ಮಧ್ಯಪ್ರಾಚ್ಯಕ್ಕೆ ಸೀಮಿತವಾಗಿದ್ದ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಣ ಯುದ್ಧ ಇದೀಗ ಭಾರತದ ಸಮೀಪ ಬಂದಿದ್ದು, ಶ್ರೀಲಂಕಾದ ಬಳಿ ಇರಾನ್ ಹಡಗಿನ ಮೇಲೆ ಜಲಾಂತರ್ಗಾಮಿ ದಾಳಿ ನಡೆಸಿದೆ.
ಬುಧವಾರ ಶ್ರೀಲಂಕಾದ ಸಮುದ್ರದಲ್ಲಿ ಈ ದಾಳಿ ನಡೆಸಿದ್ದು, ಇರಾನ್ ಹಡಗಿನಲ್ಲಿದ್ದ 101 ಮಂದಿ ನಾಪತ್ತೆಯಾಗಿದ್ದು, 78 ಮಂದಿ ಗಾಯಗೊಂಡಿದ್ದಾರೆ. 30 ಮಂದಿಯನ್ನು ರಕ್ಷಿಸಲಾಗಿದೆ.
ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಈ ವಿಷಯ ದೃಢಪಡಿಸಿದ್ದು, ಐಆರ್ ಐಎಸ್ ಡೆನಾ ಹೆಸರಿನ ಹಡಗಿನಲ್ಲಿ 180 ಮಂದಿ ಇದ್ದರು ಎಂದು ತಿಳಿದು ಬಂದಿದ್ದು ಕೂಡಲೇ ರಕ್ಷಣೆಗೆ ಹಡಗು ಹಾಗೂ ಹೆಲಿಕಾಪ್ಟರ್ ಗಳನ್ನು ರವಾನಿಸಲಾಗಿದೆ ಎಂದು ತಿಳಿಸಿದೆ.
ದಾಳಿಯಲ್ಲಿ ಹಡಗು ಮುಳುಗಡೆ ಆಗಿದ್ದು, 30 ಮಂದಿಯನ್ನು ರಕ್ಷಿಸಲಾಗಿದೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, 7 ಮಂದಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಯಾವ ದೇಶದ ಹಡಗು ದಾಳಿ ಮಾಡಿದೆ. ದಾಳಿಗೆ ಒಳಗಾದ ಹಡಗು ಯಾವುದು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಶ್ರೀಲಂಕಾ ತಿಳಿಸಿದೆ.



