Thursday, June 25, 2026
Google search engine
Homeರಾಜ್ಯಕುಕ್ಕೆ ಸುಬ್ರಹ್ಮಣ್ಯಗೆ 2 ತಿಂಗಳಲ್ಲಿ 14.78 ಕೋಟಿ ಆದಾಯ!

ಕುಕ್ಕೆ ಸುಬ್ರಹ್ಮಣ್ಯಗೆ 2 ತಿಂಗಳಲ್ಲಿ 14.78 ಕೋಟಿ ಆದಾಯ!

ನಾಗರಾಧನೆಗೆ ಖ್ಯಾತಿ ಪಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವರ್ಷದ ಕೊನೆಯ 2 ತಿಂಗಳಲ್ಲಿ 14.78 ಕೋಟಿ ರೂ. ಆದಾಯ ಹರಿದು ಬಂದಿದ್ದು, ಹೊಸ ದಾಖಲೆ ಬರೆದಿದೆ.

2025ರ ನವೆಂಬರ್​​​ ಹಾಗೂ ಡಿಸೆಂಬರ್​​ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಿದು ಬಂದಿದ್ದು, ಈ ಅವಧಿಯಲ್ಲಿ 14 ಕೋಟಿ 77 ಲಕ್ಷ 80 ಸಾವಿರ ರೂ. ಆದಾಯ ಸಂಗ್ರಹವಾಗಿದೆ.

ನಾಗರಪಂಚಮಿ, ಕಾರ್ತಿಕ ಮಾಸ, ಡಿಸೆಂಬರ್ ತಿಂಗಳ ರಜಾಕಾಲ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಭಕ್ತರ ಹರಿವು ಗಣನೀಯವಾಗಿ ಹೆಚ್ಚಿರುವುದು ಆದಾಯ ವೃದ್ಧಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ.

ನವೆಂಬರ್ ಆದಾಯ

ನವೆಂಬರ್‌ನಲ್ಲಿ ದೇವಸ್ಥಾನವು ವಿವಿಧ ಪೂಜಾ ಸೇವೆಗಳಿಂದ 4 ಕೋಟಿ 56 ಲಕ್ಷ 21 ಸಾವಿರ 739 ಆದಾಯ ಗಳಿಸಿದೆ. ಇದೇ ಅವಧಿಯಲ್ಲಿ ಹುಂಡಿಯಿಂದ 1 ಕೋಟಿ 9 ಲಕ್ಷ 76 ಸಾವಿರ 957 ಸಂಗ್ರಹವಾಗಿದ್ದು, ಅನ್ನದಾನ ನಿಧಿಯಿಂದ 83 ಲಕ್ಷ 57 ಸಾವಿರ 769 ಆದಾಯ ಬಂದಿದೆ.

ಡಿಸೆಂಬರ್ ಆದಾಯ

ಡಿಸೆಂಬರ್‌ನಲ್ಲಿ​ಭಕ್ತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದ್ದು, ವಿವಿಧ ಸೇವೆಗಳಿಂದ 5 ಕೋಟಿ 30 ಲಕ್ಷ 18 ಸಾವಿರ 923 ಆದಾಯ ಲಭಿಸಿದೆ. ಹುಂಡಿ ಸಂಗ್ರಹವಾಗಿ 1 ಕೋಟಿ 90 ಲಕ್ಷ 63 ಸಾವಿರ 518 ರೂಪಾಯಿ ಬಂದಿದ್ದು, ಅನ್ನದಾನ ನಿಧಿಯಿಂದ 1 ಕೋಟಿ 7 ಲಕ್ಷ 41 ಸಾವಿರ 594 ಆದಾಯ ದಾಖಲಾಗಿದೆ.

ಆದಾಯ ಅಲ್ಲದೇ ದೇವಸ್ಥಾನದ ವಸತಿಗೃಹಗಳು, ಅತಿಥಿ ಸೌಕರ್ಯಗಳು ಹಾಗೂ ಇತರೆ ಮೂಲಗಳಿಂದಲೂ ಗಮನಾರ್ಹ ಪ್ರಮಾಣದ ಆದಾಯ ಲಭಿಸಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ತಿಳಿಸಿದ್ದಾರೆ.

ಭಕ್ತರ ಸಹಕಾರದಿಂದ ಸಂಗ್ರಹವಾಗುತ್ತಿರುವ ಈ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು, ಅನ್ನದಾನ ಸೇವೆ, ಮೂಲಸೌಕರ್ಯ ವೃದ್ಧಿ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುವ್ಯವಸ್ಥಿತ ಸೇವೆಗಳೊಂದಿಗೆ ಭಕ್ತರಿಗೆ ಅನುಕೂಲ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments