Sunday, June 7, 2026
Google search engine
Homeವಿದೇಶಖಮೇನಿ ಉತ್ತರಾಧಿಕಾರಿಯಾಗಿ ಪುತ್ರ ಮೊಜತಬಾ ಆಯ್ಕೆ?

ಖಮೇನಿ ಉತ್ತರಾಧಿಕಾರಿಯಾಗಿ ಪುತ್ರ ಮೊಜತಬಾ ಆಯ್ಕೆ?

ಟೆಹರಾನ್‌: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಅವರ 2ನೇ ಪುತ್ರ ಮೊಜತಬಾ ಖಮೇನಿ ನೇಮಕಗೊಳ್ಳಲಿದ್ದು, ಬುಧವಾರ ರಾತ್ರಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಇಸ್ಲಾಮಿಕ್ ರಿಪಬ್ಲಿಕ್ ರಾಷ್ಟ್ರದಲ್ಲಿ ಆಯೊತುಲ್ಲಾ ಅಲಿ ಖಮೇನಿ ಹತ್ಯೆ ಹಿನ್ನೆಲೆಯಲ್ಲಿ ಯುದ್ಧದ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಲು ಅವರ ಪುತ್ರ ಮೊಜತಬಾ ಖಮೇನಿ ಅವರಿಗೆ ಉತ್ತರಾಧಿಕಾರಿ ಪಟ್ಟಕ್ಕೇರಿಸಲಾಗುತ್ತಿದೆ ಎಂದು ಹೇಳಲಾಗಿದೆ.

ಇರಾನ್ ಅಸೆಂಬ್ಲಿಯ ತಜ್ಞರ ಮಂಡಳಿ ಇರಾನ್‌ ಪರಮೋಚ್ಚ ನಾಯಕರಾಗಿ ಖಮೇನಿ ಅವರ ಪುತ್ರ 56 ವರ್ಷದ ಮೊಜತಬಾ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗಿದ್ದು, ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಜತಬಾ ಅವರು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ದೇಶವನ್ನು ಮುನ್ನಡೆಸಲು, ದೇಶದ ಭದ್ರತೆ ಹಾಗೂ ಮಿಲಿಟರಿಯ ನಿರ್ವಹಣೆ ಮಾಡಲು ಮೊಜತಬಾ ಅವರಿಗೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಸ್ಲಾಮಿಕ್ ರಿಪಬ್ಲಿಕ್ ದೇಶದಲ್ಲಿ ಮೊದಲಿನಿಂದಲೂ ವಂಶಾಡಳಿತಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದವು. ಹಾಗಾಗಿ ಮೊಜತಬಾ ಅವರಿಗೆ ಅಧಿಕಾರ ನೀಡಿದರೆ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಆತಂಕವೂ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments