Friday, December 12, 2025
Google search engine
Homeರಾಜ್ಯಪ್ರೀತಿಯ ಹಸು ಕೊಂದ ಸಿಟ್ಟಿಗೆ ವಿಷ ಹಾಕಿ 5 ಹುಲಿಗಳ ಕೊಲೆ ಮಾಡಿದ ಮೂವರು ಅರೆಸ್ಟ್

ಪ್ರೀತಿಯ ಹಸು ಕೊಂದ ಸಿಟ್ಟಿಗೆ ವಿಷ ಹಾಕಿ 5 ಹುಲಿಗಳ ಕೊಲೆ ಮಾಡಿದ ಮೂವರು ಅರೆಸ್ಟ್

ಚಾಮರಾಜನಗರರ: 4 ಮರಿ ಸೇರಿ 5 ಹುಲಿಗಳ ಸಾವು ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮಲೆಮಹದೇಶ್ವರ ವನ್ಯಧಾಮದಲ್ಲಿ ಹುಲಿಗಳನ್ನು ಕೊಂದ ಮಾದ ಅಲಿಯಾಸ್ ಮಾದುರಾಜು, ನಾಗರಾಜ್ ಮತ್ತು ಕೂನಪ್ಪ ಅವರನ್ನು ಬಂಧಿಸಲಾಗಿದೆ.

ಹನೂರು ತಾಲೂಕಿನ ಕೊಪ್ಪ ಗ್ರಾಮದ ಹಸುವಿನ ಮಾಲೀಕ ಕೋನಪ್ಪ ಹಾಗೂ ಹಸುವಿನ ಮೃತದೇಹಕ್ಕೆ ವಿಷಪ್ರಾಶನ ಮಾಡಿದ ಆರೋಪದ ಮೇಲೆ ಮಾದುರಾಜ್ ಹಾಗೂ ನಾಗರಾಜು ಪೂಜಾರಿಗೌಡ ಎಂಬ ದನಗಾಹಿಗಳನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಮೀಣ್ಯಂ ಸಮೀಪವೇ ಕೊಪ್ಪ ಗ್ರಾಮವಿದೆ. ಜಾನುವಾರುಗಳಿಗೆ ಹುಲಿ ಉಪಟಳ ಕೊಡುತ್ತಿದ್ದು, ಪ್ರೀತಿಯ ಹಸುವನ್ನು ಕೊಂದು ತಿಂದ ಕೋಪಕ್ಕೆ ಹುಲಿ ಕೊಲೆ ಮಾಡಿದ್ದು, ಬೇಟೆಯಾಡಿದ್ದ ಹಸುವಿನ ದೇಹಕ್ಕೆ ಕ್ರಿಮಿನಾಶಕ ಸಿಂಪಡಿಸಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಮಾದ ಅಲಿಯಾಸ್ ಮಾದುರಾಜುಗೆ ಸೇರಿದ್ದ ಕೆಂಚಿ ಎಂಬ ಹೆಸರಿನ ಹಸುವನ್ನು ಹುಲಿ ಬಲಿ ಪಡೆದಿತ್ತು. ತನ್ನ ನೋವನ್ನು ನಾಗರಾಜ್ ಬಳಿ ಹೇಳಿಕೊಂಡು ಮಾದ ಕಣ್ಣೀರಿಟ್ಟಿದ್ದ. ಬಳಿಕ ಹಸು ಕೊಂದ ಹುಲಿ ಕೊಲ್ಲಲು ಇಬ್ಬರು ನಿರ್ಧರಿಸಿದ್ದರು. ಹಾಗಾಗಿ ಹುಲಿ ಕೊಲ್ಲಲು ಕ್ರಿಮಿನಾಶಕ ಕೂಡ ತಂದಿದ್ದರು. ಹುಲಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಆರೋಪಿಗಳಿಗೆ ಕೂನಪ್ಪ ನೆರವು ನೀಡಿದ್ದರು.

