Sunday, June 7, 2026
Google search engine
Homeದೇಶಜಪಾನ್ ನಲ್ಲಿ 7.5 ತೀವ್ರೆತೆಯ ಭೂಕಂಪನ; ಅಪ್ಪಳಿಸಿದ 80 ಸೆಂ.ಮೀ. ಎತ್ತರದ ಸುನಾಮಿ

ಜಪಾನ್ ನಲ್ಲಿ 7.5 ತೀವ್ರೆತೆಯ ಭೂಕಂಪನ; ಅಪ್ಪಳಿಸಿದ 80 ಸೆಂ.ಮೀ. ಎತ್ತರದ ಸುನಾಮಿ

ಟೋಕಿಯೊ: ಉತ್ತರ ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 80 ಸೆಂಟ್ ಮೀಟರ್ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ.

ಜಪಾನ್ ಹವಾಮಾನ ಸಂಸ್ಥೆ ಸ್ಯಾನ್ರಿಕು ಕರಾವಳಿಯಲ್ಲಿ ಭಾನುವಾರ ಸಂಜೆ 4:53ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು ಹೇಳಿದೆ.

ಭೂಕಂಪನ ತೀವ್ರತೆ ಎಷ್ಟಿತ್ತೆಂದರೆ ಭೂಕಂಪನ ಸಂಭವಿಸಿದ 100 ಕಿ.ಮೀ. ದೂರದಲ್ಲಿರುವ ರಾಜಧಾನಿ ಟೋಕಿಯೊದಲ್ಲಿ ಕೂಡ ಬೃಹತ್ ಕಟ್ಟಡಗಳು ಅಲ್ಲಾಡಿವೆ. ಭೂಕಂಪನ ಸಂಭವಿಸಿದ 40 ನಿಮಿಷಗಳ ನಂತರ ಸುನಾಮಿ ಅಲೆಗಳು ಕಾಣಿಸಿಕೊಂಡಿವೆ.

ಸಮುದ್ರ ಮಟ್ಟಕ್ಕಿಂತ ಸುಮಾರು 10 ಕಿಲೋ ಮೀಟರ್ (6 ಮೈಲಿ) ಆಳದಲ್ಲಿ 7.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ಕಡಲ ತೀರಗಳಿಗೆ ಸಾಮಾನ್ಯಕ್ಕಿಂತ 80 ಸೆಂಟಿ ಮೀಟರ್ ನಿಂದ 3 ಅಡಿ ಎತ್ತರದ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿದೆ ಎಂದು ಸಂಸ್ಥೆ ತಿಳಿಸಿದೆ.

2011ರ ಮಾರ್ಚ್ 11ರಂದು ಸಂಭವಿಸಿದ 9.0 ತೀವ್ರತೆಯ ಭಾರೀ ಭೂಕಂಪ ಮತ್ತು ಸುನಾಮಿ ಉತ್ತರ ಜಪಾನ್‌ನ ಕೆಲವು ಭಾಗಗಳನ್ನು ನಾಶಗೊಳಿಸಿದ್ದು, 22,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಸುಮಾರು 5 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದಿದ್ದರು.

ಸುನಾಮಿಪೀಡಿತ ಫುಕುಶಿಮಾ ಡೈಚಿ ಪರಮಾಣು ವಿದ್ಯುತ್ ಸ್ಥಾವರದಿಂದ ಹೊರಹೊಮ್ಮಿದ ವಿಕಿರಣದಿಂದಾಗಿ ಅಂದಾಜು 1,60,000 ಜನರು ಫುಕುಶಿಮಾದಲ್ಲಿ ತಮ್ಮ ಮನೆ ತೊರೆದಿದ್ದರು. ಇವರಲ್ಲಿ ಸುಮಾರು 26,000 ಜನರು ಬೇರೆಡೆ ನೆಲೆಸಿದ್ದು, ಅವರ ಊರುಗಳು ನಿರ್ಬಂಧಿತವಾಗಿಲ್ಲದ ಕಾರಣ ಮನೆಗಳನ್ನು ತೊರೆದಿರಲಿಲ್ಲ.

ಜಪಾನ್ ನಲ್ಲಿ ಪ್ರತಿ ವರ್ಷ 1500ಕ್ಕೂ ಅಧಿಕ ಕಂಪನಗಳ ಅನುಭವ ಇಲ್ಲಿನ ಜನರಿಗೆ ಆಗುತ್ತದೆ. ಜಗತ್ತಿನ ಒಟ್ಟಾರೆ ಭೂಕಂಪನದಲ್ಲಿ ಶೇ.18ರಷ್ಟು ಜಪಾನ್ ನಲ್ಲಿ ಆಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments