6
ದಾದಾಗಿರಿ-2 ರಿಯಾಲಿಟಿ ಶೋ ವಿಜೇತ ಹಾಗೂ ಕಿರುತೆರೆ ನಟ ನಿತಿನ್ ಚೌಹಾಣ್ ನಿಧನರಾಗಿದ್ದು, ಅವರಿಗೆ 35 ವರ್ಷ ವಯಸ್ಸಾಗಿತ್ತು.
ತೆರ ಯಾರ್ ಹೂಂ ಮೇ ಧಾರವಾಹಿಯಲ್ಲಿ ನಟಿಸುತ್ತಿದ್ದ ನಿತಿನ್ ಚೌಹಾಣ್ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಹ ನಟರಾದ ಸುದೀಪ್ ಸಾಹಿರ್ ಮತ್ತು ಸಯನತಿನಿ ಘೋಷ್ ದೃಢಪಡಿಸಿದ್ದಾರೆ.
ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿತಿನ್ ಮೃತಪಟ್ಟಿದ್ದು, ಯಾವ ಕಾರಣಕ್ಕಾಗಿ ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿಲ್ಲ. ನಿತಿನ್ ಶವ ಪಡೆಯಲು ತಂದೆ ಆಸ್ಪತ್ರೆಗೆ ದೌಡಾಯಿಸಿದ್ದಾರೆ.