ನಾಗರಾಜ್ ಮೃತ ಹಸುವಿಗೆ ಕ್ರಿಮಿನಾಶಕ ಹಾಕಿ ಬಂದಿದ್ದ. ಮರುದಿನ ವಿಷಪೂರಿತ ಹಸುವಿನ ಮಾಂಸ ತಿಂದು ಹುಲಿ ಮರಿಗಳು ಸತ್ತಿದ್ದವು. ಇತ್ತ ಹುಲಿಗಳು ಸತ್ತಿದ್ದನ್ನು ನೋಡಿ ಮಾದುರಾಜು ಸಂತಸ ಪಟ್ಟಿದ್ದ. ವಿಚಾರಣೆ ವೇಳೆ ಆರೋಪಿಗಳು ಒಂದೊಂದೆ ಸತ್ಯವನ್ನು ಬಾಯ್ಬಿಡುತ್ತಿದ್ದಾರೆ.

ಮಗನನ್ನು ಬಚಾವ್​​ ಮಾಡಲು ಮುಂದಾಗಿದ್ದ ತಂದೆ ​

ಪ್ರಕರಣ ಬೆನ್ನಲ್ಲೇ ಮಾದ ಅಲಿಯಾಸ್ ಮಾದುರಾಜು ಪರಾರಿಯಾಗಿದ್ದ. ಕೊಳ್ಳೇಗಾಲ ಡಿವೈಎಸ್​​ಪಿ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ಮಾದುರಾಜು ನನ್ನು ಬಂಧಿಸಲಾಗಿದೆ.

ಪೊಲೀಸರು ವಿಚಾರಣೆ ನಡೆಸಿದಾಗ ಮಾದ ಆರೋಪಿ ಎಂಬುದು ದೃಢವಾಗಿದ್ದು, ತನ್ನ ಹಸುವನ್ನ ಕೊಂದಿದ್ದಕ್ಕೆ ವಿಷ ಹಾಕಿರುವುದಾಗಿ ಮಾದ ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ್ದಾರೆ. ಆದರೆ ಪುತ್ರ ಮಾದನನ್ನು ಬಚಾವ್ ಮಾಡಲು ತಂದೆ ಶಿವಣ್ಣ ನಾನೇ ವಿಷ ಹಾಕಿರುವುದಾಗಿ ಸ್ಟೇಟ್​ಮೆಂಟ್ ಕೊಟ್ಟಿದ್ದರು. ಹಾಗಾಗಿ ಮಾದ ತಂದೆ ಶಿವಣ್ಣನನ್ನು ಪ್ರಕರಣದಿಂದ ಕೈಬಿಡಲಾಗಿದೆ.

ತನಿಖಾ ತಂಡದಲ್ಲಿ ಬದಲಾವಣೆ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಾ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ತನಿಖಾ ತಂಡದ ಮುಖ್ಯಸ್ಥರಾಗಿ ಪಿಸಿಸಿಎಫ್ ರವಿ ಬದಲಾಗಿ ಎಪಿಸಿಸಿಎಫ್​ (APCCF) ಕುಮಾರ್ ಪುಷ್ಕರ್​​ ಅವರನ್ನು ನೇಮಕ ಮಾಡಲಾಗಿದೆ. ಪಿಸಿಸಿಎಫ್ ರವಿ ಕೋರಿಕೆ ಮೇರೆಗೆ ತನಿಖಾ ತಂಡದ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ.

ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್​​, ಎಪಿಸಿಸಿಎಫ್ ಶ್ರೀನಿವಾಸಲು, ಎನ್‌ಟಿಸಿಎ ಪ್ರತಿನಿಧಿ ಮಲ್ಲೇಶಪ್ಪ, ಮೈಸೂರು ಮೃಗಾಲಯದ ಪಶುವೈದ್ಯಾಧಿಕಾರಿ ಶಶಿಧರ್ ವನ್ಯಜೀವಿ ತಜ್ಞ ಡಾ.ಸಂಜಯ್‌ಗುಬ್ಬಿ ಅವರನ್ನು ತನಿಖಾ ತಂಡ ಒಳಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments