Tuesday, September 17, 2024
Google search engine
Homeಅಪರಾಧದರ್ಶನ್ ಗ್ಯಾಂಗ್ ವಿರುದ್ಧ 3991 ಪುಟ, 231 ಸಾಕ್ಷ್ಯಗಳ ಚಾರ್ಜ್ ಶೀಟ್ ಸಲ್ಲಿಕೆ

ದರ್ಶನ್ ಗ್ಯಾಂಗ್ ವಿರುದ್ಧ 3991 ಪುಟ, 231 ಸಾಕ್ಷ್ಯಗಳ ಚಾರ್ಜ್ ಶೀಟ್ ಸಲ್ಲಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಾರುತೇಶ್ ಪರಸುರಾಮ್ ಮೋಹಿತ್ ಅವರಿಗೆ ಬಾಕ್ಸ್‌ನಲ್ಲಿ ಚಾರ್ಜ್‌ಶೀಟ್‌ ವಿವರಗಳ ದಾಖಲೆಗಲನ್ನು ಇರಿಸಿ ಪೊಲೀಸರು ಸಲ್ಲಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಒಟ್ಟಾರೆ 231 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. 27 ಜನ ಸಾಕ್ಷಿ, ನ್ಯಾಯಾಧೀಶರ ಮುಂದೆ 164, ಪ್ರತ್ಯೇಕ್ಷ ಸಾಕ್ಷಿದಾರರು ಮೂರು, ಐ ವಿಟ್ನೆಸ್ 03, ಸಿಎಫ್‌ಎಸ್‌ಎಲ್ 8, 59 ಮಂದಿ ಪಂಚರ ಸಾಕ್ಷಿ, ಪೊಲೀಸರು – 56, ಸರ್ಕಾರಿ ಅಧಿಕಾರಿಗಳು – 8, ಎಫ್‌ಎಸ್‌ಎಲ್, ಸಿಎಫ್‌ಎಸ್‌ಎಲ್ 08, ಪ್ರತ್ಯಕ್ಷ ಸಾಕ್ಷಿಗಳು 03, ಪೊಲೀಸ್ರ ಎದುರು ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ವ್ಯಕ್ತಿಗಳು 97, ನ್ಯಾಯಾಧೀಶರ ಮುಂದೆ 164 ಹೇಳಿಕೆಯನ್ನು 27 ಮಂದಿ ದಾಖಲಿಸಿದ್ದಾರೆ.

ಪವಿತ್ರಗೌಡ -ಎ1, ದರ್ಶನ್ (Darshan) ಎ-2, 14 ಜನರ ಮೇಲೆ ಕೊಲೆ ಆರೋಪ, 14 ಜನರು ಮೇಲೂ ಅಪಹರಣ ಮತ್ತು ಕೊಲೆ ಆರೋಪ, ಮೂರು ಆರೋಪಿಗಳ ಮೇಲೆ ಮಾತ್ರ ಸಾಕ್ಷ್ಯ ನಾಶ ಕೇಸ್ ದಾಖಲಿಸಿರುವ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವಮೂರ್ತಿ, ನಿಖಿಲ್ ನಾಯಕ್ ಈ ಮೂವರ ಮೇಲೆ ಮಾತ್ರ ಸಾಕ್ಷಿ ನಾಶ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments