಕ ಯುಪಿಎಸ್‌ಸಿ ಅಭ್ಯರ್ಥಿಗಳು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಮ್ಮ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದ 125ನೇ ಸಂಚಿಕೆಯಲ್ಲಿ ಮಾತನಾಡಿರುವ ಪ್ರಧಾನಿ, ಯುಪಿಎಸ್‌ಸಿ ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ನಾಗರಿಕ ಸೇವಾ ಪರೀಕ್ಷೆ. ಸಾವಿರಾರು ಪ್ರತಿಭಾನ್ವಿತ ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸಣ್ಣ ಅಂತರದಿಂದ ತಪ್ಪಿಸಿಕೊಳ್ಳುತ್ತಾರೆ. ಪರಿಣಾಮವಾಗಿ ಮತ್ತೆ ಇತರ ಪರೀಕ್ಷೆಗಳಿಗೆ ತಯಾರಿ ನಡೆಸಬೇಕಾಗುತ್ತದೆ. ಇದರಿಂದಾಗಿ ಸಮಯ ಮತ್ತು ಹಣ ಎರಡೂ ನಷ್ಟವಾಗುತ್ತದೆ. ಅಂತಹ ಅಭ್ಯರ್ಥಿಗಳಿಗಾಗಿ ನಾವು ಹೊಸ ಡಿಜಿಟಲ್ ಪೋರ್ಟಲ್ ಪ್ರಾರಂಭಿಸಿದ್ದೇವೆ. ಅದರ ಹೆಸರು ಪ್ರತಿಭಾ ಸೇತು ಎಂದು ತಿಳಿಸಿದ್ದರು.

ಯುಪಿಎಸ್‌ಸಿ ನಡೆಸಿದ ಪರೀಕ್ಷೆಗಳ ಎಲ್ಲಾ ಹಂತಗಳನ್ನು ದಾಟಿದ ನಂತರ ಅಂತಿಮ ಪಟ್ಟಿಗೆ ಬರದವರ ಮಾಹಿತಿಯನ್ನು ಈ ಪ್ರತಿಭಾ ಸೇತು ಪೋರ್ಟಲ್​ ಒಳಗೊಂಡಿರುತ್ತದೆ. ಈ ಪೋರ್ಟಲ್ 10,000ಕ್ಕೂ ಹೆಚ್ಚು ಪ್ರತಿಭಾನ್ವಿತ ಜನರ ಡೇಟಾವನ್ನು ಒಳಗೊಂಡಿದೆ. ಈ ಪೋರ್ಟಲ್ ಮೂಲಕ, ಖಾಸಗಿ ಕಂಪನಿಗಳು ಅಭ್ಯರ್ಥಿಗಳ ಸಾಮರ್ಥ್ಯವನ್ನು ತಿಳಿದುಕೊಳ್ಳಬಹುದು. ಅವರಿಗೆ ಉದ್ಯೋಗಗಳನ್ನು ನೀಡಬಹುದು. ನೂರಾರು ಅಭ್ಯರ್ಥಿಗಳು ಈ ಪೋರ್ಟಲ್ ಮೂಲಕ ಈಗಾಗಲೇ ಉದ್ಯೋಗಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments