Thursday, May 14, 2026
Google search engine
Homeಕ್ರೀಡೆಏಷ್ಯಾಕಪ್‌ 2025: ಯುಎಇ 57 ರನ್‌ ಗೆ ಆಲೌಟ್, ಭಾರತಕ್ಕೆ 9 ವಿಕೆಟ್‌ ಜಯಭೇರಿ

ಏಷ್ಯಾಕಪ್‌ 2025: ಯುಎಇ 57 ರನ್‌ ಗೆ ಆಲೌಟ್, ಭಾರತಕ್ಕೆ 9 ವಿಕೆಟ್‌ ಜಯಭೇರಿ

ಸ್ಪಿನ್ನರ್‌ ಕುಲದೀಪ್‌ ಯಾದವ್‌ ಮತ್ತು ಶಿವಂ ದುಬೆ ಮಾರಕ ದಾಳಿ ನೆರವಿನಿಂದ ಭಾರತ ತಂಡ 9 ವಿಕೆಟ್‌ ಗಳ ಭಾರೀ ಅಂತರದಿಂದ ಯುನೈಟೆಡ್‌ ಅರಬ್‌ ಎಮಿರೆಟ್ಸ್‌ ತಂಡವನ್ನು ಸೋಲಿಸಿ ಏಷ್ಯಾಕಪ್‌ 2025 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ದುಬೈನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಯುಎಇ ತಂಡವನ್ನು 13.1 ಓವರ್‌ ಗಳಲ್ಲಿ ಆಲೌಟ್‌ ಮಾಡಿದ ಭಾರತ ತಂಡ ಕೇವಲ 4.3 ಓವರ್‌ ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಕಳೆದ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಆಡಿದ್ದ ಭಾರತ ತಂಡ ಸುಮಾರು ೭ ತಿಂಗಳ ನಂತರ ಅಖಾಡಕ್ಕೆ ಇಳಿದರೂ ಭರ್ಜರಿ ಗೆಲುವಿನೊಂದಿಗೆ ಪ್ರಶಸ್ತಿಯ ಹಾಟ್‌ ಫೇವರಿಟ್‌ ಎಂದು ನಿರೂಪಿಸಿತು. ಭಾರತದ ಪರ ಗಿಲ್‌ (ಅಜೇಯ 20) ಮತ್ತು ಸೂರ್ಯಕುಮಾರ್‌ ಯಾದವ್‌ (ಅಜೇಯ 7) ಮತ್ತು ಅಭಿಷೇಕ್‌ ಶರ್ಮ (30) ತಂಡಕ್ಕೆ ವೇಗದ ಗೆಲುವು ತಂದುಕೊಟ್ಟರು

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಯುಎಇ ತಂಡವನ್ನು ಸ್ಪಿನ್ನರ್‌ ಕುಲದೀಪ್‌ ಯಾದವ್‌ ಮತ್ತು ಶಿವಂ ದುಬೆ ಕಾಡಿದರು. ಕುಲದೀಪ್‌ ಯಾದವ್‌ 7 ರನ್‌ ನೀಡಿ 4 ವಿಕೆಟ್‌ ಕಬಳಿಸಿದರೆ, ದುಬೆ 4 ರನ್‌ ನೀಡಿ 3 ವಿಕೆಟ್‌ ಕಿತ್ತರು. ಉಳಿದ ಬುಮ್ರಾ, ಅಕ್ಸರ್‌ ಪಟೇಲ್‌ ಮತ್ತು ವರುಣ್‌ ಚಕ್ರವರ್ತಿ ತಲಾ 1 ವಿಕೆಟ್‌ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments